More

    ಸೆಸ್ಕ್ ನೌಕರರ ಸಂಘಕ್ಕೆ ಪ್ರತಿನಿಧಿಗಳ ಆಯ್ಕೆ

    ಹನೂರು: ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿಯಲ್ಲಿ ಬುಧವಾರ ನಡೆದ ಸೆಸ್ಕ್ ನೌಕರರ ಸಂಘದ 22ನೇ ತ್ರೈಮಾಸಿಕ ಮಹಾಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆ ಚುನಾವಣೆಯಲ್ಲಿ ಅಬ್ದುಲ್ ಜಮೀಲ್ ಹಾಗೂ ಮಹೇಶ್ ಆಯ್ಕೆಯಾದರು.


    2 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮುನಿಸೇಠ್, ನಟರಾಜು, ಅಬ್ದುಲ್ ಜಮೀಲ್ ಹಾಗೂ ಮಹೇಶ್ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಚುನಾವಣೆಯಲ್ಲಿ 82 ಸದಸ್ಯರ ಪೈಕಿ 72 ಜನರು ಮತ ಚಲಾಯಿಸಿದರು. ಇದರಲ್ಲಿ ಅಬ್ದುಲ್ ಜಮೀಲ್ 46 ಮತಗಳನ್ನು ಪಡೆದರೆ, ಮಹೇಶ್ 45 ಮತಗಳನ್ನು ಪಡೆಯುವುದರ ಮೂಲಕ ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ವಕೀಲ ಮಹದೇವಸ್ವಾಮಿ ಕಾರ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts