More

    ವೆಂಕೋಬರಾವ್ ಕಲಾಮಂದಿರಕ್ಕೆ ಗ್ರಹಣ

    ಶಿರಹಟ್ಟಿ: ದಕ್ಷಿಣ ಕರ್ನಾಟಕದಲ್ಲಿ ಗುಬ್ಬಿ ವೀರಣ್ಣ ಅವರು ಮನೆ ಮಾತಾದಂತೆ ಉತ್ತರ ಕರ್ನಾಟಕದಲ್ಲಿ ಶಿರಹಟ್ಟಿ ವೆಂಕೋಬರಾವ್ ಅವರು ಕನ್ನಡ ರಂಗಭೂಮಿಗೆ ಜೀವಂತಿಕೆ ತುಂಬಿದ ಕಲಾತಪಸ್ವಿ. ರಂಗ ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸೂಕ್ತ ಸ್ಥಳ ಬೇಕು ಎನ್ನುವ ಉದ್ದೇಶದಿಂದ ಪಟ್ಟಣದ ವಾಚನಾಲಯ ಕಟ್ಟಡದ ಹಿಂಬದಿಯಲ್ಲಿ ಅಂದಾಜು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಾಬ್ರಹ್ಮ ದಿ. ವೆಂಕೋಬರಾವ್ ಸ್ಮರಣಾರ್ಥ ಕಲಾ ಮಂದಿರ ನಿರ್ವಿುಸಲಾಗುತ್ತಿದೆ. ಆದರೆ, ಅನುದಾನ ಕೊರತೆಯಿಂದ 2 ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.

    ಬೆಂಗಳೂರಿನಲ್ಲಿ ಗುಬ್ಬಿ ವೀರಣ್ಣ ರಂಗ ಮಂದಿರ ನಿರ್ವಿುಸಿದಂತೆ ಶಿರಹಟ್ಟಿಯಲ್ಲಿ ವೆಂಕೋಬರಾವ್ ಅವರ ಸ್ಮರಣಾರ್ಥ ವೆಂಕೋಬರಾವ್ ರಂಗಮಂದಿರ ನಿರ್ವಣಕ್ಕೆ ಬಸವೇಶ್ವರ ರಿಕ್ರಿಯೇಶನ್ ಅಸೋಸಿಯೇಶನ್​ದ ಕಲಾಪೋಷಕರಾದ ಮಾಜಿ ಶಾಸಕ ಎಸ್.ಎನ್. ಪಾಟೀಲ, ವೈ.ಎಸ್. ಪಾಟೀಲ, ಆರ್.ಎಸ್. ಕಮತ, ಎನ್.ಆರ್. ಕುಲಕರ್ಣಿ, ಸಿದ್ದರಾಮಪ್ಪ ಅಕ್ಕಿ, ಜಿ.ಬಿ. ಚೆನ್ನವೀರಶೆಟ್ಟರ್ ಅವರು ಸಂಘದ ಕಾರ್ಯ ಚಟುವಟಿಕೆಗಳಿಂದ ಕೂಡಿಟ್ಟ 35 ಲಕ್ಷ ರೂ.ವೆಚ್ಚದಲ್ಲಿ ಕಲಾ ಮಂದಿರ ನಿರ್ವಣಕ್ಕೆ ಮುಂದಾದರು. ಆದರೆ, ಕಟ್ಟಡದ ಕಾರ್ಯಕ್ಕೆ ಅನುದಾನ ಕೊರತೆಯಾಗಿ ಅರ್ಧಕ್ಕೆ ನಿಂತಿದೆ. ಕಲಾ ಮಂದಿರ ಕಟ್ಟಡದ ಉಳಿದ ಭಾಗ ಪೂರ್ಣಗೊಳಿಸಲು ಇನ್ನು 1.25 ಕೋಟಿ ರೂ. ಅನುದಾನ ಕೋರಿ ಸಂಘದ ಪದಾಧಿಕಾರಿಗಳು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ 2017 ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಮನವಿ ಸಲ್ಲಿಸಿದಾಗ 70 ಲಕ್ಷ ರೂ. ಮಂಜೂರಿ ಮಾಡಿದ್ದರು. ಆದರೆ, ಈವರೆಗೂ ಬಿಡಿಗಾಸು ಬಿಡುಗಡೆಯಾಗದೆ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ.

    ಶಿರಹಟ್ಟಿ ವೆಂಕೋಬರಾವ್ ಕೇವಲ ನಟರಲ್ಲದೆ, ನಾಟಕ ಕಂಪನಿ ಸ್ಥಾಪಿಸಿ ಹಲವಾರು ಕಲಾವಿದರ ಪೋಷಣೆ ಮಾಡಿದ ರಂಗಭೂಮಿ ಭೀಷ್ಮ ಎನ್ನಬಹುದು. ಸಾಕಷ್ಟು ಕಷ್ಟ ಅನುಭವಿಸಿ 35 ವರ್ಷಗಳ ಕಾಲ ಕಲಾದೇವಿ ಸೇವೆಗೈದು ಉತ್ತರ ಕರ್ನಾಟಕದ ಕೀರ್ತಿ ಬೆಳಗಿಸಿದ ರಂಗ ಜಂಗಮನ ಸೇವೆಗೆ ಈಗಿನ ಸರ್ಕಾರ ಮನ್ನಣೆ ನೀಡಿ ಅರ್ಧಕ್ಕೆ ನಿಂತ ಕಲಾ ಮಂದಿರಕ್ಕೆ ಅನುದಾನ ನೀಡಲು ಮುಂದಾಗಬೇಕಿದೆ.

    | ಪ್ರಕಾಶ ನರಗುಂದ, ವೆಂಕೋಬರಾವ್ ಸಂಬಂಧಿ, ವಿ.ವಿ. ಕಪ್ಪತ್ತನವರ ಜಿಪಂ ಮಾಜಿ ಅಧ್ಯಕ್ಷ, ಸುರೇಶ ಹವಳದ, ಕಲಾಸಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts