More

    ಬಾಕಿ ಮೂರು ತಿಂಗಳ ಮಾಸಾಶನ ಪಾವತಿಗೆ ಪಟ್ಟು: ಸಿರಗುಪ್ಪದಲ್ಲಿ ವಿಮುಕ್ತ ದೇವದಾಸಿಯರ ಪ್ರತಿಭಟನೆ

    ಸಿರಗುಪ್ಪ: ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಗುರುವಾರ ವಿಮುಕ್ತ ದೇವದಾಸಿಯರ ಸಂಘ ಪ್ರತಿಭಟನೆ ನಡೆಸಿತು.

    ಸಂಘದ ತಾಲೂಕು ಅಧ್ಯಕ್ಷೆ ಹುಲಿಗೆಮ್ಮ ಮಾತನಾಡಿ, ಜಿಲ್ಲೆಯಲ್ಲಿ 12 ಸಾವಿರಕ್ಕಿಂತ ಹೆಚ್ಚು ವಿಮುಕ್ತ ದೇವದಾಸಿಯರಿದ್ದಾರೆ. 2007-08ರಲ್ಲಿ ಸರ್ವೇ ಮಾಡಿದ್ದರೂ ಪ್ರತಿ ತಾಲೂಕಿನಲ್ಲಿ 5-6 ಹಳ್ಳಿಗಳನ್ನು ಸಮೀಕ್ಷಾ ಪಟ್ಟಿಯಿಂದ ಹೊರಗಿಡಲಾಗಿದೆ. ದೇವದಾಸಿ, ಮಕ್ಕಳ ಪುನರ್ವಸತಿಗಾಗಿ ಯೋಜನೆ ರೂಪಿಸಲು ಒಬ್ಬ ಅಧಿಕಾರಿಗೆ ಐದಾರು ಜಿಲ್ಲೆಗಳ ನೀಡಿದ್ದರಿಂದ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಮೂರು ತಿಂಗಳಿಂದ ಮಾಸಾಶನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಸಮಯದಲ್ಲಿ ಮಾಸಿಕ ನೀಡುವ 1500 ರೂ. ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ 5 ಸಾವಿರ ರೂ.ಗೆ ಹೆಚ್ಚಿಸಬೇಕು. ಪ್ರತಿ ತಿಂಗಳು ಖಾತೆಗೆ ಜಮೆ ಮಾಡಬೇಕು. ವಿಮುಕ್ತ ದೇವದಾಸಿಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಸರ್ಕಾರಿ ಉದ್ಯೋಗ ನೀಡಬೇಕು. ಕೃಷಿ ಮಾಡಲು ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ನೀಡಬೇಕು. ಹೆಣ್ಣು ಮಕ್ಕಳ ಶಿಕ್ಷಣ, ಮದುವೆಗೆ 10 ಲಕ್ಷ ರೂ. ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಹುಲಿಗೆಮ್ಮ, ಮೂಕಮ್ಮ, ಗಾಂಧಮ್ಮ, ಈರಮ್ಮ, ಗಾಂಧಾರಮ್ಮ, ಮುಖಂಡ ಅಡಿವೆಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts