More

    ಚಾಲಕರೇ ಎಚ್ಚರ; ನಿಮ್ಮ ಆಟೋದಲ್ಲಿರುವ ರಾಜಕೀಯ ಪಕ್ಷಗಳ ಪೋಸ್ಟರ್​ ತೆಗೆಯದಿದ್ದರೆ ಬೀಳಲಿದೆ ದಂಡ

    ಬೆಂಗಳೂರು: ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಆಟೋ ಚಾಲಕರಿಗೆ ಎರಡು ದಿನಗಳಿಂದ ಸಂಚಾರ ಪೊಲೀಸರು ಬಿಗ್​ ಶಾಕ್​ ನೀಡಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲಿ ಆಟೋಗಳ ಮೇಲೆ ರಾಜಕೀಯ ಪಕ್ಷಗಳು ಮತ್ತು ಮುಖಂಡರು ತಮ್ಮ ಪರವಾದ ಪೋಸ್ಟರ್​ಗಳನ್ನು ಅಂಟಿಸಿಕೊಂಡು ಬಾಡಿಗೆ ಓಡಿಸುವ ಜತೆಗೆ ಪ್ರಚಾರದಲ್ಲಿ ತೊಡಗಿದ್ದರು. ಇದಕ್ಕೆ ಪ್ರತಿಯಾಗಿ ಚಾಲಕರಿಗೆ ಇಂತಿಷ್ಟು ಹಣ ಸಿಗುತ್ತಿತ್ತು.

    ಇದನ್ನೂ ಓದಿ: ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ… ನಾನು ಅಂದಿನಿಂದ ಹೀಗೆಯೇ ಓಡಾಡುತ್ತಿದ್ದೇನೆ; ದೆಹಲಿ ಮೆಟ್ರೋದಲ್ಲಿ ಅರೆ ಬೆತ್ತಲಾದ ಯುವತಿ

    ಇದೀಗ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೂ ಆಟೋಗಳು ಎಂದಿನಂತೆ ಬಾಡಿಗೆಯಲ್ಲಿ ತೊಡಗಿವೆ. ಆಟೋಗಳ ಮೇಲೆ ಇರುವ ರಾಜಕೀಯ ಪಕ್ಷಗಳ ಪೋಸ್ಟರ್​ಗಳನ್ನು ತೆರವು ಮಾಡಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ಆಟೋಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಚಾರ ಪೊಲೀಸರಿಗೆ ಸೂಚನೆ ನೀಡಿದ್ದಾರೆ. 

    ಇದರ ಮೇರೆಗೆ ಸಂಚಾರ ಪೊಲೀಸರು, ಸೋಮವಾರ ಮತ್ತು ಮಂಗಳವಾರ ನಗರದ ಎಲ್ಲೆಡೆ ವಿಶೇಷ ಕಾರ್ಯಾಚರಣೆ ನಡೆಸಿ ರಾಜಕೀಯ ಪಕ್ಷಗಳ ಪೋಸ್ಟರ್​ ಇರುವ ಆಟೋಗಳನ್ನು ವಶಕ್ಕೆ ಪಡೆದು ಪ್ರಾದೇಶಿಕ ಸಾರಿಗೆ ಇಲಾಖೆಗೆ (ಆರ್​ಟಿಒ) ಒಪ್ಪಿಸುತ್ತಿದ್ದಾರೆ. ಈ ಮೂಲಕ ದಿನದ ಬಾಡಿಗೆ ಇಲ್ಲದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅದಕ್ಕಾಗಿ ರಾಜಕೀಯ ಪಕ್ಷಗಳ ಪ್ರಚಾರದ ಪೋಸ್ಟರ್​ಗಳು ಇದ್ದರೆ ತಾವೇ ತೆರವು ಮಾಡಿಕೊಳ್ಳುವುದು ಒಳಿತು ಎಂದು ಆಟೋ ಚಾಲಕರಿಗೆ ಪೊಲೀಸರು ಸಲಹೆ ನೀಡಿದ್ದಾರೆ.

    ಇದನ್ನೂ ಓದಿ: ಬಸ್ಸಿನಲ್ಲಿ ಹಿಂದು ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts