More

    ಶಿಕ್ಷಣ ಅಂಕಗಳಿಗೆ ಸೀಮಿತವಾಗಬಾರದು

    ಮುಧೋಳ: ಶಿಕ್ಷಣ ಕೇವಲ ಅಂಕಗಳನ್ನು ಪಡೆಯುವುದಕ್ಕಲ್ಲ, ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಳ್ಳೆಯ ಕನಸು ಕಟ್ಟಿಕೊಳ್ಳಬೇಕು ಎಂದು ಆರ್‌ಎಂಜಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ನಾಗರಾಜ ನಾಡಗೌಡ ಹೇಳಿದರು.

    ನಗರದ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಾಚಾರ್ಯ ಡಾ. ಪ್ರಭು ಸಜ್ಜನ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತರಬೇಕೆಂದು ತಿಳಿಸಿದರು.

    ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾಲೇಜಿಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಉಪನ್ಯಾಸಕ ಎಸ್. ಎನ್.ಪಡಸಲಗಿ, ಜಿ.ವಿ. ಪಾಟೀಲ, ಪಿ.ಬಿ. ಬೆಳವಡಿ, ಎಸ್.ಎಸ್. ನನಜಗಿ, ವಿ.ಆರ್. ಕಡಿಬಾಗಿಲು, ಅನುಷಾ ತಳೇವಾಡ ಮತ್ತಿತರರಿದ್ದರು. ಎಂ.ಎಸ್. ನದಾಫ್ ಸ್ವಾಗತಿಸಿ, ವಿ.ಆರ್. ಕಡಿಬಾಗಿಲು ನಿರೂಪಿಸಿದರು. ಅರುಣಕುಮಾರ ಕೊಪ್ಪದ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts