More

    ಆಮಿಷಗಳಿಗೆ ಒಳಗಾಗದೇ ಯೋಗ್ಯರನ್ನು ಚುನಾಯಿಸಿ

    ಚಿತ್ರದುರ್ಗ: ಯಾವುದೇ ಆಮಿಷಗಳಿಗೆ ಒಳಗಾಗದೆ ಯೋಗ್ಯರನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಅವರು ಮತದಾರರಿಗೆ ಸಲಹೆ ನೀಡಿದರು.

    ನಗರದ ತ.ರಾ.ಸು ರಂಗಮಂದಿರದಲ್ಲಿ ಬುಧವಾರ ಭಾರತ ಚುನಾ ವಣಾ ಆಯೋಗ,ಜಿಲ್ಲಾಡಳಿತದಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನಾಚರಣೆ ಉದ್ಘಾಟಿಸಿ ಮಾತನಾಡಿ,ಮತದಾನ ದೇಶದ ಅರ್ಹ ವಯಸ್ಕರ ಕರ್ತವ್ಯ. ಸಂವಿಧಾನ ನೀಡಿರುವ ಹಕ್ಕುಗಳನ್ನು ಅನುಭವಿಸುವುದರ ಜತೆಗೆ ಕರ್ತವ್ಯಗಳನ್ನೂ ನಿರ್ವಹಿಸಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಡಿಸಿಜಿಆರ್‌ಜೆ ದಿವ್ಯಾಪ್ರಭು ಮಾತನಾಡಿ,ಭಾರತ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದ ದಿನದ ನೆನಪಿಗಾಗಿ(1950 ಜನ ವರಿ 25)2011ರಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಸಧೃಡತೆಗೆ ಮತದಾನ ಅಗತ್ಯ. ಇದು ನಮ್ಮ ಹಕ್ಕು,ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ಮತದಾನವನ್ನು ಪ್ರಜಾಪ್ರಭುತ್ವದ ಹಬ್ಬವನ್ನಾಗಿ ಆಚರಿಸಬೇಕು.

    ಕಾಲ,ಕಾಲಕ್ಕೆ ಮತಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದ್ದು,ಪರಿಷ್ಕೃತ ಪಟ್ಟಿಯಲ್ಲಿ 31 ಸಾವಿರ ಯುವ ಮತದಾರರು ನೊಂದಣಿಯಾಗಿದ್ದಾರೆ. ಅಂಚೆ ಮೂಲಕ ಇವರಿಗೆ ಮತದಾರ ಗುರುತು ಚೀಟಿ ರವಾನಿಸಲಾಗಿದೆ ಎಂದರು.

    ಜಿಪಂ ಸಿಇಒ ಎಂ.ಎಸ್.ದಿವಾಕರ್,ಎಸ್ಪಿ ಕೆ.ಪರುಶುರಾಮ್ ಮಾತನಾಡಿದರು.ಉಪವಿಭಾಧಿಕಾರಿ ಆರ್.ಚಂದ್ರಯ್ಯ ಪ್ರತಿಜ್ಞಾ ವಿಧಿ ಬೋಧಿಸಿ ದರು. ಮತದಾನ ಜಾಗೃತಿಗೀತೆ,ಮುಖ್ಯ ಚುನಾವಣಾ ಆಯುಕ್ತರ ಸಂದೇಶವಿರುವ ವಿಡಿಯೋ ಪ್ರದರ್ಶಿಸಲಾಯಿತು. ದಿನಾಚರಣೆ ಅಂಗ ವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

    ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ,ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ,ನಗರಸಭೆ ಆಯುಕ್ತ ಸತೀಶ್ ರೆಡ್ಡಿ ಮತ್ತಿತರರು ಇದ್ದರು. ವೇದಿಕೆ ಕಾರ‌್ಯಕ್ರಮಕ್ಕೂ ಮುನ್ನಾ ನಗರದ ಒನಕೆ ಓಬವ್ವ ವೃತ್ತದಿಂದ ರಂಗಮಂದಿರದವರೆಗೆ ಆಯೋಜಿಸಿದ್ದ ಮತದಾರರ ಜಾಗೃತಿನ ಜಾಥಾಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಸರ್ಕಾರಿ ಕಲಾ ಕಾಲೇಜು,ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರ,ಡಾನ್‌ಬಾಸ್ಕೋ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸೇರಿದಂತೆ ವಿವಿಧ ಶಾಲಾ,ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

    ಆರೋಗ್ಯ ಇಲಾಖೆ
    ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಬುಧವಾರ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಅಧಿಕಾರಿ,ಸಿಬ್ಬಂದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಡಿಎಚ್‌ಒ ಡಾ.ಆರ್.ರಂಗನಾಥ,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶಿ, ಸಹಾಯಕ ಆಡಳಿತಾಧಿಕಾರಿ ಸೈಯದ್ ಅಸ್ಲಾಮ್,ಜಿಲ್ಲಾ ರೋಗಶಾಸ್ತ್ರಜ್ಞ ಡಾ.ರುದ್ರೇಶ್, ಅಸಾಂಕ್ರಾಮಿಕ ರೋಗಗಳ ಜಿಲ್ಲಾ ಸಂಚಾಲಕರಾದ ಡಾ.ಶ್ವೇತಾ ಮತ್ತಿತರರು ಇದ್ದರು.

    ಅಮೃತಾಪುರ
    ಹೊಳಲ್ಕೆರೆ ತಾಲೂಕು ಅಮೃತಾಪುರದಲ್ಲಿ ಬುಧವಾರ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ.ಉಮೇಶ್ ಮತದಾನದ ಮಹತ್ವವನ್ನು ವಿವರಿಸಿದರು. ಗ್ರಾಪಂ ಸದಸ್ಯರಾದ ರಂಗಸ್ವಾಮಿ,ಸುಧಾರಂಗಸ್ವಾಮಿ,ಲಕ್ಷ್ಮೀ ಮಂಜು ನಾಥ್,ಶಿಕ್ಷಕರಾದ ಡಿ.ಸಿದ್ದಪ್ಪ,ರೇಷ್ಮಾ,ಅಂಗನವಾಡಿ ಕಾರ್ಯಕರ್ತೆ ರಾಧಾಬಸವರಾಜು,ತಿಮ್ಮಕ್ಕ, ಶಾರದಮ್ಮ ಮತ್ತಿತರರು ಇದ್ದರು.

    ಡಯಟ್
    ಚಿತ್ರದುರ್ಗದ ಡಯಟ್‌ನಲ್ಲಿ ಬುಧವಾರ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಡಯಟ್ ಪ್ರಭಾಎ ಪ್ರಾಚಾರ‌್ಯ ಡಿ.ಅರ್.ಕೃಷ್ಣಮೂರ್ತಿ,ಉಪನ್ಯಾಸಕರಾದ ಎಸ್.ಬಸವರಾಜು,ಈ.ಹಾಲಮೂರ್ತಿ,ಎಸ್.ಸಿ.ಪ್ರಸಾದ್,ಮಹಮ್ಮದ್ ಅಯೂಬ್ ಸೊರಬ್, .ಎಂ.ನಾಗರಾಜು ಸಿ.ಎಸ್.ಲೀಲಾವತಿ, ವಿ.ಕನಕಮ್ಮ,ಕೆ.ಆರ್. ಲೋಕೇಶ್,ಆರ್.ಲಿಂಗರಾಜು,ದೇವೇಂದ್ರಪ್ಪ, ಗೀತಾ, ಕವಿತಾ,ರೂಪಾ,ಮಹೇಂದ್ರ,ಮಂಜುನಾಥ್,ನಿರ್ಮಲಾ,ಸೌಭಾಗ್ಯಮ್ಮ,ಕ್ಷೀರಾ,ವನಜಾಕ್ಷಮ್ಮ ಇತರರು ಇದ್ದರು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts