More

    ಡಂಕಿ ಸಿನಿಮಾದ ಹೆಸರು ಕೇಳಲು ವಿಚಿತ್ರ ಎನಿಸಿದ್ರೂ ಇದರ ಹಿಂದಿದೆ ರೋಚಕ ಕಹಾನಿ! ಏನಿದು ಡಾಂಕಿ ಫ್ಲೈಟ್?​

    ಮುಂಬೈ: ಪಠಾಣ್​​ ಮತ್ತು ಜವಾನ್​ ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್, ತಮ್ಮ ಮುಂದಿನ ಸಿನಿಮಾ “ಡಂಕಿ”ಗಾಗಿ ಎದುರು ನೋಡುತ್ತಿದ್ದಾರೆ. ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ರಾಜ್​ಕುಮಾರ್​ ಹಿರಾನಿ ನಿರ್ದೇಶನ ಡಂಕಿ ಸಿನಿಮಾ, ಡಿ.21ರಂದು ಬಿಡುಗಡೆಯಾಗಲಿದ್ದು,​ ಈಗಾಗಲೇ ಟ್ರೈಲರ್​ನಿಂದಲೇ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ.

    “ಡಂಕಿ” ಎಂಬ ಪದವೇ ತುಂಬಾ ವಿಚಿತ್ರವಾಗಿದ್ದರೂ ಅದರ ಹಿಂದೆ ಒಂದು ರೋಚಕ ಕಹಾನಿಯೇ ಅಡಗಿದೆ. ಈ ರೀತಿಯೂ ಒಂದು ಪದವಿದೆಯೇ ಎಂಬುದು ಬಹುತೇಕರಿಗೆ ಈ ಸಿನಿಮಾ ಹೆಸರು ಘೋಷಣೆಯಾದಾಗಲೇ ಗೊತ್ತಾಗಿದ್ದು. ಅಷ್ಟಕ್ಕೂ ಈ ಡಂಕಿ ಹೆಸರನ್ನು ಏಕೆ ಇಟ್ಟರು ಎಂಬುದಕ್ಕೆ ಕಾರಣ ಇದೆ ಮತ್ತು ಈ ಸಿನಿಮಾದ ಕತೆಯೂ ಕೂಡ ಇದಕ್ಕೆ ಲಿಂಕ್​ ಆಗಿದೆ. ಹಾಗಾದರೆ ಡಂಕಿ ಹಿಂದಿರುವ ಅಸಲಿ ವಿಚಾರ ಏನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    “ಡಾಂಕಿ ಫ್ಲೈಟ್​” ಎಂದು ಕರೆಯಲ್ಪಡುವ ವಿಶೇಷ ಪರಿಕಲ್ಪನೆಯ ಸುತ್ತ ಶಾರುಖ್​ ಸಿನಿಮಾ ಸುತ್ತುತ್ತದೆ. ಡಾಂಕಿ ಫ್ಲೈಟ್​ ಅಂದರೆ ಅಮೆರಿಕ ಮತ್ತು ಕೆನಡಾ ಸೇರಿದಂತೆ ಇತರೆ ದೇಶಗಳಿಗೆ ತೆರಳಲು ಅಕ್ರಮ ವಲಸಿಗರು ಹೆಚ್ಚಾಗಿ ಬಳಸುವ ಮಾರ್ಗವಾಗಿದೆ. ಉತ್ತಮವಾದ ಜೀವನ ಕಂಡುಕೊಳ್ಳಲು ತುಂಬಾ ಕಷ್ಟ ಪಡುವ ವ್ಯಕ್ತಿಯ ಜೀವನದ ಮೇಲೆ ಡಂಕಿ ಸಿನಿಮಾ ಬೆಳಕು ಚೆಲ್ಲುತ್ತದೆ ಎಂದು ಹೇಳಲಾಗಿದೆ.

    ಡಾಂಕಿ ಫ್ಲೈಟ್​ ಎಂಬುದು ಪ್ರತೀ ವರ್ಷ ಸಾವಿರಾರು ಯುವಕರು ಬಳಸುವ ಒಂದು ಪ್ರಮುಖ ವಿಧಾನವಾಗಿದೆ. ತಮ್ಮಿಷ್ಟದ ದೇಶವನ್ನು ಕಾನೂನುಬದ್ಧ ಮಾರ್ಗದ ಮೂಲಕ ತಲುಪಲು ವಿಫಲವಾದಾಗ ಈ ವಿಧಾನವವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಮೆರಿಕ, ಇಂಗ್ಲೆಂಡ್​ ಮತ್ತು ಕೆನಡಾ ದೇಶಗಳಿಗೆ ಹೆಚ್ಚಾಗಿ ಅಕ್ರಮವಾಗಿ ವಲಸೆ ಹೋಗುತ್ತಾರೆ. ಭಾರತೀಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಏಜೆಂಟ್​ಗಳು ಕೂಡ ಇದ್ದಾರೆ ಎಂಬುದು ಸೋಜಿಗದ ಸಂಗತಿ.

    ಇನ್ನು ಡಂಕಿ ಸಿನಿಮಾದ ಕತೆ ಕೆನಡಾಗೆ ವಲಸೆ ಹೋಗುವ ಪಂಜಾಬಿ ಯುವಕನೊಬ್ಬ ಸಾಹಸಮಯ ಪ್ರಯಾಣದ ಸುತ್ತ ಸುತ್ತುತ್ತದೆ ಎಂದು ಹೇಳಲಾಗಿದೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಈ ಸಿನಿಮಾ ವಲಸೆಯ ಸಮಸ್ಯೆಗಳು ಅಂದರೆ ಡಾಂಕಿ ಫ್ಲೈಟ್​ ಸುತ್ತ ಸುತ್ತಿದರೂ ಕೆನಡಾಕ್ಕೆ ವಲಸೆ ಹೋಗುತ್ತಿರುವ ಭಾರತೀಯರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ. ಉತ್ತಮ ಜೀವನವನ್ನು ಕಂಡುಕೊಳ್ಳಲು ಪ್ರಯತ್ನಿಸುವ ಮನುಷ್ಯನ ಪ್ರಯಾಣದ ಜತೆಗೆ ಬಹಳಷ್ಟು ಭಾವನೆಗಳನ್ನು ಒಳಗೊಂಡಿರುವ ಈ ಚಿತ್ರವು ಅನೇಕ ಭಾವುಕ ಸನ್ನಿವೇಶಗಳಿಗೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತದೆ.

    ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜತೆಗೆ ನಟಿ ತಾಪ್ಪಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ವಿಕ್ಕಿ ಕೌಶಲ್ ಗೆಸ್ಟ್​ ರೋಲ್​ ಮಾಡಿದ್ದಾರೆ. ಸಂಜು ಸಿನಿಮಾದ ಬ್ಲಾಕ್​ ಬಸ್ಟರ್​ ಸಕ್ಸಸ್​ ಬಳಿಕ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಡಂಕಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಡಂಕಿ ಸಿನಿಮಾದ ಕತೆ ನೋಡಿದರೆ, ಈ ಸಿನಿಮಾವೂ ಕೂಡ ಸೂಪರ್​ ಹಿಟ್​ ಆಗುವ ಲಕ್ಷಣಗಳು ಕಾಣುತ್ತಿವೆ. ಡಿ. 21ಕ್ಕೆ ಸಿನಿಮಾ ತೆರೆಕಾಣಲಿದ್ದು, ಯಾವ ರೀತಿ ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಮನೆಯಲ್ಲಿ ಹೆಚ್ಚಾದ ಊಟದ ವೆಚ್ಚ! ವೆಜ್​ಗೆ ಹೋಲಿಸಿದರೆ ನಾನ್​ವೆಜ್​ ಕಡಿಮೆ, ಕಾರಣ ಹೀಗಿದೆ…

    ಹಸಿ ಮಾಂಸ ಆರೋಗ್ಯಕ್ಕೆ ಒಳ್ಳೆಯದಾ? ಸೋಶಿಯಲ್​ ಮೀಡಿಯಾ ಸ್ಟಾರ್​ಗಳ ವಾದಕ್ಕೆ ತಜ್ಞರ ಉತ್ತರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts