More

    ಶಿರಹಟ್ಟಿಯಲ್ಲಿ ಐಪಿಎಲ್ ಗಿಂತಲೂ ಎಸ್ ಪಿ‌ಎಲ್ (ಶಿರಹಟ್ಟಿ ಪ್ರಿಮಿಯರ್ ಲೀಗ್) ಕಾವು ಬಲು ಜೋರು.

    ಶಿವಾನಂದ ಹಿರೇಮಠ ಗದಗ
    ಕ್ರಿಕೆಟ್​ ವಿಚಾರದಲ್ಲಿ ಐಪಿಎಲ್​ ಜ್ವರ ಹೆಚ್ಚಿದ ಹಾಗೆ ಚುನಾವಣಾ ವಿಚಾರದಲ್ಲಿ ಶಿರಹಟ್ಟಿ ಕ್ಷೇತ್ರವು ಪ್ರಿಮಿಯರ್​ ಲೀಗ್​(ಎಸ್​ಪಿಎಲ್​) ನಂತೆ ಬಾಸವಾಗುತ್ತಿದೆ. ದಿನೇ ದಿನೆ ಚುನಾವಣಾ ಕಾವು ಉಲ್ಭಣಗೊಳ್ಳುತ್ತಿದೆ. ಕಾಂಗ್ರೆಸ್ಸಿಂತಲೂ ಬಿಜೆಪಿಯಲ್ಲೇ ಜ್ವರ ಹೆಚ್ಚಾಗುತ್ತಿದ್ದು, ಎಸ್​ಪಿಎಲ್ ನಲ್ಲಿ​ ವಿರಾಟ್​ ಕೋಹ್ಲಿ ಯಾರು? ಎಂ.ಎಸ್​. ಧೋನಿ ಯಾರು? ಮ್ಯಾಚ್​ ವಿನ್ನರ್​ ಯಾರು? ಎಂಬುದನ್ನು ನಿರ್ಧರಿಸಲು ಬಿಜೆಪಿ ಕಾರ್ಯಕರ್ತರಿಗೆ ಸಾಧ್ಯವಾಗುತ್ತಿಲ್ಲ.
    ಬಿಜೆಪಿ ಟೀಂ ನಲ್ಲಿ “ಟಿಕೆಟ್​’ ಎಂಬ ಟಾಸ್​ ಗೆದ್ದರೂ ಡಾ. ಚಂದ್ರು ಲಮಾಣಿಗೆ ಬ್ಯಾಟಿಂಗ್​/ಫಿಲ್ಡೀಂಗ್​ ಆಯ್ದುಕೊಳ್ಳಲು ಕಷ್ಟವಾಗುತ್ತಿದೆ. ಕಾಮೋರ್ಡದ ಮಳೆ ಏಕಾಏಕಿ ಸುರಿಯುವಂತೆ ಲೋಕಾಯುಕ್ತ ಪ್ರಕರಣ ಹಿನ್ನೆಲೆ ಅಂಗೀಕಾರವಾಗದ ಸರ್ಕಾರಿ ಹುದ್ದೆ ರಾಜಿನಾಮೆ ವಿಚಾರ ಇದ್ದಕ್ಕಿದ್ದಂತೆ ಬುಗಿಲೆದ್ದು ಬಿಜೆಪಿ ಟೀಂ ನಲ್ಲೇ ವಿರೋಧಿ ಬಳಗಕ್ಕೆ ಅಸ್ತ್ರವಾಗುತ್ತಿದೆ. ಟಿಕೆಟ್​ ಎಂಬ “ಟಾಸ್​’ ಗೆಲ್ಲುವುದಕ್ಕೂ ಮೊದಲು ಬಿಜೆಪಿ ಟೀಮಿನ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಧಾರ ಕೈಗೊಂಡಿದ್ದೇ ಇದಕ್ಕೆ ಮೂಲ ಕಾರಣ ಎಂದು ಕ್ಷೇತ್ರದಲ್ಲಿ ವಿಶ್ಲೇಷಿಸಲಾಗುತ್ತಿದೆ.
    ಕಾಮೋರ್ಡದ ಮಳೆ(ಅಂಗೀಕಾರವಾಗದ ರಾಜೀನಾಮೆ) ಕಾರಣ ಮ್ಯಾಚ್​ (ಚುನಾವಣೆ) ಆಡಲು ನಾವು ಸಿದ್ಧರಿಲ್ಲ. ಈಗಿನ ಟಾಸ್​ ರದ್ದು ಪಡಿಸಿ, ನಾಳೆಗೆ ಮತ್ತೊಮ್ಮೆ ಟಾಸ್​ ಮಾಡಿ. ಒಟ್ಟಾಗಿ ಎಲ್ಲರೂ ಚುನಾವಣೆ ಎಂಬ ಮ್ಯಾಚ್​ ಆಡುತ್ತೇವೆ ಎಂದು ಬಿಜೆಪಿ ಟೀಂ ನ ಇತರೆ ಎಲ್ಲ ಆಕಾಂ ಸದಸ್ಯರು ಎಸ್​ಪಿಎಲ್​ ಮುಖಂಡರಿಗೆ(ಬಿಜೆಪಿ ಹೈಕಮಾಂಡ್​) ಮನವಿ ಸಲ್ಲಿಸಲು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಇದು ಕಾಮೋರ್ಡದ ಮಳೆಯಲ್ಲ ಬದಲಾಗಿ ತುಂತುರು ಮಳೆ. ನನ್ನ ಮೇಲಿನ ಆರೋಪಗಳು ನಿರಾಧಾರ. ಟಾಸ್​ ಗೆದ್ದಿದ್ದೇನೆ ನನ್ನ ಜತೆಗೂ ಟೀಂ ಸದಸ್ಯರಿದ್ದಾರೆ. ಚುನಾವಣೆ ಎಂಬ ಮ್ಯಾಚ್​ ಆಡಲು ಸನ್ನದ್ಧವಾಗಿದ್ದೇನೆ ಎಂದು ಎಸ್​ಪಿಎಲ್​ ಮುಖಂಡರಿಗೆ ಡಾ. ಚಂದ್ರು ಲಮಾಣಿ ಮನವಿ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ.
    ಶಿರಹಟ್ಟಿ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ವಿಚಾರ ತೀವ್ರ ಗೊಂದಲ ಸೃಷ್ಟಿಸಿದೆ. ಪ್ರಬಲ ಆಕಾಂಗಳನ್ನು ಮೀರಿ ಡಾ. ಚಂದ್ರು ಲಮಾಣಿ ಬಿಜೆಪಿ ಟಿಕೆಟ್​ ಪಡೆದಿದ್ದರಿಂದ ವಿರೋಧಿ ಬಳಗ ಎಲ್ಲವೂ ಒಂದಾಗಿತ್ತು. ಪಕ್ಷೇತರ ಅಭ್ಯಥಿರ್ ಕಣಕ್ಕಿಳಿಸುವ ಯೋಜನೆ ರೂಪಿಸಿಕೊಂಡಿತ್ತು. ಆದರೆ, ಸರ್ಕಾರಿ ಹುದ್ದೆಯಲ್ಲಿದ್ದ ಸಂದರ್ಭದಲ್ಲಿ ಲೋಕಾ ಪ್ರಕರಣವಾಗಿ, ರಾಜೀನಾಮೆ ನೀಡಿದ ನಂತರವೂ ಚಂದ್ರು ಅವರ ರಾಜೀನಾಮೆ ಆರೋಗ್ಯ ಇಲಾಖೆಯಿಂದ ಅಂಗೀಕಾರ ಆಗದ ಪ್ರಕರಣ ಡಾ. ಚಂದ್ರು ಅವರಿಗೆ ಮುಳುವಾಗುತ್ತಿದೆ. ಟಿಕೆಟ್​ ಘೋಷಣೆ ಆದರೂ ಬಿ ಾರಂ ಪಡೆಯುವ ಸಂಕಷ್ಟ ಎದುರಾಗಿದೆ. ಚಂದ್ರು ಲಮಾಣಿ ಮತ್ತು ರಾಮಣ್ಣ ಲಮಾಣಿ ಬೆಂಬಲಿಗರು ಪ್ರತ್ಯೇಕ ಸಭೆಗಳ ಮೂಲಕ ವಿರೋಧಿ ಬಳಗವನ್ನು ಹೆಣೆಯಲು ತಂತ್ರ ರೂಪಿಸುತ್ತಿದ್ದಾರೆ. ಚಂದ್ರು ಲಮಾಣಿಗೆ ಕಾನೂನು ತೋಡಕಾಗಿದ್ದು, ಲೋಕಾ ಪ್ರಕರಣ ಇತ್ಯರ್ಥ ಆಗುವವರೆಗೆ ರಾಜೀನಾಮೆ ಅಂಗೀಕಾರ ಆಗಲು ಹೇಗೆ ಸಾಧ್ಯ ಎಂಬುದನ್ನು ವಿರೋಧಿ ಬಳಗ ಪ್ರತಿಪಾದಿಸುತ್ತಿದೆ. ಅದನ್ನೇ ಸುದ್ದಿಗೋಷ್ಠಿ ಮೂಲಕ ಪೂರ್ಣಾಜಿ ಕರಾಟೆ ಆಪಾದನೆ ಮಾಡಿದರು.
    ಇನ್ನೂ, ಪ್ರೊಬೆಷನರಿ ಅವಧಿಯಲ್ಲಿ ನಡೆದ ಪ್ರಕರಣ ಇದಾಗಿದ್ದು ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ ಎಂದು ಚಂದ್ರು ಲಮಾಣಿ ಮತ್ತು ಅವರ ಆಪ್ತರ ಬಳಗ ಕ್ಷೇತ್ರದಲ್ಲಿ ಸ್ಪಷ್ಟಣೆ ನೀಡುತ್ತಿದೆ. ಈ ನಡುವೆ ಡಾ. ಚಂದ್ರು ಲಮಾಣಿ ಮತ್ತು ಅಂದಿನ ಜಿಲ್ಲಾ ಆರೋಗ್ಯಾಧಿಕಾರಿ ಬಸರಿಗಿಡದ ಅವರ ಮೇಲೆ ಏ.26 ರಂದು ಲೋಕಾಯುಕ್ತದಲ್ಲಿ ವಿಚಾರಣೆ ಇದೆ ಎಂಬ ದಾಖಲೆಯೊಂದು ಜಿಲ್ಲೆಯಾದ್ಯಂತ ವಾಟ್ಸಪ್​ ನಲ್ಲಿ ಹರಿದಾಡುತ್ತಿದ್ದು, ಯಾವುದು ಸತ್ಯ? ಯಾವುದು ಸುಳ್ಳು? ಎಂಬ ಗೊಂದಲ ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿದೆ. ಈ ಬಗ್ಗೆ ಸ್ಪಷ್ಟಣೆ ಕೇಳಲು ಕರೆ ಮಾಡಿದರೆ ಚಂದ್ರು ಲಮಾಣಿ ೋನ್​ ಸ್ವೀಚ್​ ಆ್​ ಆಗಿದೆ.

    ಕಾಂಗ್ರೆಸ್​ ಟಿಕೆಟ್​ ಘೋಷಣೆ:
    ಸುಜಾತಾ ದೊಡ್ಡಮನಿಗೆ ಶಿರಹಟ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಶನಿವಾರ ಘೋಷಣೆಯಾಗಿದೆ. ಟಿಕೆಟ್​ ಪಡೆಯುವ ವಿಚಾರವಾಗಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿಗೆ ಪ್ರಬಲ ಪೈಪೋಟಿ ನೀಡಿದ್ದರು. ಟಿಕೆಟ್​ ಘೋಷಣೆಗೂ ಮೊದಲೇ ಟಿಕೆಟ್​ ಕೈತಪ್ಪಿದನ್ನು ಅರಿತ ರಾಮಕೃಷ್ಣ ಅವರು ಬಹಿರಂಗ ಸಮಾವೇಶ ಮಾಡಿ ಪಕ್ಷೇತರ ನಿಲ್ಲುವುದಾಗಿ ಘೋಷಿಸಿದ್ದರು. ಶನಿವಾರ ಸುಜಾತಾ ದೊಡ್ಡಮನಿ ಅಧಿಕೃತ ಅಭ್ಯಥಿರ್ ಎಂದು ಘೋಷಣೆ ಆದ ನಂತರ ಏ.17 ರಂದು ಪಕ್ಷೇತರ ನಾಮಪತ್ರ ಸಲ್ಲಿಸುವುದಾಗಿ ರಾಮಕೃಷ್ಣ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts