More

    ಸಹಕಾರ ಸಂಘದಿಂದ ಆರ್ಥಿಕಾಭಿವೃದ್ಧಿ

    ಹನೂರು: ತಾಲೂಕಿನಲ್ಲಿ ಕೋಳಿ ಸಾಕಣೆ ಹಾಗೂ ಮಾರಾಟ ಸಹಕಾರ ಸಂಘವನ್ನು ಸ್ಥಾಪಿಸುವುದರಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದಾಗಿದ್ದು, ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಸೂಳೇರಿಪಾಳ್ಯ ಗ್ರಾಪಂ ಸದಸ್ಯ ಸೋಮಣ್ಣ ತಿಳಿಸಿದರು.

    ತಾಲೂಕಿನ ಮಂಗಲ ಗ್ರಾಮ ಸಮೀಪದ ಹುಲುಸುಗುಡ್ಡೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಭಾನುವಾರ ತಾಲೂಕು ಕೋಳಿ ಸಾಕಣೆ ಹಾಗೂ ಮಾರಾಟ ಸಂಘವನ್ನು ಸ್ಥಾಪಿಸುವ ಸಂಬಂಧ ಆಯೋಜಿಸಿದ್ದ ವಿವಿಧ ಗ್ರಾಮದ ಗ್ರಾಮಸ್ಥರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಹನೂರು ತಾಲೂಕು ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು, ಸುಮಾರು 350ಕ್ಕೂ ಹೆಚ್ಚು ಗ್ರಾಮಗಳಿವೆ. ಇಲ್ಲಿ ಬಹುತೇಕ ಕುಟುಂಬಗಳು ಬಡತನ ವರ್ಗಕ್ಕೆ ಸೇರಿದ್ದು, ಕೂಲಿ ಹಾಗೂ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಆರ್ಥಿಕವಾಗಿ ಸಬಲರಾಗಲು ಉಪ ಕಸುಬು ಅಗತ್ಯವಾಗಿದೆ. ಕೆಲವು ತಾಲೂಕಿನಲ್ಲಿ ಕೋಳಿ ಸಾಕಣೆ ಹಾಗೂ ಮಾರಾಟ ಸಹಕಾರ ಸಂಘ ಸ್ಥಾಪಿಸುವುದರ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಹನೂರು ತಾಲೂಕಿನಲ್ಲಿ ಸಂಘ ಸ್ಥಾಪನೆಯಾಗಿಲ್ಲ. ಹಾಗಾಗಿ ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ಸಂಘ ಸ್ಥಾಪನೆ ಅಗತ್ಯವಾಗಿದೆ. ಈ ದಿಸೆಯಲ್ಲಿ ಕಳೆದ 15 ದಿನದ ಹಿಂದೆ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯ ಅಧಿಕಾರಿಯನ್ನು ಭೇಟಿಯಾಗಿ ಚರ್ಚಿಸಲಾಗಿದ್ದು, ತಾಲೂಕಿನಲ್ಲಿ ಸಂಘ ಸ್ಥಾಪನೆಗೆ ಅವಕಾಶ ನೀಡಿದ್ದಾರೆ. ಸಂಘ ಸ್ಥಾಪನೆಯಾಗುವುದರಿಂದ ಉದ್ಯೋಗ ದೊರೆತು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಆದ್ದರಿಂದ 20 ಸದಸ್ಯರನ್ನು ಒಳಗೊಂಡಂತೆ ಸಂಘ ಸ್ಥಾಪಿಸಬೇಕಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಮಂಗಲ ಗ್ರಾಮದ ಮಂಟೇಸ್ವಾಮಿ, ಕನಕರಾಜು, ವೀರಭದ್ರ, ಬಸಪ್ಪನದೊಡ್ಡಿಯ ಶ್ರೀಕಂಠರಾಜೇ ಅರಸ್, ಕಣ್ಣೂರಿನ ಪ್ರಕಾಶ್, ಸುರೇಶ್, ಮಣಗಳ್ಳಿಯ ಲಿಂಗರಾಜು, ಕುಮಾರ್, ಚಿಕ್ಕ ಮಾಲಾಪುರದ ಕೆಂಪರಾಜು, ಬಸವರಾಜು, ಹನೂರಿನ ಕೆಂಪರಾಜು, ಹುಣಸೆಪಾಳ್ಯದ ನವೀನ್, ಲೊಕ್ಕನಹಳ್ಳಿಯ ಮಲ್ಲಯ್ಯ, ಬಂಡಳ್ಳಿಯ ಮುರುಗೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts