More

    ಆರ್ಥಿಕ ಸಮೀಕ್ಷೆ ಪ್ರಕಾರ 2020-21ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 6 ರಿಂದ 6.5ರ ಬೆಳವಣಿಗೆ ದಾಖಲಿಸಲಿದೆ

    ನವದೆಹಲಿ: ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆಯ ಪ್ರಕಾರ ದೇಶಿಯ ಒಟ್ಟು ಉತ್ಪನ್ನ(ಜಿಡಿಪಿ)ವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 5 ರಷ್ಟು ಬೆಳವಣಿಗೆಯಾಗಿದ್ದು, 2021ರ ಮಾರ್ಚ್​ ಅಂತ್ಯಕ್ಕೆ ಶೇ 6 ರಿಂದ 6.5 ರ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ.

    ಕಳೆದ ವರ್ಷದ ಸಮೀಕ್ಷೆಯಲ್ಲಿ ಹಾಕಿಕೊಳ್ಳಲಾಗಿದ್ದ ಈ ವರ್ಷದ ಅಂದಾಜು ಶೇ. 7 ರ ಜಿಡಿಪಿ ಗುರಿಗೆ ಕೆಳಮುಖ ಬೆಳವಣಿಗೆಯಾಗಿದ್ದು, ತನ್ನ ಗುರಿ ತಲುಪಬೇಕಾದಲ್ಲಿ ಏಪ್ರಿಲ್​ನಿಂದ ಆರಂಭವಾಗುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಲ ಸುಧಾರಣೆಗಳನ್ನು ಕೇಂದ್ರ ಸರ್ಕಾರ ತರಬೇಕಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಹೀಗಾಗಿ ಈ ವರ್ಷ ಕೇಂದ್ರ ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ.

    ಇನ್ನು ಆರ್ಥಿಕ ಸಮೀಕ್ಷೆ ಬಗ್ಗೆ ತಿಳಿಯಬೇಕಾದ ಪ್ರಮುಖಾಂಶಗಳೆಂದರೆ ಸಮೀಕ್ಷೆಯು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸಬ್ರಮಣಿಯನ್​ ಮತ್ತು ತಂಡದಿಂದ ತಯಾರಾಗಿದೆ. ಬಜೆಟ್​ ಮಂಡನೆಗೂ ಮುನ್ನಾದಿನ ಬಜೆಟ್​ ಅಧಿವೇಶನದಲ್ಲಿ 2019-20 ಸಾಲಿನ ಆರ್ಥಿಕ ಸಮೀಕ್ಷೆಯನ್ನು ಪ್ರತಿ ವರ್ಷ ಬಿಡುಗಡೆ ಮಾಡಲಾಗುತ್ತದೆ.

    ಹಣಕಾಸಿನ ಕೊರತೆಗೆ ಸಾಕಷ್ಟು ಸುಧಾರಣೆ ತರುವ ಗುರಿಯನ್ನು ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ಸರ್ಕಾರ ಹಾಕಿಕೊಂಡಿದೆ. ಖಾಸಗಿ ಬಂಡವಾಳ ಹೆಚ್ಚಿಗೆ, ಮೂಲಭೂತ ಸೌಕರ್ಯ ಮೇಲೆ ಸರ್ಕಾರದಿಂದ ಹೆಚ್ಚು ಅನುದಾನ ಬಿಡುಗಡೆಯಾಗಬಹುದು ಎಂದು 2019-20ನೇ ಸಾಲಿನ ಆರ್ಥಿಕ ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯನ್ನು ಇಂದು ನಿರ್ಮಲಾ ಸೀತಾರಾಮನ್​ ಅವರು ಸಂಸತ್ತಿನಲ್ಲಿ ಮಂಡಿಸಿದ್ದಾರೆ.

    ಮಾರಾಟವಾಗದೇ ಉಳಿದಿರುವ ಆಸ್ತಿಗಳನ್ನು ಸಂಪೂರ್ಣ ತೆರವುಗೊಳಿಸಲು ರಿಯಲ್​ ಎಸ್ಟೇಟ್​ ಕಂಪನಿಗಳು ವಸತಿ ದರವನ್ನು ಖಂಡಿತವಾಗಿ ಕಡಿತಗೊಳಿಸಲಿವೆ ಎಂದು ಸಮೀಕ್ಷೆ ಹೇಳಿದೆ. ಅತಿ ಹೆಚ್ಚು ಮನೆ ಮಾರಾಟಗಳು ಬ್ಯಾಂಕ್ ಮತ್ತು ಬ್ಯಾಂಕೇತರ ಫೈನಾನ್ಶಿಯಲ್​ ಕಂಪನಿಗಳ​ ಬ್ಯಾಲೆನ್ಸ್​ ಶೀಟ್ ​ಅನ್ನು ಸ್ಪಷ್ಟವಾಗಿಸಲಿದೆ ಎಂದು ಹೇಳಿದೆ.

    ವ್ಯಾಪಾರ ವಿಚಾರವಾಗಿ ಬಂದರೆ ಮುಂದುವರಿದಿರುವ ಜಾಗತಿಕ ವ್ಯಾಪಾರ ಒತ್ತಡದಿಂದ ಭಾರತದ ರಫ್ತಿನ ಮೇಲೆ ಹೊಡೆತ ಬೀಳಲಿದೆ ಎಂದು ಸಮೀಕ್ಷೆ ಹೇಳಿದೆ. ಭಾರತ ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಮಂದಗತಿಯನ್ನು ಎದುರಿಸಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ​ ಆರ್ಥಿಕ ಬೆಳವಣಿಗೆ 4.5 ರಷ್ಟು ಕೆಳಗೆ ಜಾರಿತ್ತು. ಇದು ಪ್ರತಿ ವರ್ಷ ಕೆಲಸಕ್ಕೆ ಸೇರುವ ಲಕ್ಷಾಂತರ ಯುವ ಜನಾಂಗದ ಮೇಲೆ ಪ್ರಭಾವ ಬೀರಿತ್ತು ಎಂದು ಸಮೀಕ್ಷೆ ಹೇಳಿದೆ.

    ಮೊದಲ ಹಂತದ ಬಜೆಟ್​ ಅಧಿವೇಶನ ಇಂದು ಆರಂಭವಾಗಿದ್ದು, ಫೆ.11ರವರೆಗೂ ನಡೆಯಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts