More

    ವರ್ಷಾಂತ್ಯಕ್ಕೆ 4 ನಗರ ಸ್ಥಳಿಯಸಂಸ್ಥೆಗೆ ಚುನಾವಣೆ

    ಬೆಂಗಳೂರು: ಅವಧಿ ಪೂರ್ಣಗೊಳಿಸಿರುವ ತಲಾ ಎರಡು ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

    ಕಲಬುರಗಿ ಜಿಲ್ಲೆಯ ವಾಡಿ ಪುರಸಭೆ (23 ವಾರ್ಡ್), ದಕ್ಷಿಣಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆ (23 ವಾರ್ಡ್) ಹಾಗೂ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತಿ (16 ವಾರ್ಡ್), ಹುಣಸಗಿ ಪಟ್ಟಣ ಪಂಚಾಯಿತಿಗಳಿಗೆ (16 ವಾರ್ಡ್) ಈ ತಿಂಗಳ 29ರಂದು ಮತದಾನಕ್ಕೆ ದಿನ ನಿಗದಿ ಮಾಡಲಾಗಿದೆ. ಇದೇ ದಿನದಂದು ವಿವಿಧ ಕಾರಣಗಳಿಂದ ತೆರವಾಗಿರುವ 19 ಜಿಲ್ಲೆಗಳಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 36 ವಾರ್ಡ್‌ಗಳಿಗೆ ಉಪ ಚುನಾವಣೆ ನಡೆಯಲಿದೆ.

    ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಲು ಶುಕ್ರವಾರ (ಡಿ.8) ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ಅಂದಿನಿಂದಲೇ ನೀತಿ ಸಂಹಿತೆ ಆಯಾ ಪೌರಸಂಸ್ಥೆಗಳಿಗೆ ಮಾತ್ರ ಅನ್ವಯವಾಗಲಿದೆ. ಚುನಾವಣಾ ಗರಿಷ್ಠ ವೆಚ್ಚ ಮಿತಿ ಪುರಸಭೆ ಅಭ್ಯರ್ಥಿಗಳಿಗೆ ತಲಾ 1.5 ಲಕ್ಷ ರೂ. ಹಾಗೂ ಪಟ್ಟಣ ಪಂಚಾಯತಿ ಅಭ್ಯರ್ಥಿಗಳಿಗೆ ತಲಾ 1 ಲಕ್ಷ ರೂ. ನಿಗದಿ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

    ಚುನಾವಣಾ ವೇಳಾಪಟ್ಟಿ ವಿವರ:
    * ನಾಮಪತ್ರ ಸಲ್ಲಿಕೆ ಆರಂಭದ ದಿನ – ಡಿ.8
    * ನಾಮಪತ್ರಿಕೆ ಸಲ್ಲಿಕೆಗೆ ಕಡೇ ದಿನ – ಡಿ.15
    * ನಾಮಪತ್ರ ಪರಿಶೀಲನೆ ಕಾರ್ಯ – ಡಿ.16
    * ಉಮೇದುವಾರಿಕೆ ವಾಪಸ್ – ಡಿ.18
    * ಮತದಾನ ನಡೆಯುವ ದಿನ – ಡಿ.27
    * ಮರು ಮತದಾನದ ದಿನ – ಡಿ.29
    * ಮತ ಎಣಿಕೆ, ಬೆ.8ರಿಂದ – ಡಿ.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts