More

    ಕೋವಿಡ್​ ಔಷಧ, ಕಿಟ್​ ಮಾರಾಟ; ಪುಣೆಯ ಮೂವರು ಡಾಕ್ಟರ್ ವಿರುದ್ಧ ಪ್ರಕರಣ

    ಪುಣೆ: ಎರಡು ವರ್ಷಗಳ ಕಾಲ ಕೋವಿಡ್​ ಹೆಮ್ಮಾರಿ ಎಲ್ಲರನ್ನೂ ಕಾಡಿದ್ದು ಮರೆಯಲು ಸಾಧ್ಯವಿಲ್ಲ. ಈ ಸಾಂಕ್ರಾಮಿಕದಿಂದಾಗಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದರು. ಅನಾರೋಗ್ಯಕ್ಕೆ ತುತ್ತಾದವರಂತೂ ಅಪಾರ. ಜನರು ಆರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೆ ಈಡಾದರು, ಈಗಲೂ ಈ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಅನೇಕರದ್ದಾಗಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಬಳಸಲು ಕೊಟ್ಟಿದ್ದ ಔಷಧ ಹಾಗೂ ಉಪಕರಣಗಳನ್ನು ಅನೇಕರು ಹಣ ಗಳಿಸಲು ದುರುಪಯೋಗ ಮಾಡಿಕೊಂಡಿದ್ದಾರೆ.

    ಇಂತಹುದೇ ಪ್ರಕರಣ ಇದು. 2021ರಲ್ಲಿ ಕೋವಿಡ್​ ಸಾಂಕ್ರಾಮಿಕ ಹರಡಿದ ಸಂದರ್ಭದಲ್ಲಿ ಸಿವಿಲ್​ ಆಸ್ಪತ್ರೆಯ ಕೋವಿಡ್-19 ಪರೀಕ್ಷಾ ಕಿಟ್‌ಗಳು, ಔಷಧಗಳು ಮತ್ತು ಸ್ಯಾನಿಟೈಸರ್‌ಗಳನ್ನು ದುರುಪಯೋಗಪಡಿಸಿಕೊಂಡು ಮಾರಾಟ ಮಾಡಿದ ಆರೋಪದ ಮೇಲೆ ಪುಣೆ ಪೊಲೀಸರು ಮಾಜಿ ಮುಖ್ಯ ಆರೋಗ್ಯ ಅಧಿಕಾರಿ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಇವುಗಳನ್ನು ಖಾಸಗಿ ಪ್ರಯೋಗಾಲಯಗಳಿಗೆ ಇವರು ಮಾರಾಟ ಮಾಡಿದ್ದರು ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

    ವಾರ್ಜೆ ಮಾಳವಾಡಿ ಪೊಲೀಸರು ಗುರುವಾರ ಪುಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಮಾಜಿ ಮುಖ್ಯ ಆರೋಗ್ಯ ಅಧಿಕಾರಿ ಡಾ ಆಶಿಶ್ ಭಾರ್ತಿ, ಡಾ ಅರುಣಾ ತಾರ್ಡೆ ಮತ್ತು ಡಾ. ರುಶಿಕೇಶ್ ಗಾರ್ಡಿ ವಿರುದ್ಧ ಸೆಕ್ಷನ್ 420 (ವಂಚನೆ), 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 465 (ನಕಲಿ) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಡಾ.ಸತೀಶ್ ಕೋಲ್ಸೂರೆ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಸ್ಥಳೀಯ ನ್ಯಾಯಾಲಯವು ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಆರೋಪಿಗಳು 2021ರ ಜನವರಿ ಮತ್ತು ಡಿಸೆಂಬರ್ ನಡುವೆ ವಾರ್ಜೆ ಮಾಳವಾಡಿ ಪ್ರದೇಶದ ಅರವಿಂದ್ ಬರ್ತಕ್ಕೆ ಆಸ್ಪತ್ರೆಯಲ್ಲಿ ಪರೀಕ್ಷಾ ಕಿಟ್‌ಗಳು, ಸ್ಯಾನಿಟೈಸರ್‌ಗಳು ಮತ್ತು ಔಷಧಿಗಳಂತಹ ವಸ್ತುಗಳನ್ನು ಬಳಸಲಾಗಿದೆ ಎಂದು ತೋರಲು ರೋಗಿಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆರೋಪಿಗಳು ನಂತರ ಈ ವಸ್ತುಗಳನ್ನು ಖಾಸಗಿ ಪ್ರಯೋಗಾಲಯಗಳು ಮತ್ತು ವ್ಯಕ್ತಿಗಳಿಗೆ ವೈಯಕ್ತಿಕ ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ. ಈ ಮೂಲಕ 80 ಲಕ್ಷದಿಂದ 90 ಲಕ್ಷ ರೂಪಾಯಿಗಳವರೆಗೆ ಲಾಭ ಗಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts