More

    ಉತ್ತರಾಖಂಡದಲ್ಲಿ ಭಾರೀ ಮಳೆಯ ಹಿನ್ನಲೆ ಎರಡು ದಿನಗಳ ಕಾಲ ಚಾರ್ಧಾಮ್ ಯಾತ್ರೆ ಸ್ಥಗಿತ!

    ಉತ್ತರಾಖಂಡ: ಉತ್ತರಾಖಂಡದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆ ಇದೀಗ ಚಾರ್ಧಾಮ್ ಯಾತ್ರೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.

    ಇದನ್ನೂ ಓದಿ: ನರೇಗಾ ಕಾಮಗಾರಿಗಳ ಸ್ಥಳಗಳಲ್ಲಿ ಸ್ವಾತಂತ್ರ್ಯೋತ್ಸವದಂದು ವಿಶಿಷ್ಠ ಕಾರ್ಯಕ್ರಮಗಳು

    ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳು ಸೇರಿದಂತೆ ಹಲವೆಡೆ ಭೂಕುಸಿತ ಮತ್ತು ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಅನೇಕರು ಸಾವನ್ನಪ್ಪಿರುವ ಬಗ್ಗೆ ಇತ್ತೀಚಿನ ವರದಿಗಳು ಮಾಹಿತಿ ನೀಡಿವೆ. ಧಾರಾಕಾರ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಬದರೀನಾಥ್, ಕೇದಾರನಾಥ ಮತ್ತು ಗಂಗೋತ್ರಿ ದೇಗುಲಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಡಚಣೆ ಎದುರಾದ ಕಾರಣ ಚಾರ್ಧಾಮ್ ಯಾತ್ರೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: VIDEO| ಗದರ್​-2 ಸ್ಕ್ರೀನಿಂಗ್​ ವೇಳೆ ಪ್ರೇಕ್ಷಕನನ್ನು ಅಮಾನುಷವಾಗಿ ಥಳಿಸಿದ ಯುವಕ

    ಭಾರೀ ಮಳೆಯಿಂದಾಗಿ ಉತ್ತರಾಖಂಡದಲ್ಲಿ ಕಟ್ಟಡಗಳ ಕುಸಿತ ಮತ್ತು ಭೂಕುಸಿತಗಳು ಸಂಭವಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪರಿಸ್ಥಿತಿಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಚಾರ್ಧಾಮ್-ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಯಾತ್ರೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಮಳೆ ಮತ್ತು ಭೂಕುಸಿತದ ಪರಿಣಾಮ ಹೆಚ್ಚುತ್ತಿರುವ ಹಿನ್ನಲೆ ಹೆದ್ದಾರಿಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

    ‘ಬಡತನವೇ ಬೇರೆ, ಜಾತಿ ಆಧಾರಿತವಾದ ಸಾಮಾಜಿಕ ಅಸಮಾನತೆಯೇ ಬೇರೆ’: ಸಚಿವ ಎಚ್​.ಸಿ. ಮಹದೇವಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts