More

    ಕೋವಿಡ್ ಮಾನದಂಡ ಅನುಸರಿಸಿ ಚುನಾವಣೆ

    ಕಾಸರಗೋಡು: ತ್ರಿಸ್ತರ ಪಂಚಾಯಿತಿ ಚುನಾವಣೆಗಿರುವ ಎಲ್ಲ ಸಿದ್ಧತೆ ಪೂರ್ತಿಗೊಂಡಿದ್ದು, ಕೋವಿಡ್ 19 ಮಾನದಂಡದೊಂದಿಗೆ ಡಿ.14ರಂದು ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಜಿಲ್ಲೆಯಲ್ಲಿ 10,48,566 ಮತದಾರರಿದ್ದು, ಇವರಲ್ಲಿ 79 ಅನಿವಾಸಿ ಭಾರತೀಯರು. 664 ವಾರ್ಡುಗಳಲ್ಲಿ 1,287 ಮತದಾನ ಕೇಂದ್ರಗಳಿವೆ. ಒಟ್ಟು 1,991 ಸ್ಪರ್ಧಾಳುಗಳಿದ್ದಾರೆ ಎಂದರು.

    ಕೋವಿಡ್ -19 ಹಿನ್ನೆಲೆಯಲ್ಲಿ ಜನಸಂದಣಿ ಕಡಿಮೆ ಮಾಡಲು ಪೋಲಿಂಗ್ ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ವಿತರಣೆ ಬೆಳಗ್ಗೆ 8ರಿಂದ 9.30, 9.30ರಿಂದ 11, 11ರಿಂದ ಮಧ್ಯಾಹ್ನ 12.30ರವರೆಗೆ ಮೂರು ಹಂತದಲ್ಲಿ ವಿತರಿಸಲಾಗುವುದು. ಇತರ ರಾಜ್ಯಗಳಿಂದ ಮತದಾನಕ್ಕೆ ಆಗಮಿಸುವ ಜಿಲ್ಲೆಯ ಮತದಾರರು ಆ್ಯಂಟಿಜೆನ್ ಟೆಸ್ಟ್ ಮಾಡುವಂತೆ ಮನವಿ ಮಾಡಿದ್ದು, ಗಡಿ ಪ್ರದೇಶದಲ್ಲಿ ಇದಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು.

    ಕೋವಿಡ್ ಪಾಸಿಟಿವ್ ಆದವರಿಗೆ ಮತ್ತು ಕ್ವಾರೆಂಟೈನ್ ಪ್ರವೇಶಿಸುವ ಮಂದಿಗಾಗಿ ಈ ಬಾರಿ ವಿಶೇಷ ಅಂಚೆ ಮತದಾನ ಸೌಲಭ್ಯ ಏರ್ಪಡಿಸಲಾಗಿದ್ದು, ಈ ಸಂಬಂಧ ಚಟುವಟಿಕೆಗಳು ಪ್ರಗತಿಯಲ್ಲಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 30 ಮಂದಿ ವಿಶೇಷ ಪೋಲಿಂಗ್ ಅಧಿಕಾರಿಗಳನ್ನು, 30 ಪೋಲಿಂಗ್ ಸಹಾಯಕರನ್ನು ನೇಮಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಉಪಸ್ಥಿತರಿದ್ದರು.

    ಮತದಾನ ಹಾಗೂ ಮತ ಎಣಿಕೆ ಕಾರ್ಯಗಳನ್ನು ಶಾಂತಿಯುತವಾಗಿ ಮಾಡಲು ಸಹಾಯವಾಗುವ ರೀತಿಯಲ್ಲಿ ಜಿಲ್ಲೆಯಲ್ಲಿ ಸುರಕ್ಷಾ ವ್ಯವಸ್ಥೆ ಚುರುಕುಗೊಳಿಸಲಾಗಿದೆ. ಇದಕ್ಕಾಗಿ 10 ಡಿವೈಎಸ್‌ಪಿಗಳು, 32ಇನ್‌ಸ್ಪೆಕ್ಟರ್‌ಗಳು, 149 ಎಸ್‌ಐ, ಎಎಸ್‌ಐಗಳು, 2,366 ಸಿವಿಲ್ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು.
    -ಡಿ.ಶಿಲ್ಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts