More

    ಆರ್ಥಿಕ ಸ್ಥಿತಿ ಸುಧಾರಣೆಗೆ ಶ್ರೀಗಂಧ ಕೃಷಿ ಪೂರಕ

    ಗಂಗಾವತಿ: ಆರ್ಥಿಕಾಭಿವೃದ್ಧಿಗಾಗಿ ರೈತರು ಅರಣ್ಯಾಧಾರಿತ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಬೆಕಿದ್ದು, ಶ್ರೀಗಂಧ ಬೆಳೆಯತ್ತ ಗಮನಹರಿಸುವಂತೆ ರಾಯಚೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಶಿವಶರಣಪ್ಪ ಬಿ.ಗೌಡಪ್ಪ ಹೇಳಿದರು.

    ಇದನ್ನೂ ಓದಿ: ಶ್ರೀಗಂಧ ಬೆಳೆದರೆ ಆರ್ಥಿಕ ಲಾಭ: ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ್ ಸಲಹೆ

    ನಗರದ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಕೆವಿಕೆ, ಮರ ವಿಜ್ಞಾನ ಮತ್ತು ತಾಂತ್ರಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಗಂಧ ಮರ ಆಧಾರಿತ ಕೃಷಿ ಅರಣ್ಯ ಘಟಕಗಳಿಗಾಗಿ ತರಬೇತಿ ಕಾರ್ಯಗಾರ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

    ಶ್ರೀಗಂಧ ಬೆಳೆಗೆ ಸರ್ಕಾರ ಹಲವು ಯೋಜನೆಗಳನ್ನು ಪ್ರಕಟಿಸಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ತಜ್ಞರ ಸಲಹೆಯಂತೆ ಶ್ರೀಗಂಧ ಮರಗಳನ್ನು ಬೆಳೆಯುವಂತೆ ಸಲಹೆ ನೀಡಿದರು.

    ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಸಿ.ಆನಂದ ಮಾತನಾಡಿ, ಶ್ರೀಗಂಧ ಬೆಳೆಗಳಿಗೆ ಸರ್ಕಾರದಿಂದ ಪ್ರೋತ್ಸಾಹವಿದ್ದು, ಸೌಲಭ್ಯಗಳಿಗಾಗಿ ಇಲಾಖೆ ಸಂಪರ್ಕಿಸಬಹುದಾಗಿದೆ. ಆರ್ಥಿಕ ಸ್ಥಿತಿ ಸುಧಾರಣೆಗೆ ಶ್ರೀಗಂಧ ಕೃಷಿ ಪೂರಕವಾಗಿದೆ ಎಂದರು.

    ಐಡಬ್ಲುೃಎಸ್‌ಟಿ ತಾಂತ್ರಿಕ ಅಧಿಕಾರಿ ಎಂ.ಮಮತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ಕೃಷಿ ಜಂಟಿ ನಿರ್ದೇಶಕ ಟಿ.ರುದ್ರೇಶಪ್ಪ, ವಿವಿ ವ್ಯವಸ್ಥಾಪನೆ ಮಂಡಳಿ ಸದಸ್ಯರಾದ ಜಿ.ಶ್ರೀಧರ್, ಮಲ್ಲಿಕಾರ್ಜುನ ವನದುರ್ಗ, ವಿಶೇಷಾಧಿಕಾರಿ ಡಾ.ಜೆ.ವಿಶ್ವನಾಥ, ತಜ್ಞರಾದ ಡಾ.ಆರ್. ಸುಂದರರಾಜ, ಡಾ.ಅಮರೇಗೌಡ ಪಾಟೀಲ್, ಡಾ.ಕವಿತಾ ಉಳ್ಳಿಕಾಶಿ, ಡಾ.ಆರ್. ಜ್ಯೋತಿ, ಡಾ.ಜೆ.ರಾಧಾ, ಡಾ.ಫಕ್ಕೀರಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕನಕಪ್ಪ ಮಳಗಾವಿ, ರೈತ ಪ್ರತಿನಿಧಿಗಳಾದ ರಮೇಶ ಬಳೂಟಗಿ ಗಾದಿಲಿಂಗಪ್ಪ, ಕಂಟೆಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts