More

    ಜಾತಿಗಿಂತ ಶಿಕ್ಷಣ, ಜ್ಞಾನ ದೊಡ್ಡದು

    ಮುಗಳಖೋಡ: ಸಂಸ್ಕಾರವಂತ ಮಗು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ. ಸಮಾಜದಲ್ಲಿ ಜಾತಿ ದೊಡ್ಡದಲ್ಲ. ಶಿಕ್ಷಣ, ಜ್ಞಾನ ದೊಡ್ಡದು ಎಂದು ಅಚಲೇರಿ-ಜಿಡಗಾ ಮಠದ ಪೀಠಾಧಿಪತಿ ಬಸವರಾಜೇಂದ್ರ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರೀ ಸಿದ್ದರಾಮೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ, ಶ್ರೀ ಸಿದ್ದರಾಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು, ಶ್ರೀ ಸಿದ್ದರಾಮೇಶ್ವರ ವಾಣಿಜ್ಯ ಹಾಗೂ ಕಲಾ ಪದವಿ ಮಹಾವಿದ್ಯಾಲಯದ 18ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌ಎಸ್‌ಎಲ್ಸಿ, ಪಿಯುಸಿ ದ್ವಿತೀಯ ಹಾಗೂ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ತಂದೆ-ತಾಯಂದಿರ ಪಾದಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

    ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿ, ದೇವಸ್ಥಾನಗಳಿಗಿಂತ ಶಾಲೆಗಳಿಗೆ ನಾವು ಮಹತ್ವ ಕೊಡಬೇಕು. ಶಾಸಕನಾದ ನಾನು, ನನ್ನ ಮೊದಲ ಸಂಬಳವನ್ನು ಸರ್ಕಾರಿ ಪ್ರೌಢಶಾಲೆಗೆ ನೀಡಿದ್ದೇನೆ ಎಂದು ತಿಳಿಸಿದರು. ಕಾಡಾ ಮಾಜಿ ಅಧ್ಯಕ್ಷ ಅಡವೆಪ್ಪ ಇಟಗಿ, ಜಿಪಂ ಮಾಜಿ ಸದಸ್ಯ ಡಿ.ಎಸ್.ನಾಯಿಕ, ಡಾ.ಸಿ.ಆರ್.ಗುಡಸಿ, ಅಶೋಕ ಕೊಪ್ಪದ ಮಾತನಾಡಿದರು.

    ದಸ್ತಗಿರ್ ಕಾಗವಾಡೆ, ಪ್ರದೀಪ ಹಾಲಗುಣಿ, ಸಂಸ್ಥೆ ಅಧ್ಯಕ್ಷ ಸಿದ್ಧಾರೂಢ ಈಟಿ, ಪ್ರಧಾನ ಕಾರ್ಯದರ್ಶಿ ಅಶೋಕ ಕೊಪ್ಪದ, ಹನುಮಾಸಾಬ ನಾಯಿಕ, ರಾಜು ಕಳ್ಳಿಗುದ್ದಿ, ರಾಜಶೇಖರ ಕೂಹಳ್ಳಿ, ಮಲ್ಲಪ್ಪ ಶೇಗುಣಿಸಿ, ಮಲ್ಲಿಕಾರ್ಜುನ ಯಡವಣ್ಣವರ, ನಾಗಪ್ಪ ಅರಬಾವಿ ಇತರರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಪ್ರಾಚಾರ್ಯ ಎಸ್.ಜಿ.ಹಂಚಿನಾಳ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ವಿ.ಎಂ.ಕರಡಿಮಠ ನಿರ್ಮಿಸಿದರು. ಶಿಕ್ಷಕಿ ಶೋಭಾ ಢವಳೇಶ್ವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts