More

    ಅಧಿವೇಶನದಲ್ಲಿ ಭಾಗವಹಿಸದೇ ದ್ರೋಹ: ಈಶ್ವರಪ್ಪ ವಿರುದ್ಧ ಕೆಬಿಪಿ ಆಕ್ರೋಶ

    ಶಿವಮೊಗ್ಗ: ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಪಕ್ಷದ ನಾಯಕರ ಮೇಲೆ ಒತ್ತಡ ಹೇರುವ ಸಲುವಾಗಿ ಅಧಿವೇಶನದಿಂದ ದೂರವುಳಿದಿರುವ ಶಾಸಕ ಕೆ.ಎಸ್.ಈಶ್ವರಪ್ಪ ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.
    ಕಾಲು ನೋವಿನ ನೆಪ ಹೇಳಿ ಕಳೆದ ಅಧಿವೇಶನದಿಂದ ದೂರವುಳಿದಿದ್ದರು. ಈ ಬಾರಿ ಅಧಿವೇಶನದ ಮೊದಲ ದಿನ ಬೆಳಗಾವಿಗೆ ಹೋಗಿದ್ದರೂ ಅಧಿವೇಶನಕ್ಕೆ ಹೋಗದೇ ಅಲ್ಲಿಂದ ಮರಳಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
    ಈಶ್ವರಪ್ಪ ಬಿಜೆಪಿ ನಾಯಕರನ್ನು ಬ್ಲಾೃಕ್ ಮೇಲ್ ಮಾಡುತ್ತಿದ್ದಾರೋ ಅಥವಾ ಇವರು ಅಧಿವೇಶನಕ್ಕೆ ಹೋದರೆ 40 ಪರ್ಸೆಂಟ್ ಕಮೀಷ್‌ನ ವಿಷಯವನ್ನು ಪ್ರತಿಪಕ್ಷಗಳು ಪ್ರಸ್ತಾಪಿಸುತ್ತವೆ ಎಂಬ ಕಾರಣಕ್ಕೆ ಅಧಿವೇಶನಕ್ಕೆ ಹೋಗದಂತೆ ಅವರಿಗೆ ಬಿಜೆಪಿ ನಾಯಕರೇ ಸೂಚನೆ ಕೊಟ್ಟಿದ್ದಾರೋ ತಿಳಿಯುತ್ತಿಲ್ಲ ಎಂದರು.
    ಶಿವಮೊಗ್ಗ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಶ್ರಯ ಮನೆಗಳು ಪೂರ್ಣವಾಗಿಲ್ಲ. ಅತಿವೃಷ್ಟಿಯಿಂದ ನಷ್ಟ ಅನುಭವಿಸಿದವರಿಗೆ ಇದುವರೆಗೂ ಸಂಪೂರ್ಣ ಪರಿಹಾರ ನೀಡಿಲ್ಲ. ಇದೆಲ್ಲವನ್ನೂ ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬದಲು ಅಧಿಕಾರಕ್ಕಾಗಿ ಅಧಿವೇಶನವನ್ನೇ ಬಹಿಷ್ಕರಿಸಿದ್ದಾರೆ ಎಂದು ಟೀಕಿಸಿದರು.

    ಪಾಸೋ, ಫೇಲೋ ಶಾಲೆಗೋಗ್ಲಿ!
    ಕೆ.ಎಸ್.ಈಶ್ವರಪ್ಪ ಶಾಸಕರಾಗಿ ಅಧಿವೇಶನದಲ್ಲಿ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಪ್ರಸ್ತಾಪಿಸಿದ್ದಾರೆ ಎಂಬುದನ್ನು ಜನರು ಗಮನಿಸಿದ್ದಾರೆ. ಪಾಸೋ, ಫೇಲೋ ಮಗ ಶಾಲೆಗೆ ಹೋಗಲಿ ಎಂದು ಕೆಲ ಪಾಲಕರು ಬಯಸುವಂತೆ ಈಶ್ವರಪ್ಪ ಮೊದಲು ಅಧಿವೇಶನಕ್ಕೆ ಹಾಜರಾಗಲಿ ಎಂದು ಕ್ಷೇತ್ರದ ಜನರು ಬಯಸುತ್ತಿದ್ದಾರೆ. ಇವರಿಗೆ ಕ್ಷೇತ್ರದ ಬಗ್ಗೆ ಆಸಕ್ತಿಯಿಲ್ಲ ಎಂಬುದನ್ನು ಅರಿತಿರುವ ಅಧಿಕಾರಿಗಳು ಕೆಲಸ ಮಾಡದೇ ಸಮಯವ್ಯರ್ಥ ಮಾಡುತ್ತಿದ್ದಾರೆ ಎಂದು ಕೆ.ಬಿ.ಪ್ರಸನ್ನಕುಮಾರ್ ದೂರಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts