More

    ತಾಂತ್ರಿಕತೆಯಿಂದ ಆರ್ಥಿಕ ಪ್ರಗತಿ

    ಮುಂಡಗೋಡ: ರೈತರು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಕೃಷಿಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಸಂಗಮೇಶ ಬಿದರಿ ಹೇಳಿದರು.

    ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಪಟ್ಟಣದ ದೇಶಪಾಂಡೆ ಆರ್​ಸೆಟಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಿಸಾನ್ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

    ಆತ್ಮಾ ಯೋಜನೆಯಲ್ಲಿ ಆಯ್ಕೆಯಾದ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ ವಿಜೇತ ಐವರು ರೈತರಿಗೆ ಪ್ರಶಸ್ತಿ ಪತ್ರ, ತಲಾ 10 ಸಾವಿರ ರೂ. ಮೊತ್ತದ ಚೆಕ್ ನೀಡಲಾಗಿದೆ. ಈ ಪೈಕಿ ನಿರ್ಮಲಾ ಪಾಟೀಲ ಗೈರಾಗಿದ್ದರು. ಉಳಿದ ನಾಲ್ವರು ರೈತರಾದ ಶಂಕರ ಹೆಗಡೆ, ರಾಮು ಬಂಡಿವಾಡ, ಬಸವರಾಜ ನಡುವಿನಮನಿ, ಗಣೇಶ ಲಮಾಣಿ ಅವರಿಗೆ ಪ್ರಶಸ್ತಿ ಪತ್ರ, ಚೆಕ್ ನೀಡಿ ಸನ್ಮಾನಿಸಲಾಯಿತು.

    ಆತ್ಮಾ ಯೋಜನೆಯಲ್ಲಿ ರಚನೆಯಾದ 10 ರೈತ ಮಹಿಳಾ ಗುಂಪುಗಳ ಪೈಕಿ 4 ಗುಂಪುಗಳಿಗೆ ತಲಾ 5 ಸಾವಿರ ರೂ. ಮೊತ್ತದ ಹಾಗೂ ಒಂದು ಗುಂಪಿಗೆ 10 ಸಾವಿರ ರೂ. ಮೊತ್ತದ ಪ್ರೋತ್ಸಾಹ ಧನ ಚೆಕ್, 5 ಸಾವಿರ ರೂ. ಬೀಜ ಧನ ಚೆಕ್, ತೋಟಗಾರಿಕೆ ಇಲಾಖೆ ಮುಖಾಂತರ ಪ್ರಾತ್ಯಕ್ಷಿಕೆಗಳನ್ನು ಅನುಷ್ಠಾನ ಮಾಡಿದ 8 ರೈತ ಫಲಾನುಭವಿಗಳ ಪೈಕಿ ನಾಲ್ಕು ರೈತ ಫಲಾನುಭವಿಗಳಿಗೆ 4 ಸಾವಿರ ರೂ. ಮೊತ್ತದ ಪ್ರೋತ್ಸಾಹ ಧನ ಚೆಕ್ ವಿತರಿಸಲಾಯಿತು.

    ಪ್ರಶಸ್ತಿ ವಿಜೇತ ರೈತರು ತಾವು ಕೃಷಿಯಲ್ಲಿ ಸಾಧಿಸಿದ ಅನುಭವ ಹಂಚಿಕೊಂಡರು.

    ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಪಿ. ಕುಸೂರು, ರಮೇಶ ರಾಯ್ಕರ, ಎಸ್.ಎಸ್. ಗಾಣಿಗೇರ, ಪ್ರಗತಿಪರ ರೈತ ರಮೇಶ ಜಿಗಳೇರ, ಶಿವಕುಮಾರ ಪಾಟೀಲ, ಆತ್ಮಾ ಯೋಜನೆಯ ಸಿಬ್ಬಂದಿ, ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts