More

    LIVE| ರಾಷ್ಟ್ರೀಯ ಏಕತಾ ದಿವಸ: ಸರ್ದಾರ್​ ಪಟೇಲರ ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಪ್ರಧಾನಿ

    ಗಾಂಧಿನಗರ: ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿದ್ದಾರೆ. ಪ್ರವಾಸದ ಎರಡನೇ ಹಾಗೂ ಕೊನೆಯ ದಿನವಾದ ಇಂದು (ಅ.31) ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಹಿನ್ನೆಲೆಯಲ್ಲಿ ಕೆವಾಡಿಯಾದಲ್ಲಿರುವ ಸರ್ದಾರ್​ ಪಟೇಲರ ಏಕತಾ ಪ್ರತಿಮೆಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿದರು. ಪ್ರಧಾನಿಯವರ ಇಂದಿನ ಪ್ರವಾಸದ ಕ್ಷಣಗಳನ್ನು ಮೇಲಿನ ಲೈವ್​ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ.

    ಪ್ರಧಾನಿ ಮೋದಿ ಅವರು ಕೇಂದ್ರ ಸಶಸ್ತ್ರ ಪಡೆ ಹಾಗೂ ಗುಜರಾತ್ ಪೊಲೀಸ್ ಪರೇಡ್ ವೀಕ್ಷಣೆ ಮಾಡಿದ ಬಳಿಕ ಇದೀಗ ಏಕತಾ ದಿವಸ ಉದ್ದೇಶಿಸಿ ಮಾತನಾಡುತ್ತಿದ್ದಾರೆ.

    ಶುಕ್ರವಾರ ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ (ಅ.31) ಪ್ರಯುಕ್ತ ಆಚರಿಸುವ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಶುಕ್ರವಾರ 17 ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

    ಆರೋಗ್ಯ ವನ, ಏಕತಾ ಮಾಲ್ ಲೋಕಾರ್ಪಣೆ ಮಾಡಿದರು. ಉದ್ಘಾಟಿಸಿದ ಮಕ್ಕಳ ನ್ಯೂಟ್ರಿಷಿಯನ್ ಪಾರ್ಕ್, ಸರ್ದಾರ್ ಪಟೇಲ್ ವನ್ಯಮೃಗ ಪಾರ್ಕ್ ವೀಕ್ಷಿಸಿದರು. ಕ್ರೂಸ್ ಸರ್ವೀಸ್ ಬೋಟ್​ನಲ್ಲಿ ವಿಹರಿಸಿದರು. ಇದಕ್ಕೂ ಮುನ್ನ ಗುರುವಾರ ನಿಧನರಾದ ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಕೇಶುಭಾಯ್ ಪಟೇಲ್​ರ ಗಾಂಧಿನಗರದ ನಿವಾಸಕ್ಕೆ ಭೇಟಿ ನೀಡಿದ ಮೋದಿ, ಕೇಶುಭಾಯಿ ಕುಟಂಬಸ್ಥರಿಗೆ ಸಾಂತ್ವನ ಹೇಳಿದರು.

    ಇಂದು ಕೂಡ ದೇಶದ ಮೊದಲ ಸೀ ಪ್ಲೇನ್ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

    ಆರೋಗ್ಯ ವನ ಉದ್ಘಾಟಿಸಿದ ಮೋದಿ; ಗುಜರಾತ್​ನಲ್ಲಿ 17 ಕಾರ್ಯಕ್ರಮಕ್ಕೆ ಚಾಲನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts