More

    ಎಲೆಕ್ಟ್ರಿಕಲ್ ಕಾರು ತಯಾರಿಸಿದ ಕುಂದಾನಗರಿ ಕುವರ

    ಬೆಳಗಾವಿ: ಗುಜರಿಯಲ್ಲಿದ್ದ ಹಳೆಯ ಕಾರುಗಳ ಬಿಡಿಭಾಗಗಳನ್ನು ಬಳಸಿ ಕಾಸ್ಟ್ಟ್‌ಮೈಸ್ಡ್ ಎಲೆಕ್ಟ್ರಿಕಲ್ ಕಾರು ವಿನ್ಯಾಸಗೊಳಿಸುವ ಮೂಲಕ ಕುಂದಾನಗರಿಯ ಕುವರ, ದೇಶದಲ್ಲಿ ಎಲೆೆಕ್ಟ್ರಿಕಲ್ ಕಾರು ತಯಾರಿಸಿದ 15 ವರ್ಷದೊಳಗಿನ ವಯೋಮಾನದವರಲ್ಲಿ ಮೊದಲಿಗ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

    ಬೆಳಗಾವಿಯ ಕೆಎಲ್‌ಎಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅನ್ಶ್ಶರಾವ್, ಈ ಸಾಧನೆ ಮಾಡಿದ ವಿದ್ಯಾರ್ಥಿ. ಅನ್ಶ ವಿನ್ಯಾಸಗೊಳಿಸಿದ ಎಲೆಕ್ಟ್ರಿಕ್ ಕಾರು ಅಂತರ್ಗತ ಕ್ಯಾಮರಾ ಒಳಗೊಂಡಿದೆ. ಹಿಂಬದಿಯ ನೋಟಕ್ಕೆ ಕನ್ನಡಿಗಳ ಅಗತ್ಯವಿಲ್ಲ ಮತ್ತು ತೊಂದರೆಯಲ್ಲಿದ್ದಾಗ ಎಚ್ಚರಿಕೆಯ ಶಬ್ದವನ್ನೂ ಹೊಂದಿರುವ ಆ್ಯಂಟಿ ಥೆಪ್ಟ್ ವೈಶಿಷ್ಟ್ಯವಿದೆ.

    ಕಾರಿನಲ್ಲಿ ಇಬ್ಬರು ಪ್ರಯಾಣಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇದ್ದು, 4 ರಿಂದ 5 ಗಂಟೆಗಳ ವರೆಗೆ ಚಾರ್ಜ್ ಮಾಡಿದರೆ ಗಂಟೆಗೆ 70 ಕಿ.ಮೀ ದೂರ ಕ್ರಮಿಸಬಲ್ಲದು. ಇನ್ನೂ ಹಲವು ವೈಶಿಷ್ಟೃ ಸೇರಿಸಲು ಮುಂದಾಗಿರುವ ಅನ್ಶ, ಸೋಲಾರ್ ಮೂಲಕ ಚಾರ್ಜ್ ಮಾಡುವ ವ್ಯವಸ್ಥೆಗೆ ಸೌರ ಫಲಕ ಅಳವಡಿಸಲು ಯೋಜನೆ ಹಾಕಿಕೊಂಡಿದ್ದಾನೆ. ಜನರ ಅನುಕೂಲಕ್ಕಾಗಿ ಶೀಘ್ರ ಮಾರುಕಟ್ಟೆಗೆ ಬರಲೆಂದು ಖಾಸಗಿ ಕಂಪನಿಗಳಿಗೆ ನೀಡಲು ಯೋಜನೆ ಹಾಕಿಕೊಂಡಿದ್ದಾನೆ.

    ಚಿಕ್ಕ ವಯಸ್ಸಿನಿಂದಲೂ ವಾಹನಗಳ ಮೇಲೆ ಆಕರ್ಷಿತನಾಗಿದ್ದೆ. ತಂದೆ ವಿನಯರಾವ್ ಅವರು ಸೂಕ್ತ ಸಹಕಾರ ಮತ್ತು ಸಲಹೆ ನೀಡಿದರು. ಶಾಲೆಯ ಶಿಕ್ಷಕರು ನೀಡಿರುವ ಮಾರ್ಗದರ್ಶನವೂ ಕಾರು ವಿನ್ಯಾಸಗೊಳಿಸಲು ಸಹಾಯವಾಯಿತು.
    | ಅನ್ಶರಾವ್ ಕಾರು ವಿನ್ಯಾಸಗೊಳಿಸಿದ ವಿದ್ಯಾರ್ಥಿ

    ವಿದ್ಯಾರ್ಥಿಯ ಈ ಸಾಧನೆ ನಿಜಕ್ಕೂ ಶಾಲೆಗೆ ಹೆಮ್ಮೆಯ ಕ್ಷಣ. ಹೊಸತನವನ್ನು ಕಂಡುಕೊಳ್ಳುವಲ್ಲಿ ಸದಾ ಹಂಬಲಿಸುತ್ತಿದ್ದ ಆತನ ತುಡಿತ ಇತರರಿಗೆ ಮಾದರಿಯಾಗಿದ್ದು, ಭಾರತೀಯ ಉದ್ಯಮದಲ್ಲಿ ಅನ್ಶ ಬೆಳೆಯಲಿ.
    | ದೀಪ್ತಿ ಇಂಗಳೆ ಪ್ರಾಚಾರ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts