More

    ಸಾಸಲುವಿನಲ್ಲಿ ದಂಡಿನ ಸಗಣಿ ಹಬ್ಬ

    ಕಿಕ್ಕೇರಿ: ಹೋಬಳಿಯ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಾಸಲು ಗ್ರಾಮದಲ್ಲಿ ಸಗಣಿ ಓಕುಳಿ ಹಬ್ಬ ಇತ್ತೀಚೆಗೆ ನಡೆಯಿತು.
    ಕ್ಷೇತ್ರದ ಜಂಗಮ ಭೈರವರಾಜ ಹಾಗೂ ಶಿವನಿಗೆ ಭಕ್ತಿ ವಿಷಯದಲ್ಲಿ ಪಂಥ ನಡೆದು ಯುದ್ಧದಲ್ಲಿ ಶಿವನಿಗೆ ಸೋಲಾಗಿ, ಭಕ್ತಿಗೆ ಜಯವಾಗಿ ಜಂಗಮರು ಗೆಲುವು ಸಾಧಿಸಿದ್ದರು. ಇದರ ನೆನಪಿನಾರ್ಥ ಕಾರ್ತಿಕ ಮಾಸದ ಜಾತ್ರೆಯ ಅಂಗವಾಗಿ ಸಗಣಿ ಓಕುಳಿ ಹಬ್ಬ ನಡೆಯಿತು.
    ಗ್ರಾಮದ ರಥಬೀದಿಯ ರಂಗಸ್ಥಳದಲ್ಲಿ ಸಗಣಿ ಹಬ್ಬ ಆಚರಣೆಗೆ ಎರಡು ಬಣಗಳ ಯುವಕರ ಗುಂಪು ಭಾಗಿಯಾದರು. ಎರಡು ಕಡೆಯ ಯುವಕರು ಸಗಣಿ ಕಾಳಗಕ್ಕಾಗಿ ಸಗಣಿಯನ್ನು ಒಂದೆಡೆ ಶೇಖರಣೆ ಮಾಡಿದರು. ಹದವಾಗಿ ಉಂಡೆ ಕಟ್ಟಿಕೊಂಡು ಸನ್ನದ್ಧರಾದರು. ಶಿವಭಕ್ತರಾದ ಜಂಗಮರ ಗುಂಪಿನ ಬಣವಾಗಿ ಸಾಸಲುಕೊಪ್ಪಲು ಗ್ರಾಮದ ಹಾಲುಮತಸ್ಥ ಯುವಕರು ಒಂದೆಡೆ ನಿಂತರೆ ಎದುರಾಳಿಯಾಗಿ ಶಿವನ ಪರವಾಗಿ ಸಾಸಲು ಗ್ರಾಮದ ವೀರಶೈವ ಪಂಗಡದ ಯುವಕರು ಮತ್ತೊಂದು ಕಡೆ ಅಣಿಯಾದರು.
    ಗ್ರಾಮದ ಹಿರಿಯ ಮುಖಂಡರು ದೇವರಿಗೆ ಜೈಕಾರ ಹಾಕುತ್ತಿದ್ದಂತೆ ಸಗಣಿ ಕಾಳಗಕ್ಕೆ ಚಾಲನೆ ದೊರೆಯಿತು. ಪರಸ್ಪರ ಸಗಣಿಯ ಉಂಡೆಯನ್ನು ಎರಡು ತಂಡಗಳು ಬಿರುಸಿನಿಂದ ಎದುರಾಳಿಗಳಿಗೆ ಬೀಸಿದರು. ಶಿವನ ಗುಂಪಿನವರು ಕಡಿಮೆ ಪ್ರಮಾಣದಲ್ಲಿ ಸಗಣಿ ಉಂಡೆ ಜಂಗಮ ತಂಡಕ್ಕೆ ಬೀಸಿದರೆ, ಜಂಗಮ ಭೈರವರಾಜರ ಗುಂಪು ದೊಡ್ಡ ಪ್ರಮಾಣದಲ್ಲಿ ಸಗಣಿ ಉಂಡೆಯನ್ನು ಶಿವನ ಗುಂಪಿನ ಕಡೆಗೆ ಬೀಸಿ ಜಯಶೀಲರಾದರು. ಎರಡು ಗುಂಪಿನವರು ಪವಿತ್ರ ಪುಷ್ಕರಿಣಿಯಲ್ಲಿ ಮಿಂದು ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು.


    ಕಿಕ್ಕೇರಿ ಹೋಬಳಿ ಸಾಸಲು ಗ್ರಾಮದಲ್ಲಿ ಈಚೆಗೆ ಜರುಗಿದ ಕಾರ್ತಿಕ ಮಾಸದ ಜಾತ್ರೋತ್ಸವದಲ್ಲಿ ಯುವಕರ ಗುಂಪು ಸಗಣಿ ಓಕುಳಿ ಹಬ್ಬದಲ್ಲಿ ಭಾಗಿಯಾಗಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts