More

    ವಿದ್ಯುತ್ ದರ ಕೊಂಚ ಅಗ್ಗ: ಇಳಿಕೆ ಆಯಿತು ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕ, ಹೊಸ ವರ್ಷದ ಕೊಡುಗೆ

    ಬೆಂಗಳೂರು: ಆರ್ಥಿಕ ಹಿಂಜರಿತ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್​ಸಿ) ಹೊಸ ವರ್ಷದ ಕಿರುಕಾಣಿಕೆ ನೀಡಿದೆ. ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಅಲ್ಪ ಪ್ರಮಾಣದಲ್ಲಿ ತಗ್ಗಿಸುವ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ತಾತ್ಕಾಲಿಕವಾಗಿ ಇಳಿಸಿದೆ.

    ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕವನ್ನು ಕೆಇಆರ್​ಸಿ ಶೇ.60 ತಗ್ಗಿಸಿದೆ. 2020ರ ಜನವರಿಯಿಂದ ಮಾರ್ಚ್​ವರೆಗೆ ಮಾತ್ರ ಈ ದರ ಕಡಿತ ಅನ್ವಯವಾಗಲಿದೆ.

    ಕೆಇಆರ್​ಸಿ ಆದೇಶದ ಪ್ರಕಾರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಈ ಶುಲ್ಕ ಪ್ರತಿ ಯೂನಿಟ್​ಗೆ 12 ಪೈಸೆಗೆ ನಿಗದಿಯಾಗಿದೆ. ಅದೇ ರೀತಿ ಚೆಸ್ಕಾಂ- 9, ಹೆಸ್ಕಾಂ- 5, ಮೆಸ್ಕಾಂ ಹಾಗೂ ಜೆಸ್ಕಾಂ ತಲಾ ಏಳು ಪೈಸೆ ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡಬಹುದಾಗಿದೆ.

    ಜೂನ್​ನಲ್ಲಿ ಆಗಿತ್ತು: ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕವನ್ನು ಕೆಇಆರ್​ಸಿ ಜೂನ್​ನಲ್ಲಿ ಏರಿಸಿದ್ದರಿಂದ ಬೆಸ್ಕಾಂ ವ್ಯಾಪ್ತಿ ಗ್ರಾಹಕರಿಗೆ ಪ್ರತಿ ಯೂನಿಟ್​ಗೆ 29 ಪೈಸೆ ನಿಗದಿಯಾಗಿತ್ತು. ಏರಿಸಿದ್ದ ಶುಲ್ಕವನ್ನು ಮತ್ತೆ ಇಳಿಸಿದ್ದರಿಂದ ಬೆಸ್ಕಾಂನ ಪ್ರತಿ ಯೂನಿಟ್ ಶುಲ್ಕ 12 ಪೈಸೆಗೆ ಇಳಿದಿದೆ. ಹಾಗೆಯೇ ಎಲ್ಲ ಎಸ್ಕಾಂ ವ್ಯಾಪ್ತಿ ಗ್ರಾಹಕರಿಗೂ ತಾತ್ಕಾಲಿಕ ಇಳಿಕೆಯ ಲಾಭ ಲಭಿಸಲಿದೆ. ಎಸ್ಕಾಂಗಳು ಸಲ್ಲಿಸಿದ ಪ್ರಸ್ತಾವನೆಗಳನ್ನು ಕೆಇಆರ್​ಸಿ ಪರಿಶೀಲಿಸಿ ಏರಿಸಿದ್ದ ಶೇ.60 ಶುಲ್ಕ ಮತ್ತೆ ತಗ್ಗಿಸಿದೆ.

    ಶುಲ್ಕ ಕಡಿತ ಹೇಗೆ?

    ವಿದ್ಯುತ್ ಉತ್ಪಾದಿಸಿ ಪೂರೈಸುವ ನಿಗಮಗಳು ವಿಧಿಸುವ ದರ, ವಿದ್ಯುತ್ ಖರೀದಿಗೆ ಮಾಡಿದ ವೆಚ್ಚವನ್ನು ಎಸ್ಕಾಂಗಳು ತುಲನೆ ಮಾಡುತ್ತವೆ. ನಂತರ ಗ್ರಾಹಕರಿಗೆ ವಿಧಿಸಬೇಕಾದ ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕದ ಪ್ರಸ್ತಾವನೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕೆಇಆರ್​ಸಿಗೆ ಸಲ್ಲಿಸುತ್ತವೆ. ಕೆಇಆರ್​ಸಿ ಸಭೆ ಸೇರಿ ಪ್ರಸ್ತಾವನೆಯನ್ನು ವಿಸõತವಾಗಿ ರ್ಚಚಿಸುತ್ತದೆ. ಆಯೋಗ ಕಾಯ್ದೆ ರೀತ್ಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅಂತಿಮವಾಗಿ ಪ್ರತಿ ಯೂನಿಟ್​ಗೆ ಗ್ರಾಹಕರಿಂದ ಎಸ್ಕಾಂಗಳು ಸಂಗ್ರಹಿಸಬೇಕಾದ ಶುಲ್ಕ ನಿಗದಿಪಡಿಸುತ್ತದೆ. ಗ್ರಾಹಕರು ಹಾಗೂ ಎಸ್ಕಾಂಗಳ ಹಿತ ಗಮನಿಸಿಯೇ ಆಯೋಗ ಈ ತೀರ್ಮಾನ ಕೈಗೊಳ್ಳುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts