More

    ಪ್ರತಿ ಹಳ್ಳಿಯಲ್ಲಿ ರೈತ ಪಂಚಾಯತ್ ಸಭೆ

    ಬೆಳಗಾವಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಮುಂದುವರಿದಿರುವ ರೈತ ಚಳವಳಿಯನ್ನು ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಸ್ತರಿಸಲು ಕರ್ನಾಟಕದಲ್ಲಿ ರೈತ ಪಂಚಾಯತ್‌ಗಳ ಜತೆಗೂಡಿ ಮೂರು ಕಡೆಗಳಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ನಾಯಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.

    ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಭೂ ಸುಧಾರಣೆ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ಹಾಗೂ ಕೃಷಿ ಗುತ್ತಿಗೆ ಪದ್ಧತಿ ಕಾಯ್ದೆ ವಿರೋಧಿ 2020ರ ಆಗಸ್ಟ್ ನಿಂದ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಲಕ್ಷಾಂತರ ರೈತರು ಚಳವಳಿ ನಡೆಸುತ್ತಿದ್ದಾರೆ ಎಂದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪ್ರತಿಭಟನೆಗೆ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ಹಾಗೂ ರೈತರಲ್ಲಿ ಜಾಗೃತಿ ಮೂಡಿಸಲು ರೈತ ಚಳವಳಿಯನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ವಿಸ್ತರಿಸಲಾಗುತ್ತಿದೆ. ಕರ್ನಾಟಕದಲ್ಲಿ ಶಿವಮೊಗ್ಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುತ್ತಿದೆ. ಇದಕ್ಕೂ ಮೊದಲು ಪ್ರತಿ ಹಳ್ಳಿಗಳಲ್ಲಿ ರೈತ ಪಂಚಾಯತ್ ಸಭೆ ಮಾಡಲಾಗುತ್ತಿದೆ ಎಂದರು.

    ಮಾ. 31ರಂದು ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಬೃಹತ್ ರೈತ ಸಮಾವೇಶ ನಡೆಸಲಾಗುತ್ತಿದ್ದು, ನೆರೆಯ ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದ 6 ಜಿಲ್ಲೆಗಳಿಂದ ರೈತರು ಭಾಗವಹಿಸಲಿದ್ದಾರೆ. ಕೃಷಿ ಕಾಯ್ದೆಗಳ ಪ್ರತಿಯನ್ನು ರೈತರ ಮನೆ ಮನೆಗೆ ಮುಟ್ಟಿಸುವ ಅಭಿಯಾನ ಆರಂಭಿಸಲಾಗುತ್ತಿದ್ದು, ಇದಕ್ಕಾಗಿ ರೈತ ಸಂಘಟನೆಗಳ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಇದು ರಾಜಕೀಯ ಪಕ್ಷಗಳ ವಿರೋಧಿ ಹೋರಾಟವಲ್ಲ. ಇದು ಕೃಷಿ ಕಾಯ್ದೆ ವಿರೋಧಿ ಹೋರಾಟವಾಗಿದೆ ಎಂದು ಚುಕ್ಕಿ ನಂಜುಡಸ್ವಾಮಿ ತಿಳಿಸಿದರು.

    ವಿವಿಧ ರೈತ ಸಂಘಟನೆಗಳ ಮುಖಂಡರಾದ ಶಿವರಾಯಪ್ಪ ಜೋಗಿನ, ಶಶಿಕಾಂತ ಪಡಸಲಗಿ, ಲಕ್ಷ್ಮಣ ಬಕ್ಕಾಯಿ, ಸಂಗಣ್ಣ ಬಾಗೇವಾಡಿ, ರವಿ ಪಾಟೀಲ, ಮಹಾಂತೇಶ ಕಮತ, ರವಿ ಸಿದ್ದಮ್ಮನವರ ಇದ್ದರು.

    ಸ್ಥಳ ನೀಡದ ಜಿಲ್ಲಾಡಳಿತ

    ಎರಡನೇ ರಾಜಧಾನಿ ಬೆಳಗಾವಿ ಕೇಂದ್ರ ಸ್ಥಾನದಲ್ಲಿ ಕೃಷಿ ಕಾಯ್ದೆ ವಿರೋಧಿ 400ಕ್ಕೂ ಅಧಿಕ ರೈತ ಸಂಘಟನೆಗಳು ಆಯೋಜಿಸಿರುವ ರಾಜ್ಯಮಟ್ಟದ ರೈತ ಸಮಾವೇಶ ಆಯೋಜಿಸಲು ಜಿಲ್ಲಾಡಳಿತ ಸ್ಥಳ ನೀಡುತ್ತಿಲ್ಲ. ವಿವಿಧ ಕಾರಣ ಮುಂದಿಟ್ಟುಕೊಂಡು ಇಲ್ಲಿಯ ಯಾವುದೇ ಮೈದಾನ ನೀಡುತ್ತಿಲ್ಲ. ಹಾಗಾಗಿ ಚನ್ನಮ್ಮ ವೃತ್ತದಲ್ಲಿಯೇ ಮಾ. 31ರಂದು ಪ್ರತಿಭಟಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ರೈತ ಸಂಘಟನೆ ಮುಖಂಡ ಚೂನ್ನಪ್ಪ ಪೂಜೇರ, ಜಯಶ್ರೀ ಮಾಳಗಿ, ರಾಘವೇಂದ್ರ ನಾಯಕ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts