More

    ಹಾಮಾನಾ ಚಿಂತನೆ ಸಕಲರಿಗೂ ಮಾರ್ಗದರ್ಶಕ

    ಶಿವಮೊಗ್ಗ: ನಮ್ಮ ನಡುವೆ ಅನೇಕ ಸಾಧಕ ದಿಗ್ಗಜರು ಬಂದುಹೋಗಿದ್ದಾರೆ. ಆದರೆ ಅವರ ಚಿಂತನೆ, ವ್ಯಕ್ತಿತ್ವಗಳನ್ನು ಸ್ಮರಿಸುವುದರಿಂದ ಅವರು ಸಾಮಾಜಿಕವಾಗಿ ಎಂದೆಂದಿಗೂ ಅಮರರಾಗಿರುತ್ತಾರೆ ಎಂದು ಸಾಹಿತಿ ಡಾ. ಕುಮಾರ ಚಲ್ಯ ಹೇಳಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ತೆರೆದ ತಂತ್ರಾಂಶದ ಮೂಲಕ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲೆಯ ಸಾಧಕರ ಸ್ಮರಣೆ ಮತ್ತು ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮದಲ್ಲಿ ಡಾ. ಹಾ.ಮಾ.ನಾಯಕ ಅವರ ಸಾಹಿತ್ಯ-ಸಾಂಸ್ಕೃತಿಕ ಚಿಂತನೆ ಕುರಿತು ಮಾತನಾಡಿದರು.

    ಹಾ.ಮಾ.ನಾಯಕ ಅಂಕಣಗಳ ಮೂಲಕ ವಿಶೇಷತೆ ಮೆರೆದಿದ್ದರು. ಶೈಕ್ಷಣಿಕ, ಜನಪದ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ನಾಡಿನ ಹೆಮ್ಮೆಯ ಭಾಷಾ ವಿದ್ವಾಂಸರಲ್ಲಿ ಹಾ.ಮಾ.ನಾ. ಕೂಡ ಒಬ್ಬರು. ಆದರೆ ಭಾಷಾ ಸಂಶೋಧನೆ ಮತ್ತು ಅದರ ಬೆಳವಣಿಗೆ ಕುರಿತು ಅವರು ನೀಡಿದ ಎಷ್ಟೋ ಕೊಡುಗೆಗಳು ಬೆಳಕಿಗೆ ಬಾರದಿರುವುದು ಬೇಸರದ ಸಂಗತಿ ಎಂದರು.

    ವಿದ್ಯಾರ್ಥಿಗಳಲ್ಲಿ ಸದಾ ಆತ್ಮವಿಶ್ವಾಸ ತುಂಬುವ, ಅಧ್ಯಯನಶೀಲ ವ್ಯಕ್ತಿತ್ವ ರೂಪಿಸುವ, ಶೈಕ್ಷಣಿಕ ಕೇಂದ್ರಗಳ ರೀತಿನೀತಿಗಳ ಕುರಿತು ಸದಾ ಚಿಂತನೆ ನಡೆಸುತ್ತಿದ್ದರು. ಈ ಮೂಲಕ ಅವರ ಮೇರು ಚಿಂತನೆಗಳು ಇಂದಿನ ಉಪನ್ಯಾಸಕ ಸಮೂಹಕ್ಕೆ ಮಾರ್ಗದರ್ಶಕ ಎಂದು ತಿಳಿಸಿದರು.

    ಹಾ.ಮಾ.ನಾ. ಅಂಕಣ ಬರಹಗಳ ಕುರಿತು ಹಿರಿಯ ಸಾಹಿತಿ ಡಾ. ಎಸ್.ಪಿ.ಪದ್ಮಪ್ರಸಾದ, ಶೈಕ್ಷಣಿಕ ಚಿಂತನೆಗಳ ಕುರಿತು ತೀರ್ಥಹಳ್ಳಿ ತುಂಗಾ ಕಾಲೇಜಿನ ಅಧ್ಯಾಪಕ ಡಾ. ಬಿ.ಗಣಪತಿ, ಜನಪದ ಚಿಂತನೆಗಳ ಕುರಿತು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಉಪನ್ಯಾಸಕ ಡಾ. ಮುತ್ತಯ್ಯ ಮಾತನಾಡಿದರು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts