More

    ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ

    ಬೋರಗಾಂವ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದು ನರಾಟೆ ಅಭಿಪ್ರಾಯಪಟ್ಟರು.

    ಶುಕ್ರವಾರ ಸಮೀಪದ ಶ್ರೀಪೆವಾಡಿ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡು ಅವರು ಮಾತನಾಡಿದರು. ನಿಪ್ಪಾಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 55 ಹೊಸ ಕೊಠಡಿಗಳು ನಿರ್ಮಾಣವಾಗಲಿವೆ. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ನಗರ ಪ್ರದೇಶ ಸೇರಿ ಗ್ರಾಮೀಣ ಭಾಗಗಳಲ್ಲಿಯ ಸರ್ಕಾರಿ ಶಾಲೆಗಳಲ್ಲಿ ಹೊಸ ಶಾಲಾ ಕೊಠಡಿ ನಿರ್ಮಾಣ, ಶಾಲಾ ಕಟ್ಟಡ ದುರುಸ್ತಿಗೆ ರಾಜ್ಯದಲ್ಲೇ ಅತಿ ಹೆಚ್ಚು ಅನುದಾನ ತಂದು, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದಾರೆ ಎಂದು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನಿಡಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

    ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಂ.ಪಿ. ಪಾಟೀಲ, ತಾಪಂ ಸದಸ್ಯ ದತ್ತಾತ್ರೇಯ ವಡಗಾಂವೆ, ಭಾಸ್ಕರ್ ಖೋತ, ಸುನೀಲ ಸುತಾರ, ದಯಾನಂದ ಸ್ವಾಮಿ, ರಾಜೇಂದ್ರ ಖೋತ, ಸುನೀಲ ಮಾನೆ, ಪಾಂಡುರಂಗ ಶಿಂಪುಕಡೆ, ಸುಜೀತ ಶಿಂಪುಕಡೆ, ವಿಜಯ ಪವಾರ, ಕೇಶವ ಕುಂಬಾರ, ಸಚಿನ ಕುಂಬಾರ, ಮಹೇಶ ಶಿಂಪುಕಡೆ, ರಂಗರಾವ ವಡಗಾಂವೆ, ಬಸವರಾಜ ಹುಂದರಿ, ಆರ್.ಎಸ್. ತರಾಳ, ಪಂಡಿತ ಶಿಂಪುಕಡೆ ಇದ್ದರು. ಎಸ್.ಎಂ. ಸಿದ್ನಾಳೆ ಸ್ವಾಗತಿಸಿದರು. ಎಸ್.ಆರ್. ನಿಕಂ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts