More

    ಎರಡನೇ ಹಂತದ ಚುನಾವಣೆ, ಶೇ.76 ಮಂದಿ ಮತ ಚಲಾವಣೆ

    ಕಾಸರಗೋಡು: ಕೇರಳದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಗುರುವಾರ ಎರಡನೇ ಹಂತದ ಚುನಾವಣೆಯಲ್ಲಿ ಶೇ.76.38 ಮತದಾನವಾಗಿದೆ.

    ಕೋಟ್ಟಾಯಂ, ಎರ್ನಾಕುಳಂ, ತ್ರಿಶ್ಯೂರ್, ಪಾಲಕ್ಕಾಡ್ ಹಾಗೂ ವಯನಾಡ್ ಜಿಲ್ಲೆಯಲ್ಲಿ ಮತದಾನ ನಡೆದಿದೆ. ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಮತದಾನ ನಡೆದಿದ್ದು, ಸಾಯಂಕಾಲ 6ರಿಂದ 7ರವರೆಗೆ ಕೋವಿಡ್ ಬಾಧಿತರಿಗೆ ಹಾಗೂ ಕ್ವಾರಂಟೈನ್‌ನಲ್ಲಿರುವವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು.

    ವಯನಾಡಿನಲ್ಲಿ ಗರಿಷ್ಠ(ಶೇ.79.46) ಹಾಗೂ ತ್ರಿಶ್ಯೂರ್‌ನಲ್ಲಿ ಕನಿಷ್ಠ(ಶೇ.63.77) ಮತದಾನವಾಗಿದೆ. ಡಿ.14ರಂದು ನಡೆಯುವ ಕೊನೆಯ ಹಂತದ ಮತದಾನದಲ್ಲಿ ಕಾಸರಗೋಡು, ಕಣ್ಣೂರು, ಮಲಪ್ಪುರಂ ಹಾಗೂ ಕೋಯಿಕ್ಕೋಡ್ ಜಿಲ್ಲೆಯ ಮತದಾರರು ಮತ ಚಲಾಯಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts