More

  ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​ನಲ್ಲಿ ಕಾಣಿಸಿಕೊಂಡ ಮೊದಲ​ ಮಲಯಾಳಂ ಚಿತ್ರ ‘ಕಿಂಗ್​ ಆಫ್ ಕೋಥಾ’; ಸಂತಸ ವ್ಯಕ್ತಪಡಿಸಿದ ನಟ ದುಲ್ಕರ್​ ಸಲ್ಮಾನ್​

  ಕೇರಳ: ‘ಸೀತಾ ರಾಮಂ’ ಚಿತ್ರದ ಮೂಲಕ ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಇಂದು ಭಾರೀ ಸಂತಸದಲ್ಲಿದ್ದಾರೆ. ತಮ್ಮ ಖುಷಿಯ ಹಿಂದಿರುವ ಕಾರಣವನ್ನು ಇನ್​ಸ್ಟಾಗ್ರಾಮ್​ನಲ್ಲಿ ತಿಳಿಸುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: ಅರಸು ಬಡವರ ಪಾಲಿನ ಆಶಾಕಿರಣ

  ಮಲಯಾಳಂ ಭಾಷೆಯಲ್ಲಿ ಮೂಡಿಬರಲು ಸಜ್ಜಾಗಿರುವ, ದುಲ್ಕರ್​ ಅಭಿನಯದ ಬಹುನಿರೀಕ್ಷಿತ ‘ಕಿಂಗ್ ಆಫ್ ಕೋಥಾ’ ಚಿತ್ರದ ಬಗ್ಗೆ ಈ ಹಿಂದಿನಿಂದಲೂ ಸಾಕಷ್ಟು ಕುತೂಹಲಕಾರಿ ಸುದ್ದಿಗಳು ಹರಿದಾಡುತ್ತಿತ್ತು. ಇದೀಗ ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​ನಲ್ಲಿ ಪ್ರದರ್ಶನಗೊಂಡ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ. ಈ ಕುರಿತು ನಟ ದುಲ್ಕರ್​ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

  ‘ಕಿಂಗ್​ ಆಫ್​​ ಕೋಥಾ’ ಚಿತ್ರವು ಆಗಸ್ಟ್ 24, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಚಿತ್ರದಲ್ಲಿ ದುಲ್ಕರ್​ ಸಲ್ಮಾನ್​ಗೆ ನಟಿ ಐಶ್ವರ್ಯ ಲಕ್ಷ್ಮಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಗ್ಯಾಂಗ್​ಸ್ಟರ್​ ಸಿನಿಮಾ ಎಂದು ಹೇಳಲಾಗಿದ್ದು, ಚಿತ್ರದ ಟ್ರೇಲರ್​ ಇದೀಗ ನ್ಯೂಯಾರ್ಕ್‌ನ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶನ ಕಾಣುವ ಮುಖೇನ ಎಲ್ಲರ ಗಮನಸೆಳೆದಿದೆ.

  ಇದನ್ನೂ ಓದಿ: ಏಕದಿನ ವಿಶ್ವಕಪ್​ ವೇಳಾಪಟ್ಟಿಯಲ್ಲಿ ಮತ್ತೊಂದು ದೋಷ! ಈ ಬಾರಿ ಹೈದರಾಬಾದ್​ನಿಂದ ತಕರಾರು

  ಕಿಂಗ್​ ಆಫ್​ ಕೋಥಾ ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ಐಶ್ವರ್ಯ ಲಕ್ಷ್ಮಿ, ಚೆಂಬನ್ ವಿನೋದ್, ಶಬೀರ್, ನೈಲಾ ಉಷಾ, ಶಮ್ಮಿ ತಿಲಕನ್, ಶಾಂತಿ ಕೃಷ್ಣ, ಪ್ರಸನ್ನ, ಗೋಕುಲ್ ಸುರೇಶ್, ಅನಿಖಾ ಸುರೇಂದ್ರನ್, ಸರಣ್ ಶಕ್ತಿ ಸೇರಿದಂತೆ ದೊಡ್ಡ ತಾರಗಣವಿದೆ,(ಏಜೆನ್ಸೀಸ್).

  ಅಮ್ಮನೂ ಕನ್ನಡ ಕಲಿತು ಬರೆಯುವಂತೆ ಮಾಡಿದ ‘ಮುಂಗಾರು ಮಳೆ’ ನಟಿ ಪೂಜಾ ಗಾಂಧಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts