More

    ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ; ಶ್ರೀ ಮಂಗಳಾನಾಥ ಸ್ವಾಮೀಜಿ ಆಶೀರ್ವಚನ 

    ಶ್ರೀನಿವಾಸಪುರ:  ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪಾಲಕರು, ಶಿಕ್ಷಕರು ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಯ ಗುರಿ ತಲುಪುವವರೆಗೂ ಪ್ರೋತ್ಸಾಹಿಸಬೇಕು ಎಂದು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಖಾ ಮಠದ ಶ್ರೀ ಮಂಗಳಾನಾಥ ಸ್ವಾಮೀಜಿ ಹೇಳಿದರು.

    ಪಟ್ಟಣದ ಹೊರವಲಯದ ಬೈರಪಲ್ಲಿಯ ಬೈರವೇಶ್ವರ ವಿದ್ಯಾನಿಕೇತನದ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಮಾತೃಭೋಜನ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಪಾಲಕರು ತಮ್ಮ ಮಕ್ಕಳಿಗೆ ಮನೆತನದ ಆಚಾರ ವಿಚಾರಗಳ ಬಗ್ಗೆ ತಿಳಿಸಬೇಕು. ಶಿಕ್ಷಣಕ್ಕೆ ನೀಡುವ ಒತ್ತನ್ನು ಸಂಸ್ಕಾರ ನೀಡಲು ಮುಂದಾಗಬೇಕು. ವಿದ್ಯಾರ್ಥಿಗಳು ಜ್ಞಾನದ ಜತೆಗೆ ಸಂಸ್ಕಾರವನ್ನು ಬೆಳಸಿಕೊಳ್ಳಿ ಎಂದರು.

    ಈ ಕಾರ್ಯಕ್ರಮದಲ್ಲಿ ಕುವೆಂಪು ಅವರ ಜನ್ಮದಿನವನ್ನು ಆಚರಿಸಿ, ಹುಟ್ಟುತ್ತಾ ಎಲ್ಲರೂ ಮಾನವರಾಗಿ ಹುಟ್ಟುತ್ತಾರೆ, ಬೆಳೆಯುತ್ತಾ ಬೆಳೆಯುತ್ತಾ ವಿಶ್ವಮಾನವರಾಗುತ್ತಾರೆ ಎಂದರು.

    ಬಿಜಿಎಸ್​ಸಂಸ್ಥೆಗಳ ಆಡಳಿತಾಧಿಕಾರಿ ಎನ್​.ಎಸ್​. ಶಿವರಾಮರೆಡ್ಡಿ ಮಾತನಾಡಿ, ಪಾಲಕರು ತಮ್ಮ ಮಗು ಶಾಲೆಯಿಂದ ಸಂಜೆ ಬಂದ ತಕ್ಷಣ ಶಾಲೆಯಲ್ಲಿ ಏನು ಪಾಠ ಪ್ರವಚನಗಳು ಆಗಿದೆ ಎಂದು ತಿಳಿಯಬೇಕು. ಮಗುವಿನ ಗುರಿ ಸಾಧಿಸುವ ಸಲುವಾಗಿ ಓದುವಂತಹ ವಾತಾವರಣ ಸೃಷ್ಟಿಸಬೇಕು ಎಂದರು.

    ಬಿಇಒ ವಿ. ಉಮಾದೇವಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಗಳಿಸುವುದು ಕಷ್ಟ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ರ್ನಿದಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಬೋಧಿಸುಂತಹ ಪಾಠ ಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದರು.

    ತಾಲೂಕು ಒಕ್ಕಲಿಗರ ಸಂದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ನೀಲಟೂರು ಚಿನಪರೆಡ್ಡಿ, ಚಿಂತಾಮಣಿ ಒಕ್ಕಲಿಗರ ನೌಕರರ ಸಂದ ಅಧ್ಯಕ್ಷ ವೆಂಕಟರಾಮರೆಡ್ಡಿ, ಮುಖಂಡರಾದ ಚೊಕ್ಕರೆಡ್ಡಿ, ವೈದೇಹಿ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts