More

    ಪೊಲೀಸ್​ ವೇಷ ಧರಿಸಿ ವೃದ್ಧೆಯ ಬಳಿ 7 ಸವರನ್​ ಚಿನ್ನ ದೋಚಿದ ಕರ್ನಾಟಕ ಗ್ಯಾಂಗ್​ ಕೇರಳದಲ್ಲಿ ಅರೆಸ್ಟ್!​

    ಕೊಚ್ಚಿ: ಪೊಲೀಸ್​ ವೇಷ ಧರಿಸಿದ ವಯಸ್ಸಾದ ಮಹಿಳೆಯ ಬಳಿ 7 ಸವರನ್​ ಚಿನ್ನ ದೋಚಿದ್ದ ನಾಲ್ವರು ದಾಳಿಕೋರರನ್ನು ಕೇರಳ ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ನಾಲ್ವರು ಆರೋಪಿಗಳು ಕೂಡ ಕರ್ನಾಟಕದ ಭಟ್ಕಳ ಮೂಲದವರು. ಇನ್ನು ಕೆಲವು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

    ಕರ್ನಾಟಕ ಮೂಲದ ಖತರ್ನಾಕ್​ ಗ್ಯಾಂಗ್​ ಕೇರಳವನ್ನೇ ಹೆಚ್ಚು ಕೇಂದ್ರಿಕೃತವಾಗಿಸಿಕೊಂಡಿತ್ತು. ಇಂತಹ ಅನೇಕ ಅಪರಾಧಗಳನ್ನು ಎಸಗಿರುವ ಇತಿಹಾಸವನ್ನು ಈ ಗ್ಯಾಂಗ್​ ಹೊಂದಿದ್ದು, ತ್ರಿಸ್ಸೂರ್​ ಪೊಲೀಸ್​ ತಂಡ ಕೊಚ್ಚಿಯನ್ನು ತಲುಪಿ, ವಿಚಾರಣೆ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದೆ.

    ಎಸಿಪಿ ರಾಜಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಜನವರಿ 16 ರಂದು ಎರ್ನಾಕುಲಂನ ದಕ್ಷಿಣ ಮೇಲ್ಸೇತುವೆಯ ಬಳಿ ಈ ಗ್ಯಾಂಗ್​, ವೃದ್ಧೆಯನ್ನು ತಡೆದು ಆಕೆಯ ವಸ್ತುಗಳನ್ನು ದೋಚಿತ್ತು. ನಾಲ್ವರು ಖದೀಮರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು ಮತ್ತು ವೃದ್ಧೆಯನ್ನು ಹೆದರಿಸಿ 7 ಸವರನ್​ ಚಿನ್ನವನ್ನು ದೋಚಿದ್ದರು.

    ಸಂತ್ರಸ್ತ ಮಹಿಳೆಯ ಪ್ರಕಾರ ಖತರ್ನಾಕ್​ ಗ್ಯಾಂಗ್ ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿತ್ತು. ವೃದ್ಧೆ ಒದಗಿಸಿದ ಮೊಬೈಲ್ ಟವರ್ ಲೊಕೇಶನ್ ಮೂಲಕ ದಾಳಿಕೋರರನ್ನು ಪತ್ತೆ ಹಚ್ಚಿ ಬಂದಿಸಲಾಗಿದೆ. ಇಂತಹ ಹಲವು ಗ್ಯಾಂಗ್‌ಗಳು ನಗರದಲ್ಲಿ ಸಕ್ರಿಯವಾಗಿವೆ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

    ಸಂಕಷ್ಟದ ನಡುವೆಯೂ ಭಾರತ ವೇಗದ ಓಟ: ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ

    ಹರ್ಷಿಕಾ ಹರ್ಷದ ವರ್ಷ: 9 ಕನ್ನಡ, 2 ಭೋಜಪುರಿ, 1 ಮಲಯಾಳಂ ಚಿತ್ರ ರೆಡಿ

    ಒಂದು ಮದುವೆಯ ಕಥೆ!; ವಿಭಿನ್ನ ಶೀರ್ಷಿಕೆಯ ಚಿತ್ರ ಪ್ರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts