More

    ಚುನಾವಣಾ ಕಣದಲ್ಲಿ ಝಣ ಝಣ ಕಾಂಚಾಣ: ಅಧಿಕ ಮತವಿರುವ ಬೊಂಬೆ ನಗರಿ ಮೇಲೆ ಕಣ್ಣು

    ಚನ್ನಪಟ್ಟಣ :  ಚುನಾವಣೆ ದಿನ ಸಮೀಪಿಸುತ್ತಲೇ ರಾಜ್ಯ ಒಕ್ಕಲಿಗರ ಸಂದ ಚುನಾವಣಾ ಕಣ ತೀವ್ರ ರಂಗು ಪಡೆದುಕೊಂಡಿದೆ. ಅತಿಹೆಚ್ಚು ಮತದಾರರನ್ನು ಹೊಂದಿರುವ ಬೊಂಬೆನಗರಿಯತ್ತ ಕಣದಲ್ಲಿರುವ ಅಭ್ಯರ್ಥಿಗಳು ವಿಶೇಷ ಚಿತ್ತ ಹರಿಸಿದ್ದಾರೆ. ಮತದಾರ ಪ್ರಭುವನ್ನು ಓಲೈಸಿಕೊಳ್ಳಲು ನಾನಾ ಕಸರತ್ತುಗಳು ಆರಂಭಗೊಂಡಿವೆ.

    ಪ್ರತಿಷ್ಠಿತ ಸಂಕ್ಕೆ ಡಿ.12ರಂದು ಚುನಾವಣೆ ನಿಗದಿಯಾಗಿದ್ದು, ಸಂದ ನಿರ್ದೇಶಕರಾಗಿ ಆಯ್ಕೆಯಾಗಲು 15 ಸ್ಥಾನಗಳಿಗೆ ಬರೋಬ್ಬರಿ 141 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಬಾರಿ ಯಾವುದೇ ಸಾರ್ವತ್ರಿಕ ಚುನಾವಣೆಗೂ ಕಮ್ಮಿ ಇಲ್ಲದಂತೆ ಸಂದ ಚುನಾವಣೆ ಪ್ರಚಾರ ಅಬ್ಬರ ಪಡೆದುಕೊಂಡಿದೆ. ಸ್ಪರ್ಧೆಗಿಳಿದಿರುವ ಎಲ್ಲ ಸಿಂಡಿಕೇಟ್‌ಗಳು ಚುನಾವಣೆ ಗೆಲ್ಲಲೇಬೇಕೆಂಬ ಆಶಯದೊಂದಿಗೆ ಅಬ್ಬರದ ಪ್ರಚಾರದಲ್ಲಿ ತೊಡಗಿವೆ.

    ಇವರ ಜತೆಗೆ ಸ್ವತಂತ್ರವಾಗಿ ಆಖಾಡಕ್ಕಿಳಿದಿರುವ ಅಭ್ಯರ್ಥಿಗಳು ಸಹ ಏಕಾಂಗಿಯಾಗಿ ಮತ ಬೇಟೆ ನಡೆಸುತ್ತಿದ್ದಾರೆ. ಇಷ್ಟು ದಿನ ಮತ ಪ್ರಚಾರ.., ಬಹಿರಂಗ ಸಭೆ.., ಆಶ್ವಾಸನೆಗಳ ಸುರಿಮಳೆ.., ವಿರೋಧಿಗಳ ವಿರುದ್ಧ ಟೀಕೆ.., ಆರೋಪ ಪ್ರತ್ಯಾರೋಪಕ್ಕೆ ಸಿಮೀತವಾಗಿದ್ದ ಕಾರ್ಯಕ್ರಮಗಳು ಚುನಾವಣೆ ಸಮೀಪಿಸುತ್ತಲೇ ಮತ್ತೊಂದು ಮಗ್ಗುಲಿಗೆ ಬಂದು ನಿಂತಿವೆೆ.

    ಹರಿಯುತ್ತಿದೆ ಹಣದ ಹೊಳೆ: ತಾಲೂಕಿನಲ್ಲಿ ಅಂದಾಜು 18 ಸಾವಿರ ಮತಗಳಿದ್ದು, ಚುನಾವಣೆ ನಡೆಯುವ ಮೂರು ಜಿಲ್ಲೆಗಳ ಪೈಕಿ ಬೊಂಬೆನಗರಿಯಲ್ಲಿಯೇ ಅತಿಹೆಚ್ಚು ಮತವಿದೆ. ಈ ಕಾರಣಕ್ಕಾಗಿಯೇ ತಾಲೂಕಿನ ಮೇಲೆ ವಿವಿಧ ಸಿಂಡಿಕೇಟ್‌ಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ವಿಶೇಷ ಚಿತ್ತ ಇರಿಸಿದ್ದಾರೆ. ಕೇವಲ ಚಿತ್ತವಷ್ಟೇ ಅಲ್ಲ ಕಾಂಚಾಣದ ಅಬ್ಬರ ಎಬ್ಬಿಸುತ್ತಿದ್ದಾರೆ. ಈಗಾಗಲೇ ಪ್ರಚಾರಕ್ಕಾಗಿ ಕೆಲವು ಅಭ್ಯರ್ಥಿಗಳು ನೀರಿನಂತೆ ಹಣ ಸುರಿದಿದ್ದಾರೆ. ಸ್ಥಳೀಯ ಮುಖಂಡರ ಮೂಲಕ ಸಂದ ಮತದಾರರ ಮನವೊಲಿಸಲು ಹರಸಾಹಸಪಡುತ್ತಿರುವ ಕೆಲ ಅಭ್ಯರ್ಥಿಗಳು ಮತದಾರ ಹಾಗೂ ಮುಖಂಡ ಇಬ್ಬರಿಗೂ ಸಾಕಷ್ಟು ಪ್ರವಾಣದಲ್ಲಿ ಈಗಾಗಲೇ ಹಣ ಒದಗಿಸಿದ್ದಾರೆ.

    ಆರಂಭವಾದ ಏಕಾಂಗಿ ಹೋರಾಟ: ಚುನಾವಣೆಯಲ್ಲಿ ಈ ಹಿಂದೆ ಒಗ್ಗಟ್ಟಿನ ಮಂತ್ರ ಜಪಿಸಿಕೊಂಡು, ಸಿಂಡಿಕೇಟ್ ಮೂಲಕವೇ ಹೋರಾಟ ನಡೆಸುತ್ತಾ ಬಂದ ಹುರಿಯಾಳುಗಳು ಇದೀಗ ಏಕಾಂಗಿಯಾಗಿ ಅಖಾಡಕ್ಕಿಳಿದಿದ್ದಾರೆ. ಚುನಾವಣೆಯ ಆರಂಭದ ದಿನದಲ್ಲಿ ಇಡೀ ತಂಡದ ಗೆಲುವಿಗೆ ದೇಗುಲಗಳಲ್ಲಿ ಪೂಜೆ, ಪ್ರಾರ್ಥನೆ ನೆರವೇರಿಸಿದವರು, ಬಹಿರಂಗ ಸಭೆಗಳಲ್ಲಿ ತಮ್ಮ ತಂಡದ ಬಗ್ಗೆ ಭರ್ಜರಿ ಪ್ರಚಾರ ನಡೆಸಿದವರು, ಇದೀಗ, ಎಲ್ಲವನ್ನು ಕೈಬಿಟ್ಟು ನಾನೊಬ್ಬ ಗೆದ್ದರೆ ಸಾಕು.., ಬೇರೆಯವರ ಚಿಂತೆ ಬೇಡ ಎಂಬಂತೆ ಚುನಾವಣೆಗೆ ಮೂರು ದಿನ ಬಾಕಿ ಇರುವಾಗಲೇ ಸಿಂಗಲ್ ನಂಬರ್ ಆಟಕ್ಕೆ ಮುಂದಾಗಿದ್ದಾರೆ.

    ಒಟ್ಟಾರೆ ರಾಜ್ಯ ಒಕ್ಕಲಿಗರ ಸಂದ ಚುನಾವಣೆ ಈ ಮಟ್ಟಿಗೆ ರಂಗೇರಿರುವುದು ಇದೆ ಮೊದಲು ಎನ್ನಬಹುದು. ಚುನಾವಣೆಯಲ್ಲಿ ಕೆಲ ಅಭ್ಯರ್ಥಿಗಳು ನೀರಿನಂತೆ ಹಣವನ್ನು ವ್ಯಯಿಸುತ್ತಿದ್ದು, ಮತದಾರಪ್ರಭು ವಾತ್ರ ಎಲ್ಲರಿಗೂ ವಿಶ್ವಾಸ ನೀಡಿ ಸಾಗ ಹಾಕುತ್ತಿದ್ದಾನೆ.

    ಹೊರಗಿನವರ ಅರ್ಭಟ: ತಾಲೂಕಿನ ಮತಗಳ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಮೂಲದ ಕೆಲ ಅಭ್ಯರ್ಥಿಗಳು ಕಾಂಚಾಣದ ಮೂಲಕವೇ ತಾಲೂಕಿನಲ್ಲಿ ಸಾಕಷ್ಟು ಸದ್ದು ವಾಡುತ್ತಿದ್ದಾರೆ. ಗ್ರಾಮಗಳಲ್ಲಿರುವ ಮತಗಳನ್ನು ಸೆಳೆಯಲು ತಮ್ಮ ಪರವಾಗಿ ಹಣ ಹಂಚಲು ತಮ್ಮ ತಂಡಗಳನ್ನು ಕಳಿಸಿದ್ದಾರೆ. ತಂಡ ಹಾಗೂ ಸ್ಥಳೀಯ ಮುಖಂಡರ ಮೂಲಕ ಮತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

     

    ಈಗಾಗಲೇ ತಮ್ಮ ಕ್ರಮಸಂಖ್ಯೆ ಇರುವ ಕವರ್‌ನಲ್ಲಿ ಹಣವಿಟ್ಟು ಮತದಾರರಿಗೆ ತಲುಪಿಸುವ ವ್ಯವಸ್ಥೆ ನಡೆಯುತ್ತಿದೆ. ತಾಲೂಕಿನಲ್ಲಿ ಹೆಚ್ಚು ಮತ ಪಡೆದರೆ ಗೆಲುವಿನ ಸನಿಹಕ್ಕೆ ಬರಲು ಸಾಧ್ಯ ಎನ್ನುವುದನ್ನು ಅರಿತಿರುವ ಕೆಲ ಅಭ್ಯರ್ಥಿಗಳು ಹಣದ ಹೊಳೆ ಹರಿಸುತ್ತಿದ್ದಾರೆ. ಅಷ್ಟೇ ಅಲ್ಲ ತುಂಡು ಹಾಗೂ ಗುಂಡಿನ ಪಾರ್ಟಿಗಳಿಗಂತೂ ಲೆಕ್ಕವೇ ಇಲ್ಲದಂತಾಗಿದೆ.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts