More

    ಆರೋಗ್ಯ ವನ ಉದ್ಘಾಟಿಸಿದ ಮೋದಿ; ಗುಜರಾತ್​ನಲ್ಲಿ 17 ಕಾರ್ಯಕ್ರಮಕ್ಕೆ ಚಾಲನೆ..

    ಗಾಂಧಿನಗರ: ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೆವಾಡಿಯಾ ಜಿಲ್ಲೆಯಲ್ಲಿ ನಿರ್ವಿುಸಲಾಗಿರುವ ಆರೋಗ್ಯ ವನವನ್ನು ಶುಕ್ರವಾರ ಉದ್ಘಾಟಿಸಿದರು.

    ಆಯುರ್ವೆದದ ಗಿಡ ಮೂಲಿಕೆಗಳ ಮಹತ್ವದ ಅರಿವು ಮೂಡಿಸಲು 17 ಎಕರೆ ಜಾಗದಲ್ಲಿ ಆರೋಗ್ಯ ವನವನ್ನು ನಿರ್ವಿುಸಲಾಗಿದೆ. 380 ಬಗೆಯ ಒಟ್ಟು 5 ಲಕ್ಷ ಔಷಧೀಯ ಗಿಡಗಳನ್ನು ಈ ವನದಲ್ಲಿ ಬೆಳೆಸಲಾಗಿದೆ. ಕಮಲದ ಕೊಳ, ಆಲ್ಬಾ ಗಾರ್ಡನ್, ಯೋಗ ಮತ್ತು ಧ್ಯಾನ ಉದ್ಯಾನ, ಒಳಾಂಗಣ ಸಸ್ಯ ವಿಭಾಗ, ಡಿಜಿಟಲ್ ಮಾಹಿತಿ ಕೇಂದ್ರ, ಆಯುರ್ವೆದ ರೀತಿಯ ಆಹಾರ ವಿಭಾಗ ಸೇರಿ ಅನೇಕ ವಿಭಾಗಗಳು ಈ ವನದಲ್ಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿಯೊಂದಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಹಾಜರಿದ್ದರು.

    ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ (ಅ.31) ಪ್ರಯುಕ್ತ ಆಚರಿಸುವ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಶುಕ್ರವಾರ 17 ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಇದರ ಭಾಗವಾಗಿಯೇ ಆರೋಗ್ಯ ವನ, ಏಕತಾ ಮಾಲ್ ಲೋಕಾರ್ಪಣೆ ಮಾಡಿದರು. ಉದ್ಘಾಟಿಸಿದ ಮಕ್ಕಳ ನ್ಯೂಟ್ರಿಷಿಯನ್ ಪಾರ್ಕ್, ಸರ್ದಾರ್ ಪಟೇಲ್ ವನ್ಯಮೃಗ ಪಾರ್ಕ್ ವೀಕ್ಷಿಸಿದರು. ಕ್ರೂಸ್ ಸರ್ವೀಸ್ ಬೋಟ್​ನಲ್ಲಿ ವಿಹರಿಸಿದರು. ಶನಿವಾರ ಕೂಡ ಹಲವು ಕಾರ್ಯಕ್ರಮಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಗುರುವಾರ ನಿಧನರಾದ ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಕೇಶುಭಾಯ್ ಪಟೇಲ್​ರ ಗಾಂಧಿನಗರದ ನಿವಾಸಕ್ಕೆ ಭೇಟಿ ನೀಡಿದ ಮೋದಿ, ಕೇಶುಭಾಯಿ ಕುಟಂಬಸ್ಥರಿಗೆ ಸಾಂತ್ವನ ಹೇಳಿದರು.

    ಏಕತಾ ದಿನದ ಕಾರ್ಯಕ್ರಮ

    • ಸರ್ದಾರ್ ಪಟೇಲರ ಏಕತಾ ಪ್ರತಿಮೆಗೆ ಮೋದಿ ಪುಷ್ಪಾರ್ಚನೆ
    • ಕೇಂದ್ರ ಸಶಸ್ತ್ರ ಪಡೆ, ಗುಜರಾತ್ ಪೊಲೀಸ್ ಪರೇಡ್ ವೀಕ್ಷಣೆ
    • ಆಫೀಸರ್ ಟ್ರೇನಿಸ್ (ಒಟಿ)/ ನಾಗರಿಕ ಸೇವಾ ಪ್ರೊಬೆಷನರ್​ಗಳೊಂದಿಗೆ ವಿಡಿಯೋ ಸಂವಾದ
    • ದೇಶದ ಮೊದಲ ಸೀ ಪ್ಲೇನ್ ಉದ್ಘಾಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts