More

    ಮತದಾನ ನಿಮ್ಮ ಹಕ್ಕು, ತಪ್ಪದೇ ಚಲಾಯಿಸಿ-ಶಿವಾನಂದ ಅಜ್ಜಣ್ಣವರ

    ಸಂವಿಧಾನವು ಪ್ರತಿ ಪ್ರಜೆಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅದರಲ್ಲಿ ಮತದಾನವೂ ಒಂದು. ಈ ನಿಮ್ಮ ಹಕ್ಕನ್ನು ತಪ್ಪದೇ ಚಲಾಯಿಸಿ. ಸಂವಿಧಾನದತ್ತವಾದ ಈ ಹಕ್ಕನ್ನು ಮತ ಚಲಾಯಿಸದೆ ನೀವು ಎಂದಿಗೂ ಕಳೆದುಕೊಳ್ಳಬೇಡಿರಿ ಎಂದು ನರೇಗಲ್ಲ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ಮತದಾರರಿಗೆ ಕರೆ ನೀಡಿದರು.

    ಪಟ್ಟಣದ ಸೇರಿದಂತೆ ಪ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ಮತದಾನ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

    ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರವರು ಎಲ್ಲರಿಗೂ ಅನುಕೂಲವಾಗುವಂತೆ ಸಂವಿಧಾನ ರಚಿಸಿ ನಮಗೆ ಮಹದುಪಕಾರ ಮಾಡಿದ್ದಾರೆ. ಅದರಲ್ಲಿ ಅವರು ಈ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳೇನು? ಮತ್ತು ಅವನು ಮಾಡಬೇಕಾದ ಕರ್ತವ್ಯಗಳೇನು? ಎಂಬುದನ್ನು ಉಲ್ಲೇಖಿಸಿದ್ದಾರೆ. ಉಳಿದ ಸಮಯದಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುವ ನಾವುಗಳು ಈ ಮತದಾನದ ಸಮಯದಲ್ಲಿ ಹಕ್ಕನ್ನು ಚಲಾಯಿಸಲು ಅದೇಕೋ ಹಿಂದೇಟು ಹಾಕುತ್ತೇವೆ. ನೀವು ಮತ ಚಲಾಯಿಸುವದರಿಂದ ನಿಮಗೆ ಬೇಕಾದ ಧುರೀಣನನ್ನು, ಬೇಕಾದ ಸರ್ಕಾರÀವನ್ನು ಆಯ್ಕೆಮಾಡಿಕೊಳ್ಳಲು ನಿಮಗೆ ಸ್ವತಂತ್ರವಿದೆ. ಇದನ್ನು ಎಂದಿಗೂ ನೀವು ಕಳೆದುಕೊಳ್ಳಬೇಡಿರಿ. ನಮ್ಮ ಮನೆಗಳಲ್ಲಿ ಹಬ್ಬಗಳನ್ನು ಆಚರಿಸುವಾಗ ನಾವು ಹೇಗೆ ಸಂಭ್ರಮ ಪಡುತ್ತೇವೆಯೋ ಹಾಗಯೇ ದೇಶದ ಹಬ್ಬವಾದ ಮತದಾನವನ್ನೂ ಕೂಡ ಅಷ್ಟೇ ಸಂಭ್ರಮದಿAದ ಆಚರಿಸಬೇಕು. ಸ್ವ ಇಚ್ಛೆಯಿಂದ ಮತಗಟ್ಟೆಗೆ ಬಂದು, ನಿಗದಿತ ಸಮಯದೊಳಗೆ ನಿಮಗೆ ಬೇಕಾದ ಅಭ್ಯರ್ಥಿಗೆ ಮತ ಹಾಕಿದರೆ ನೀವು ದೇಶಕ್ಕಾಗಿ ಒಂದು ಉತ್ತಮ ಕಾರ್ಯ ಮಾಡಿದಂತೆ. ಆದ್ದರಿಂದ ಬರುವ ಮೇ ೧೦ರಂದು ನಡೆಯಲಿರುವ ಮತದಾನದಲ್ಲಿ ನೀವೆಲ್ಲರೂ ತಪ್ಪದೆ ಮತದಾನ ಮಾಡಿರಿ. ೧೮ ವರ್ಷ ದಾಟಿದವರೆಲ್ಲರಿಗೂ ಮತದಾನ ಮಾಡಲು ಸಂವಿಧಾನ ಅವಕಾಶ ನೀಡಿದೆ. ಯುವ ಮತದಾರರು ಈ ಸುಸಂದರ್ಭವನ್ನು ಬಳಸಿಕೊಂಡು ಮತದಾನ ಮಾಡಲು ಮುಂದಾಗಬೇಕು ಎಂದರು.

    ಕAದಾಯ ನಿರೀಕ್ಷಕ ರಾಮಚಂದ್ರ ಕಜ್ಜಿ, ವಿ.ವೈ. ಮಡಿವಾಳರ, ಆರೀಫ್ ಮಿರ್ಜಾ, ಮುತ್ತು ಹೂಗಾರ, ಸಿ. ವಿ. ಹೊನವಾಡ, ಸಂಜು ಗುಡಿಮನಿ, ಉದಯ, ಅಶೋಕ ಹೊಸಳ್ಳಿ ಸೇರಿದಮತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts