More

    ಡ್ರೋನ್​ಗಳಲ್ಲಿ ಔಷಧಿ-ಲಸಿಕೆಗಳನ್ನು ‘ಡನ್ಜೋ’ ಮಾಡುವ ಪ್ರಯೋಗ!

    ಹೈದರಾಬಾದ್: ಹಲವು ಮಹಾನಗರಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಗತ್ಯ ವಸ್ತುಗಳನ್ನು ಡೆಲಿವರಿ ಮಾಡುವ ಸೇವೆಯಲ್ಲಿ ತೊಡಗಿರುವ ಡನ್ಜೊ ಕಂಪೆನಿ, ಇದೀಗ ಕ್ರಾಂತಿಕಾರಿ ಯೋಜನೆಯೊಂದಕ್ಕೆ ಕೈಹಾಕಿದೆ. ತೆಲಂಗಾಣ ಸರ್ಕಾರದ ‘ಆಕಾಶದಿಂದ ಔಷಧಿಗಳು’ ಯೋಜನೆಯಡಿ, ಸ್ಕೈ ಏರ್​ ಕಂಪೆನಿಯ ಸಹಕಾರದಲ್ಲಿ ದೂರದ ಪ್ರದೇಶಗಳಿಗೆ ಡ್ರೋನ್​ ಮೂಲಕ ಅಗತ್ಯ ಔಷಧಿ, ಲಸಿಕೆಗಳನ್ನು ತಲುಪಿಸುವ ಪ್ರಯತ್ನ ಇದಾಗಿದೆ.

    ದೇಶಾದ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಪ್ರದೇಶಗಳೊಂದಿಗೆ ದೂರದ ಪ್ರದೇಶಗಳಿಗೂ ಅಗತ್ಯ ಔಷಧಿ ಮತ್ತು ಲಸಿಕೆಗಳನ್ನು ಅತಿಶೀಘ್ರವಾಗಿ ಒದಗಿಸುವ ಪ್ರಯತ್ನದಲ್ಲಿ ನಾವು ತೊಡಗಿದ್ದೇವೆ ಎಂದು ಡನ್ಜೋ ಸಿಇಒ ಕಬೀರ್​ ಬಿಸ್ವಾಸ್ ಹೇಳಿದ್ದಾರೆ. ಡ್ರೋನ್​ ತಂತ್ರಜ್ಞಾನವನ್ನು ಬಳಸಿಕೊಂಡು 12 ಕಿಲೋಮೀಟರ್​ ಅಂತರದವರೆಗೆ 18 ನಿಮಿಷಗಳ ಅವಧಿಯಲ್ಲಿ ಔಷಧಿಗಳ ಸರಬರಾಜು ಮಾಡುವ ಗುರಿ ಹೊಂದಲಾಗಿದೆ.

    ಇದನ್ನೂ ಓದಿ: ಪಾಕ್‌ ಪ್ರೇಮಿ ಸಿಧು ಸಿಎಂ ಆದ್ರೆ ದೇಶಕ್ಕೆ ಅಪಾಯ ಎಂದ ಅಮರೀಂದರ್‌: ಯಾರಿಗೆ ಒಲಿಯಲಿದೆ ಪಂಜಾಬ್‌ ಖುರ್ಚಿ?

    ತೆಲಂಗಾಣ ಸರ್ಕಾರದ ಯೋಜನೆಯಲ್ಲಿ ಡನ್ಜೊ ಮೆಡ್​ಏರ್​ ಕನ್ಸಾರ್ಟಿಯಂಅನ್ನು ರಚಿಸಲಾಗಿದ್ದು, ಡನ್ಜೊ ಡಿಜಿಟಲ್ ಕಂಪೆನಿ ಮತ್ತು ಡ್ರೋನ್​ ಆಧಾರಿತ ಲಾಜಿಸ್ಟಿಕ್ಸ್​ ಒದಗಿಸುವ ಸ್ಕೈ ಏರ್​ ಕಂಪೆನಿಗಳು ಸೆಪ್ಟೆಂಬರ್​ 20 ರಿಂದ 25 ರವರೆಗೆ ರಾಜ್ಯದ ವಿಕಾರಾಬಾದ್​ನಲ್ಲಿ ಪ್ರಾಯೋಗಿಕ ಡೆಲಿವರಿಗಳನ್ನು ನಡೆಸಲಿವೆ. ಈ ಸಂದರ್ಭದಲ್ಲಿ ಬ್ಯಾಗ್ಮೊದ ತಾಪಮಾನ ನಿಯಂತ್ರಿತ ಬಾಕ್ಸ್​ಗಳಲ್ಲಿ ಕರೊನಾ ಲಸಿಕೆಗಳನ್ನು ಕೊಂಡೊಯ್ಯುವ 50 ಫ್ಲೈಟ್​ಗಳನ್ನು ನಡೆಸಲಾಗುವುದು ಎಂದು ಸ್ಕೈ ಏರ್​ನ ಸ್ವಪ್ನಿಕ್ ಜಕ್ಕಂಪುಂಡಿ ಹೇಳಿದ್ದಾರೆ. (ಏಜೆನ್ಸೀಸ್)

    ಅಪಾಯಕಾರಿ ಸೆರೋಟೈಪ್​-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

    VIDEO| ಬಾಲಿವುಡ್​ ಹೀರೋ ಎಮ್ರಾನ್​ ಹಶ್ಮಿ ಜಿಮ್​ ವರ್ಕೌಟ್​ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts