More

    ಅಕ್ಕಿಆಲೂರ ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

    ಅಕ್ಕಿಆಲೂರ: ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಥಳೀಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಆಯೋಜಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಕ್ಬುಲ್ ಸಾಬ್ ರೂಸ್ತುಮಖಾನವರ ಪಠಾಣ ಅಧ್ಯಕ್ಷರಾಗಿ ಮತ್ತು ಶೇಖವ್ವ ಬಸವಂತಪ್ಪ ತಳವಾರ ಉಪಾಧ್ಯಕ್ಷರಾಗಿ ಆಯ್ಕೆಯಾದರು.

    31 ಸದಸ್ಯರ ಬಲದ ಅಕ್ಕಿಆಲೂರ ಗ್ರಾಪಂನ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್​ಟಿ ಮೀಸಲಾತಿ ಇತ್ತು. 17 ಕಾಂಗ್ರೆಸ್ ಮತ್ತು 14 ಬಿಜೆಪಿ ಬೆಂಬಲಿತ ಸದಸ್ಯರ ಬಲ ಇದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಮಕ್ಬುಲ್ ಸಾಬ್ ಪಠಾಣ ಮತ್ತು ಬಿಜೆಪಿಯಿಂದ ಅಲ್ತಾಫ್ ಹಮೀದಸಾಬ್ ಪಾಟೀಲ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶೇಖವ್ವ ತಳವಾರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಮತದಾನದಲ್ಲಿ ಮಕ್ಬುಲ್ ಸಾಬ್ ಪಠಾಣ 20 ಮತಗಳನ್ನು ಪಡೆದು ಅಧ್ಯಕ್ಷರಾದರೆ, ಅಲ್ತಾಫ್ ಪಾಟೀಲ 11 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಶೇಖವ್ವ ತಳವಾರ ಅವಿರೋಧವಾಗಿ ಆಯ್ಕೆಯಾದರು.

    ಚುನಾವಣೆ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಮುಖಂಡರಾದ ಟಾಕನಗೌಡ ಪಾಟೀಲ, ಎಂ.ಎಚ್ ಬ್ಯಾಡಗಿ, ಸದಾಶಿವ ಬೆಲ್ಲದ, ಯಾಸೀರಖಾನ ಪಠಾಣ, ಸತ್ತಾರಸಾಬ್ ಅರಳೇಶ್ವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts