More

    ಸರ್ಕಾರಿ ಶಾಲೆಯಲ್ಲಿ ಇ-ಕಲಿಕೆ

    ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೊಸ ಕಲಿಕಾ ವ್ಯವಸ್ಥೆಯಾದ ಇ-ಲರ್ನಿಂಗ್​ಗೆ ಅವಕಾಶ ಕಲ್ಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಎಕ್ಸಾಂ ಕಸಿವಿಸಿ

    ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಗುಣಮಟ್ಟ ಹೆಚ್ಚಿಸುವ ಸಂಬಂಧ ಶಿಕ್ಷಣ ತಜ್ಞರ ಜತೆ ಸೋಮವಾರ ಸಮಾಲೋಚನೆ ನಡೆಸಿದ ನಂತರ ಮಾತನಾಡಿದರು. ಶಿಕ್ಷಣ ಫೌಂಡೇಷನ್ ಸಹಯೋಗದಲ್ಲಿ ಮಲ್ಲೇಶ್ವರದ ವಿವಿಧ 11 ಕ್ಯಾಂಪಸ್​ಗಳಲ್ಲಿ 22 ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ತಂತ್ರಜ್ಞಾನದ ಬಳಕೆಗೆ ಒತ್ತು ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: 1974ರಿಂದ ತಿಮ್ಮಪ್ಪನ 126 ಆಸ್ತಿ ಮಾರಾಟ

    ಹೊಸ ಬೋಧನಾ ವಿಧಾನದಲ್ಲಿ ಪ್ರಾಯೋಗಿಕ ಕಲಿಕೆ, ಪಠ್ಯ ಮಾತ್ರವಲ್ಲದೆ ಸಾಮಾಜಿಕ ವಿಷಯಗಳ ಕಲಿಕೆ, ಮಕ್ಕಳಲ್ಲಿ ಸಂವಹನ, ಸೃಜನಶೀಲತೆ, ತರ್ಕಬದ್ಧ ಚಿಂತನೆಗಳನ್ನು ಬೆಳೆಸುವ ಜತೆಗೆ ಸಂಗೀತ, ಕ್ರೀಡೆ ಮುಂತಾದ ಹವ್ಯಾಸಗಳಿಗೆ ಪೂರಕ ತರಬೇತಿ ನೀಡಲಾಗುವುದು. ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಸ್ವಯಂಸೇವಕರು ಪಾಠ ಹೇಳಿಕೊಡುತ್ತಾರೆ. ಕ್ರೀಡಾಸಕ್ತರಿಗಾಗಿ ಕೋಚ್ ಮೂಲಕ ತರಬೇತಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.ಶಿಕ್ಷಣ ಫೌಂಡೇಶನ್ ಸಿಇಒ ಪ್ರಸನ್ನ, ಸ್ಟಾರ್ಟ್​ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಸಭೆಯಲ್ಲಿ ಭಾಗವಹಿಸಿದ್ದರು.

    ಕೊನೆಗೂ ಬಯಲಾಯಿತು ವಾರಂಗಲ್ ಕೃಷಿ ಹೊಂಡದ 9 ಶವಗಳ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts