More

    ದುರ್ಗಿಗುಡಿ ದುರ್ಗಮ್ಮನ ಅದ್ದೂರಿ ರಥೋತ್ಸವ

    ಶಿವಮೊಗ್ಗ: ಹೋಳಿ ಹುಣ್ಣಿಮೆ ಪ್ರಯುಕ್ತ ಶಿವಮೊಗ್ಗದ ಹೃದಯ ಭಾಗದ ದುರ್ಗಿಗುಡಿಯಲ್ಲಿ ಸೋಮವಾರ ದುರ್ಗಮ್ಮ ಮತ್ತು ಮರಿಯಮ್ಮ ದೇವಿಯರ ರಥೋತ್ಸವ ಅದ್ದೂರಿಯಾಗಿ ನೆರವೇರಿತು.

    ದುರ್ಗಪರಮೇಶ್ವರಿ ಸೇವಾ ಸಮಿತಿ ನೇತೃತ್ವದಲ್ಲಿ ಭಕ್ತರು ತೇರನ್ನು ಎಳೆದರು. ಶಿವಮೊಗ್ಗ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಿಂದಲೂ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಹೋಳಿ ಹುಣ್ಣಿಮೆಯಂದು ನಡೆಯುವ ರಥೋತ್ಸವಕ್ಕೆ ಹಲವು ವರ್ಷಗಳ ಇತಿಹಾಸವಿದೆ. ತೇರು ಎಳೆಯಲು ವಿವಿಧ ಭಾಗಗಳ ಭಕ್ತರು ಆಗಮಿಸಿದ್ದರು.
    ದುರ್ಗಿಗುಡಿಯಲ್ಲಿ ತೇರನೆಳೆದು ನಂತರ ದೇವಿಯ ಗುಡಿ ಎದುರು ನಿಲ್ಲಿಸಿದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ದೇಶಾದ್ಯಂತ ಹೋಳಿ ಹುಣ್ಣಿಮೆಯಂದು ಹೋಳಿ ಆಚರಿಸಿದರೆ ಶಿವಮೊಗ್ಗದಲ್ಲಿ ದುರ್ಗಿಗುಡಿಯ ದುರ್ಗಮ್ಮ ದೇವರ ತೇರು ಎಳೆದ ಮರುದಿನ ಹೋಳಿ ಆಚರಿಸುವುದು ಸಂಪ್ರದಾಯ. ಹಾಗಾಗಿ ಶಿವಮೊಗ್ಗದಲ್ಲಿ ಮಂಗಳವಾರ ಹೋಳಿ ಆಚರಣೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts