More

    ಶಿಕ್ಷಣ @ ಹೋಂ ; ಪ್ರಾಥಮಿಕ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಪೂರಕ

    ತುಮಕೂರು : ಕರೊನಾ ಹಿನ್ನೆಲೆಯಲ್ಲಿ ಮಕ್ಕಳ ನಿರಂತರ ಕಲಿಕೆಗೆ ಹಿನ್ನಡೆ ಆಗಿರುವುದರಿಂದ ಪರಿಣಾಮಕಾರಿ ಕಲಿಕೆಗೆ ಕ್ಷಣ ಫೌಂಡೇಶನ್ ಹಾಗೂ ಮೈಂಡ್‌ಟ್ರೀ ಫೌಂಡೇಷನ್ ಸಹಯೋಗದಲ್ಲಿ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಶಿಕ್ಷಣ ಅಟ್ ಹೋಂ’ ಎಂಬ ವಿನೂತನ ಕಾರ್ಯಕ್ರಮ ರೂಪಿಸಿದೆ.

    ವಿದ್ಯಾರ್ಥಿಗಳನ್ನು ಸ್ವಯಂ ಕಲಿಕೆಯಲ್ಲಿ ತೊಡಗಿಸುವ ಅಗತ್ಯವಿರುವುದರಿಂದ ಶಿಕ್ಷಣ ಅಟ್ ಹೋಂ ರೂಪಿಸಲಾಗಿದೆ. ತುಮಕೂರಿನ 43689 ಹಾಗೂ ಮಧುಗಿರಿಯ 32760 ಒಟ್ಟು 76449 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ.

    4 ರಿಂದ 7ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಕ್ಲಿಷ್ಟಕರ ಎನ್ನಬಹುದಾದ ಗಣಿತ ವಿಷಯಕ್ಕೆ ಸಂಬಂಧಿಸಿದ ಬುನಾದಿ ಹಂತದ ಅಭ್ಯಾಸ ಪುಸ್ತಕ ಮತ್ತು ಪಠ್ಯಕ್ಕೆ ಪೂರಕ ಚಟುವಟಿಕೆ ಅಭ್ಯಾಸ ಪುಸ್ತಕ ನೀಡಲಾಗುವುದು. ಪ್ರಸಕ್ತ ವ್ಯವಸ್ಥೆಯು ಸಾಕಷ್ಟು ಮೂಲ ಶಿಕ್ಷಣ ಒದಗಿಸಲು ಸಮರ್ಥವಾಗಿದ್ದರೂ, ಜಗತ್ತಿನ ವಿದ್ಯವಾನಕ್ಕೆ ಅನುಗುಣವಾಗಿ ಅಗತ್ಯವಿರುವ ಕೌಶಲ ತಿಳಿಸುವ ಗುರಿಯಿದೆ.

    ಸರ್ಕಾರಿ ಶಾಲೆಯ 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಂಖ್ಯೆ, ಸಂಕಲನ ಮತ್ತು ವ್ಯವಕಲನ ಹಾಗೂ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರದಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಅಭ್ಯಾಸ ಪುಸ್ತಕ ನೀಡಲಾಗುವುದು.

    ಪುಸ್ತಕದ ಪ್ರತಿ ಪುಟದಲ್ಲಿ 10 ಪ್ರಶ್ನೆಗಳಿದ್ದು, ಎಲ್ಲವನ್ನೂ ಕಡ್ಡಾಯವಾಗಿ ಉತ್ತರಿಸುವಂತೆ ಹಾಗೂ ಪ್ರತಿವಾರ ಕನಿಷ್ಠ 2 ಪುಟ ಅಭ್ಯಾಸ ವಾಡುವಂತೆ ವಿದ್ಯಾರ್ಥಿಗಳಿಗೆ ವಾರ್ಗದರ್ಶನ ನೀಡಲಾಗುವುದು. ಗಣಿತ ಅಭ್ಯಾಸ ಪುಸ್ತಕ ಮುಗಿದ ನಂತರ ಪುಸ್ತಕದ ಕೊನೆಯಲ್ಲಿ ನೀಡಿರುವ ಕಿರು ಪರೀಕ್ಷೆ ತೆಗೆದುಕೊಳ್ಳುವಂತೆ ಶಿಕ್ಷಕರು ಮೇಲ್ವಿಚಾರಣೆ ವಾಡಲಿದ್ದಾರೆ.

    ಈ ಪುಸ್ತಕದ ಅಭ್ಯಾಸದಲ್ಲಿ ವಿದ್ಯಾರ್ಥಿಗಳು ಕನಿಷ್ಟ ಸಹಾಯದೊಂದಿಗೆ ಸ್ವಯಂ ತೊಡಗಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಕಲಿಕೆಯ ವಿಭಿನ್ನ ಅಂಶಗಳನ್ನು ಉತ್ತೇಜಿಸುವ ಮತ್ತು ವಿಭಿನ್ನ ಕೌಶಲಗಳನ್ನು ಒಳಗೊಂಡಿರುವ ವಿವಿಧ ಚಟುವಟಿಕೆಗಳನ್ನು ಈ ಪುಸ್ತಕದಲ್ಲಿ ಆಕರ್ಷಕವಾಗಿ ರಚಿಸಲಾಗಿದೆ.

    ಪ್ರತಿವಾರದ ಅಭ್ಯಾಸಗಳ ಜತೆಗೆ ಮೋಜಿನ ಗಣಿತ, ಭಾಷೆ, ವಿಜ್ಞಾನ, ಚಿತ್ರಕಲೆ,ಕಲೆ ಮತ್ತು ಕರಕುಶಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಈ ಪುಸ್ತಕಗಳು ಸ್ವಯಂ ವಿವರಣಾತ್ಮಕವಾಗಿವೆ. ಈ ಪುಸ್ತಕಗಳಲ್ಲಿರುವ ಸೂಚನೆಗಳು, ಭಾಷೆ ಮತ್ತು ನಿರೂಪಣೆಯನ್ನು ವಿದ್ಯಾರ್ಥಿಗಳು ಸುಲಭವಾಗಿ ಅರ್ಥವಾಡಿಕೊಳ್ಳುತ್ತಾರೆ.
    ಚಟುವಟಿಕೆ ಪುಸ್ತಕಗಳು ಪಠ್ಯಕ್ರಮ ಆಧಾರಿತ ಕಲಿಕೆಯ ಜತೆ ಜತೆಗೆ ಭವಿಷ್ಯದಲ್ಲಿ ವಿಶ್ವಾಸದಿಂದ ವ್ಯವಹರಿಸಲು ಬೇಕಾಗುವ ಸಂವಹನ, ಸಹಯೋಗ, ಸೃಜನಶೀಲತೆ ಹಾಗೂ ತಾರ್ಕಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಂತೆ ಅಭ್ಯಾಸಿಸಲು ಸಹಕಾರಿಯಾಗುತ್ತದೆ.

    ಪ್ರಾಯೋಗಿಕವಾಗಿ ಯಶಸ್ವಿ ಪದ್ಧತಿ: ಶಿಕ್ಷಣ ಅಟ್ ಹೋಂ ಕಾರ್ಯಕ್ರಮ ಮೈಂಡ್‌ಟ್ರೀ ಸಂಸ್ಥೆ ಕನಕಪುರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ವಾಡಿದ್ದು, ಯಶಸ್ವಿ ಎನ್ನಿಸಿದೆ, ಜು.30ರಿಂದ ಇಲ್ಲಿಯೂ ಅನುಷ್ಟಾನವಾಗಿದೆ. ಜಿಲ್ಲೆಯ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ 76449 ವಿದ್ಯಾರ್ಥಿಗಳೊಂದಿಗೆ ಚಿತ್ರದುರ್ಗ ಜಿಲ್ಲೆಯ 58520 ವಿದ್ಯಾರ್ಥಿಗಳೂ ಸಹ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
    ಅಬ್ರಾಮ್ ಮೋಸೆಸ್ ಜಿಎಂ, ಮೈಂಡ್‌ಟ್ರೀ ಸಂಸ್ಥೆ

    ಶಿಕ್ಷಕರು ತಮ್ಮ ಶಾಲೆಯ 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮತ್ತು ಚಟುವಟಿಕೆ ಪುಸ್ತಕಗಳನ್ನು ಕಡ್ಡಾಯವಾಗಿ ಅಭ್ಯಾಸ ವಾಡುವಂತೆ ವಾರ್ಗದರ್ಶನ ನೀಡುವ ಮೂಲಕ ನಿರಂತರ ಕಲಿಕೆಗೆ ಪ್ರೋತ್ಸಾಹಿಸಬೇಕು.
    ಸಿ.ನಂಜಯ್ಯ ಡಿಡಿಪಿಐ, ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts