More

    ಬೈಕ್,ಬೋರ್‌ವೆಲ್,ಪೆಟ್ರೋಲ್,ಚಿನ್ನದ ವಹಿವಾಟಿನ ಮೇಲೆ ಹದ್ದಿನ ಕಣ್ಣು

    ಚಿತ್ರದುರ್ಗ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ತಮ್ಮಗಳ ಸಹಕಾರ ಅಗತ್ಯವಿದೆ ಎಂದು ಡಿಸಿ ಜೆಆರ್‌ಜೆ ದಿವ್ಯಾಪ್ರಭು ಅವರು ವಿವಿಧ ಉದ್ದಿಮೆದಾರರಿಗೆ ಮನವಿ ಮಾಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಿವಿಧ ಉದ್ದಿಮೆದಾರರ ಸಭೆಯಲ್ಲಿ ಮಾತನಾಡಿ,ನೀತಿ ಸಂಹಿತೆ ಜಾರಿಯಲ್ಲಿದೆ. ಸ್ಟ್ಯಾಟಿಕ್ ಸರ್ವೆಲೆನ್ಸ್, ಫ್ಲೈಯಿಂಗ್ ಸ್ಕ್ವಾಡ್,ವಿಎಸ್‌ಟಿ ಸೇರಿ ವಿವಿಧ ತಂಡಗಳು ಕರ್ತವ್ಯದಲ್ಲಿ ನಿರತರಾಗಿವೆ.

    ಚುನಾವಣೆ ವೇಳೆ ತಮ್ಮ ಸಂಸ್ಥೆಗಳ ದುರ್ಬಳಕೆ ಸಾಧ್ಯತೆಗಳಿರುತ್ತವೆ. ಆಭರಣ ತಯಾರಕರು-ಮಾರಾಟಗಾರರು,ಹೋಟೆಲ್, ಲಾ ಡ್ಜ್‌ಗಳು,ಕಲ್ಯಾಣಮಂಟಪಗಳು,ಲೇವಾದೇವಿದಾರರು,ಬೋರ್‌ವೆಲ್ಸ್ ಏಜನ್ಸಿ,ಪೆಟ್ರೋಲ್‌ಬಂಕ್ ಮಾಲೀಕರು ಉದ್ದಿಮೆದಾರರು ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು.

    ಆಸೆ,ಆಮಿಷ ಒಡ್ಡಿದರೆ ಮಾಹಿತಿ ನೀಡಬೇಕು. ಮಾಹಿತಿ ಮುಚ್ಚಿಟ್ಟು ಅಕ್ರಮಗಳಿಗೆ ಸಹಕರಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು. ಮತದಾನದಲ್ಲಿ ಭಾಗವಹಿಸಲು ತಮ್ಮ ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದರು.

    ಜಿಪಂ ಸಿಇಒ ಎಂ.ಎಸ್.ದಿವಾಕರ್ ಅವರು ಮಾತನಾಡಿ,ವಾಣಿಜ್ಯ,ಆದಾಯ ಇಲಾಖೆಗಳು ಹಾಗೂ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದು,ಸಗಟು ವ್ಯವಹಾರ ಹಾಗೂ ಹೆಚ್ಚಿನ ಮೊತ್ತದ ಬ್ಯಾಂಕ್ ವಹಿವಾಟುಗಳ ನಿಗಾ ಇರುತ್ತದೆ. ಕಲ್ಯಾಣಮಂಟಪಗಳಲ್ಲಿ ಆಗುವ ಕಾ ರ‌್ಯಕ್ರಮಗಳ ಮಾಹಿತಿ ನೀಡಬೇಕು.

    ಸಾಮಗ್ರಿಗಳ ದಾಸ್ತಾನು ಪೂರ್ವ ಸಂಪೂರ್ಣ ಮಾಹಿತಿ ಇರಬೇಕು. ಡಿಸಿ ಕಚೇರಿಗೆ ಮಾಹಿತಿ ನೀಡದೆ ಬೋರ್‌ವೆಲ್ ಕೊರೆಯುವಂತಿ ಲ್ಲ. ಅಧಿಕ ಸಂಖ್ಯೆ ದ್ವಿಚಕ್ರ ವಾಹನ ಮಾರಾಟ ಬಗ್ಗೆ ಮಾಹಿತಿ ನೀಡ ಬೇಕೆಂದರು. ಎಡಿಸಿ ಜಿಲ್ಲಾಧಿಕಾರಿ ಟಿ.ಜವರೇಗೌಡ,ಎಸಿ ಚಂದ್ರಯ್ಯ ಸೇರಿ ನಾನಾ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts