More

    ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ!

    ನವದೆಹಲಿ: ಕರೊನಾ ಲಾಕ್​ ಡೌನ್ ಅವಧಿಯ ನಡುವೆಯೂ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಕಾಂಗ್ರೆಸ್ ನಾಯಕರಿಗೆ ಭಾರಿ ಆಘಾತವನ್ನೇ ನೀಡಿದೆ. ಕಾಂಗ್ರೆಸ್ ಪ್ರಾಯೋಜಕತ್ವದ ಸಂಸ್ಥೆಯ 16 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಅದು ವಶಕ್ಕೆ ತೆಗೆದುಕೊಂಡು ಅಕ್ರಮ ಆಸ್ತಿ ಪ್ರಕರಣಕ್ಕೆ ಅಟ್ಯಾಚ್ ಮಾಡಿದೆ.

    ಮುಂಬೈನ ಟೋನಿ ಬಾಂದ್ರಾ ಪ್ರದೇಶದಲ್ಲಿರುವ ಒಂಬತ್ತು ಮಹಡಿಯ ಕಟ್ಟಡದ ಒಂದು ಭಾಗ ಇದಾಗಿದ್ದು, ಇದರ ಮಾಲೀಕತ್ವ ಅಸೋಸಿಯೇಟೆಡ್​ ಜರ್ನಲ್ಸ್​ ಲಿಮಿಟೆಡ್​(ಎಜೆಎಲ್​)ನದ್ದು. ಜಾರಿ ನಿರ್ದೆಶನಾಲಯ ಈ ಸಂಸ್ಥೆ ವಿರುದ್ಧ ಮನಿಲಾಂಡರಿಂಗ್ ಪ್ರಕರಣ ದಾಖಲಿಸಿದ್ದು, ಅದರ ಭಾಗವಾಗಿಯೇ ಈ ಆಸ್ತಿಯನ್ನು ಜೋಡಿಸಿಕೊಂಡಿದೆ. ಇದರ ಮೌಲ್ಯ 16.38 ಕೋಟಿ ರೂಪಾಯಿ. ಈ ಸಂಬಂಧ ಎಜೆಎಲ್​ ಮತ್ತು ಅದರ ಸಿಎಂಡಿಯೂ ಆಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಮೋತಿಲಾಲ್ ವೋರಾ ಅವರ ವಿರುದ್ಧ ಪ್ರಕರಣವನ್ನೂ ದಾಖಲಿಸಿಕೊಂಡಿದೆ.

    ಇದನ್ನೂ ಓದಿ: ಅಧಿಕಾರಿಗಳು ಕರೆ ಸ್ವೀಕರಿಸಿದ್ದರೆ ಬದುಕಿ ಬರುತ್ತಿದ್ದರೆ 16 ವಲಸೆ ಕಾರ್ಮಿಕರು?

    ಎಜೆಎಲ್​ ನ ಸಂಪೂರ್ಣ ಆಡಳಿತ ಗಾಂಧಿ ಕುಟುಂಬ ಮತ್ತು ಕೆಲವು ಹಿರಿಯ ಕಾಂಗ್ರೆಸ್ ನೇತಾರರ ಅಧೀನದಲ್ಲಿದೆ. ಇದೇ ಕಂಪನಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುತ್ತಿದೆ. ಮುಂಬೈನ ಟೋನಿ ಬಾಂದ್ರಾ ಪ್ರದೇಶದಲ್ಲಿರುವ 341ನೇ ಸರ್ವೇ ನಂಬರ್​ನ ಪ್ಲಾಟ್​ ಸಂಖ್ಯೆ 2ರಲ್ಲಿ ಒಂಬತ್ತು ಮಹಡಿ ಕಟ್ಟಡ ಒಟ್ಟು ಎರಡು ಬೇಸ್​ಮೆಂಟ್​ಗಳನ್ನು ಒಳಗೊಂಡಿದ್ದು, 15,000 ಚ.ಮೀ. ಪ್ರದೇಶದಲ್ಲಿ ಕಟ್ಟಲಾಗಿದೆ. ಇದರ ಮೌಲ್ಯ 120 ಕೋಟಿ.

    ಈ ಪ್ರಕರಣದಲ್ಲಿ ಇಡಿ ಆರೋಪ ಪಟ್ಟಿಯಲ್ಲಿ ಹರಿಯಾಣ ದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಭೂಪಿಂದರ್​ ಸಿಂಗ್ ಹೂಡಾ ಮತ್ತು ಮೋತಿಲಾಲ್ ವೋರಾ ಅವರು ಪ್ರಮುಖ ಆರೋಪಿಗಳು. ಪಂಚ್​​ಕುಲಾದಲ್ಲಿ ಅಕ್ರಮವಾಗಿ ಎಜೆಎಲ್​ಗೆ ಸೈಟ್​ ಒದಗಿಸಿದ್ದಲ್ಲದೆ, ಬಾಂದ್ರಾದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡು ದೆಹಲಿಯ ಬಹಾದೂರ್ ಶಾಹ್ ಝಫರ್ ಮಾರ್ಗ್​ನಲ್ಲಿರುವ ಸಿಂಡಿಕೇಟ್ ಬ್ಯಾಂಕ್​ನಿಂದ ಸಾಲವನ್ನೂ ಕೊಡಿಸಿದ್ದಾರೆ. ಸದ್ಯದ ಮಟ್ಟಿಗೆ ಅಪರಾಧದ ಆರೋಪಕ್ಕೆ ಅನುಗುಣವಾಗಿ ಕೇವಲ 16.38 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನಷ್ಟೇ ಅಟ್ಯಾಚ್ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಶ್ವೇತಭವನದಲ್ಲಿ ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ…ಇವಾಂಕಾ ಟ್ರಂಪ್​ ಅಪಾಯದಲ್ಲಿ?

    ಹರಿಯಾಣ ಸರ್ಕಾರ 1982ರಲ್ಲೇ ಪಂಚಕುಲಾದ ಸೆಕ್ಟರ್​ 6ರಲ್ಲಿ ಹಂಚಿಕೆ ಮಾಡಿದ್ದ ಸಿ-17 ಎಂಬ ಪ್ಲಾಟನ್ನು ಇಡಿ ಈಗಾಗಲೇ ಅಟ್ಯಾಚ್ ಮಾಡಿಕೊಂಡಿದೆ. ಈ ಸಂಬಂಧ ಹೂಡಾ ಮತ್ತು ವೋರಾ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಆದಾಗ್ಯೂ, 1992ರಲ್ಲಿ ಎಜೆಎಲ್ ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣ ಅದನ್ನು ಸರ್ಕಾರ ಹಿಂಪಡೆದಿತ್ತು. ಆದರೆ, ಹೂಡಾ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅದನ್ನು ಎಜೆಎಲ್​ಗೆ ಮತ್ತೆ ಹಂಚಿಕೆ ಮಾಡಿದರು. 2005ರ ಆಗಸ್ಟ್ 28ರಂದು ಇದಕ್ಕೆ ಸಂಬಂಧಿಸಿದ ಆದೇಶವಾಗಿದ್ದು ಅದರ ಮೌಲ್ಯ 59,39,200 ಎಂದು ನಮೂದಿಸಲಾಗಿತ್ತು. ಆ ಸಂದರ್ಭದಲ್ಲಿ ಅದರ ನಿಜವಾದ ಬೆಲೆ 64.93 ಕೋಟಿ ರೂಪಾಯಿ ಆಗಿತ್ತು ಎಂದು ಇಡಿ ಆರೋಪಿಸಿದೆ. (ಏಜೆನ್ಸೀಸ್)

    ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts