More

    ಗ್ರಾಮ ಸ್ವರಾಜ್ಯ ಬಲಪಡಿಸಿದರೆ ಆರ್ಥಿಕ ಸ್ವಾವಲಂಬನೆ: ನಾಗೇಶ ಹೆಗಡೆ

    ಬೆಂಗಳೂರು ಗ್ರಾಮ ಸ್ವರಾಜ್ಯವನ್ನು ಬಲಪಡಿಸಿದಾಗ ದೇಶದ ಆರ್ಥಿಕ ಸ್ವಾವಲಂಬನೆಯ ಕನಸು ಸಾಕಾರಗೊಳಿಸಲು ಸಾಧ್ಯವಾಗಲಿದೆ ಎಂದು ಪರಿಸರ ತಜ್ಞ ನಾಗೇಶ ಹೆಗಡೆ ತಿಳಿಸಿದರು.

    ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಸಿರು ಇಂಧನ ಎಂಬುದು ಗುಡಿ ಕೈಗಾರಿಕೆಗಳಿಂದ, ಗ್ರಾಮಗಳಿಂದಲೂ ಸಾಧ್ಯವಿದೆ. ಪೆಟ್ರೋಲಿಯಂ ಮೇಲಿನ ಅವಲಂಬನೆಯನ್ನು ಈ ಮಾರ್ಗದಿಂದಲೂ ಪರ್ಯಾಯ ಕಂಡುಕೊಳ್ಳಲು ಸಾಧ್ಯವಿದೆ. ಈ ಎಲ್ಲ ಕ್ರಿಯೆಗಳಿಂದ ಗಾಂಧೀಜಿಯವರ ಸ್ವರಾಜ್ಯ ಕಲ್ಪನೆಯನ್ನ ಸಾಕಾರಗೊಳಿಸಲು ಸಾಧ್ಯವಿದೆ ಎಂದರು.

    ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎಂ. ಜಯಕರ್ ಮಾತನಾಡಿ, ಗಾಂಧೀಜಿ ಅವರ ಆಶಯಗಳು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳ್ಳಬಾರದು. ಅವು ನಮ್ಮ ದಿನನಿತ್ಯದ ಕಾರ್ಯಗಳಲ್ಲಿರಬೇಕು ಎಂದರು.

    ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಟರಾಜ್ ಹುಳಿಯಾರ್ ಮಾತನಾಡಿ, ಗಾಂಧೀಜಿ ಅವರಿಗಿದ್ದ ಪ್ರಾಮಾಣಿಕತೆ, ಸತ್ಯ, ಅಹಿಂಸೆ, ಸಹಿಷ್ಣುತೆಯ ಅಂಶಗಳು ಜಗತ್ತಿನ ಎಲ್ಲರೂ ಅನ್ವಯಿಸಿಕೊಳ್ಳಬಹುದಾದ ಕಲ್ಪನೆಗಳಾಗಿವೆ ಎಂದರು.

    ಈ ವೇಳೆ ವಿವಿ ಕುಲಸಚಿವ ಶೇಖ್ ಲತ್ೀ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಶ್ರೀಕೀರ್ತಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts