More

    ಡಾಂಬರ್ ರೋಡ್ ಮೇಲೆ ಕಾಂಕ್ರೀಟ್ !

    ಬೆಳಗಾವಿ : ಲಾಕ್‌ಡೌನ್ ಸಡಿಲಿಕೆ ನಂತರ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಮೊಟಕುಗೊಳಿಸಿದ್ದ ಕಲಾ ಮಂದಿರ, ಸಿಬಿಟಿ ಬಸ್ ನಿಲ್ದಾಣ, ಕಾಂಗ್ರೆಸ್, ಚನ್ನಮ್ಮ ವೃತ್ತದ ಬಳಿ ಸಿಮೆಂಟ್ ರಸ್ತೆ ಕಾಮಗಾರಿಗಳಿಗೆ ವೇಗ ನೀಡಲಾಗಿದೆ. ಆದರೆ, ಈಗಾಗಲೇ ಇರುವ ಡಾಂಬರ್ ರಸ್ತೆಗಳನ್ನು ಅಗೆಯದೆ, ಅದೇ ರಸ್ತೆ ಮೇಲೆಯೇ ಸಿಮೆಂಟ್ ರಸ್ತೆ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಗರಂ ಆಗಿದ್ದಾರೆ.

    ಬೆಳಗಾವಿ ನಗರದಲ್ಲಿ ಎರಡು ವರ್ಷಗಳಿಂದ ನೂರಾರು ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ಬೀದಿ ದೀಪ ಸೇರಿ ವಿವಿಧ ಕಾಮಗಾರಿ ನಡೆಯುತ್ತಿವೆ. ಆದರೆ, ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ. ನಿಗದಿತ ಸಮಯದಲ್ಲಿ ಕಾಮಗಾರಿಗಳೂ ಪೂರ್ಣಗೊಂಡಿಲ್ಲ. ಬಸ್ ತಂಗುದಾಣ, ಶೌಚಗೃಹ, ಬೀದಿ ದೀಪ ಅಳವಡಿಸಿ ವರ್ಷ ಕಳೆಯುವುದಕ್ಕೂ ಮುನ್ನವೇ ಹಾಳಾಗಿವೆ. ಈ ಕುರಿತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿವೆ. ಆದರೆ, ಕಾಮಗಾರಿಗೆ ಗುಣಮಟ್ಟದ ಕಚ್ಚಾ ಪದಾರ್ಥ ಬಳಸುತ್ತಿಲ್ಲ. ಅಲ್ಲಲ್ಲಿ ತಗ್ಗು-ಗುಂಡಿ ಬಿದ್ದಿವೆ. ನಿಯಮದ ಪ್ರಕಾರ ಕಾಮಗಾರಿ ಕೈಗೊಳ್ಳುತ್ತಿಲ್ಲ. ಗುತ್ತಿಗೆದಾರರ ನಿರ್ಲಕ್ಷೃದಿಂದಾಗಿ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರೊಫೆಷನಲ್ ೆರಂನ ಸದಸ್ಯರು ದೂರಿದ್ದಾರೆ.

    ಲಾಕ್‌ಡೌನ್ ಸಡಿಲಿಕೆ ನಂತರ ನಗರದ ಕಲಾಮಂದಿರ, ಸಿಟಿ ಬಸ್ ನಿಲ್ದಾಣ ಸೇರಿ ವಿವಿಧ ರಸ್ತೆ ಕಾಮಗಾರಿ ಆರಂಭವಾಗಿವೆ. ಎರಡು ತಿಂಗಳ ಹಿಂದೆ ರಸ್ತೆ ಸ್ವಚ್ಛಗೊಳಿಸಿ ಮೇಲಿನ ಡಾಂಬರೀಕರಣ ತೆಗೆಯಲಾಗಿತ್ತು. ಲಾಕ್‌ಡೌನ್‌ನಿಂದ ಕಾಮಗಾರಿಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಹಳೇ ರಸ್ತೆಗಳನ್ನು ಮಾತ್ರ ಸಿಮೆಂಟ್ ರಸ್ತೆಗಳನ್ನಾಗಿ ಬದಲಾಯಿಸಲಾಗುತ್ತಿದೆ. ಡಾಂಬರ್ ರಸ್ತೆ ಮೇಲೆ ಸಿಮೆಂಟ್ ಕಾಮಗಾರಿ ನಡೆಯುತ್ತಿಲ್ಲ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗಿದೆ. ಅಕ್ರಮ ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
    | ಶಶಿಧರ ಕುರೇರ ಸ್ಮಾರ್ಟ್ ಸಿಟಿ ಎಂ.ಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts