More

    ಕರ್ತವ್ಯಕ್ಕೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸಿ

    ಅಥಣಿ: ಸಮೃದ್ಧ ಹಾಗೂ ಸುಂದರ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಗುರುವಿನ ಸ್ಥಾನದಲ್ಲಿರುವ ಶಿಕ್ಷಕರು ತಮ್ಮ ಕರ್ತವ್ಯಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಬಿಇಒ ಎಂ.ಬಿ.ಮೊರಟಗಿ ಹೇಳಿದ್ದಾರೆ.

    ಪಟ್ಟಣದ ಗುಜರಾತ ಮಂಗಲ ಕಾರ್ಯಾಲಯದಲ್ಲಿ ರೋಟರಿ ಕ್ಲಬ್ ಮತ್ತು ಇನ್ನರ್‌ವ್ಹಿಲ್‌ನಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಮತ್ತು ಎಸ್‌ಎಸ್‌ಎಲ್‌ಸಿ/ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿ, ಶಿಕ್ಷಕರು ಮಕ್ಕಳ ಮನಸ್ಥಿತಿ ಅರಿತು ಪಾಠ ಮಾಡಬೇಕು ಎಂದು ಸಲಹೆ ನೀಡಿದರು.

    ರೋಟರಿ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿ, ದೇಶ ಕಟ್ಟುವ ಕಾರ್ಯದಲ್ಲಿರುವ ಶಿಕ್ಷಕರು ಹೆಚ್ಚು ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕು. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕೃತಿಯ ಜಾಗೃತಿ ಮೂಡಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಹಾಳು ಮಾಡುವ ಬದಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಲಕ್ಷ್ಮಣ ಬಣಜವಾಡ, ರೋಟರಿ ಕ್ಲಬ್ ಅಧ್ಯಕ್ಷ ಮೇಘರಾಜ ಪರಮಾರ, ಸಂತೋಷ ಬೊಮ್ಮಣವರ, ಪ್ರಭಾಕರ ಸತ್ತಿ, ಸುರೇಶ ಪಾಟೀಲ, ಅರುಣ ಯಲಗುದ್ರಿ, ಭರತ ಸೋಮಯ್ಯ, ಪ್ರವೀಣ ಭಾಟೆ, ಡಾ.ಆನಂದ ಕುಲಕರ್ಣಿ, ಡಾ.ಪಿ.ಪಿ.ಮೀರಜ್, ಶ್ರೀಕಾಂತ ಅಥಣಿ, ಸಚಿನ ದೇಸಾಯಿ, ಡಾ.ಅಮೃತ ಕುಲಕರ್ಣಿ, ಶೇಖರ ಕೋಲಾರ, ಸುರೇಶ ಬಳೊಳ್ಳಿ, ಮಹಾದೇವಿ ಪಾಟೀಲ, ಲಲಿತಾ ಮೇಕನಮರಡಿ, ವೈಶಾಲಿ ಮಠಪತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts