More

    ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಿ

    ಕಕ್ಕೇರಾ: ಮಕ್ಕಳು ಪಾಠದೊಂದಿಗೆ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ವರ್ಷದ ವ್ಯಕ್ತಿ, ಸಾಹಿತಿ ಹೊನ್ನಪ್ಪ ಹಾದಿಮನಿ ಹೇಳಿದರು.

    ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ, ಮಕ್ಕಳ ಕನ್ನಡ ಸಾಹಿತ್ಯ ಸಂಘ ಮತ್ತು ವಲಯ ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ಹಮ್ಮಿಕೊಂಡ ಮಕ್ಕಳ ದಿನ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಟಿವಿ ಮತ್ತು ಮೊಬೈಲ್‌ನಿಂದಾಗಿ ಮಕ್ಕಳು ಸಾಹಿತ್ಯದಿಂದ ದೂರವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

    ಮಕ್ಕಳ ತಮ್ಮ ನಿತ್ಯದ ಪಾಠದ ಜತೆಗೆ ಸ್ವರಚಿತ ಕವನ ಮತ್ತು ಕಾದಂಬರಿ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದುವುದು ಮತ್ತು ಬರೆಯುವುದನ್ನು ಬೆಳೆಸಿಕೊಂಡಾಗ ಮಾತ್ರ ನಿಮ್ಮ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.

    ಶಿಕ್ಷಕ ಬಸಯ್ಯಸ್ವಾಮಿ ಉಪನ್ಯಾಸ ನೀಡಿದರು. ಮುಖ್ಯಗುರು ಸಂಗನಗೌಡ ದೇವರಡ್ಡಿ, ವಲಯ ಕಸಾಪ ಅಧ್ಯಕ್ಷ ಕೆ.ಗವಿಸಿದ್ದೇಶ ಹೊಗರಿ ಮಾತನಾಡಿದರು. ಶಾಲಾ ಮತ್ತು ಪರಿಷತ್‌ನಿಂದ ಹಮ್ಮಿಕೊಂಡ ಪ್ರಬಂಧ, ಲೇಖನ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರಿವಿಸಲಾಯಿತು.
    ಹಣಮಂತ್ರಾಯ ಜಂಪಾ ಅಧ್ಯಕ್ಷತೆ ವಹಿಸಿದ್ದರು. ಕಂಡಪ್ಪಗೌಡ, ಬಸವರಾಜ ಕುಂಬಾರ, ಆಪ್ರೋಜ್, ಉಮೇಬಿಬಾ, ಮುಸ್ಕಾನ್, ಬಸಮ್ಮ, ರಾಜುಗೌಡ, ಎಸ್‌ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಶಿಕ್ಷಕರಾದ ದೇವಿಂದ್ರಪ್ಪ ಆಲದಾರ್ತಿ, ಲಕ್ಷ್ಮೀಬಾಯಿ, ರಾಜಭಕ್ಷಿ, ಗಣೇಶ, ಮಂಜುಳಾ, ಮಹಾದೇವಿ, ಹರಿಪ್ರಸಾದ ಇತರರಿದ್ದರು.

    ಸುನೀಲ ಹಡಪದ ಸ್ವಾಗತಿಸಿದರು. ಶಿವರಾಜ ಲಿಂಗದಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸೋಮಶೇಖರ ಗುರಿಕಾರ ವಂದಿಸಿದರು. ಅಶ್ವಿನಿ ಎಸ್. ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts