More

    ‘3 ಬಾರಿ ಪಾರ್ಶ್ವವಾಯು, ಒಮ್ಮೆ ಹೃದಯಾಘಾತ’ ಡ್ರಗ್ಸ್​ ಓವರ್​ಡೋಸ್​ನಿಂದಾಗಿದ್ದ ಸೈಡ್​ ಎಫೆಕ್ಟ್​ ಬಿಚ್ಚಿಟ್ಟ ನಟಿ

    ವಾಷಿಂಗ್ಟನ್​: ಸೆಲೆಬ್ರಿಟಿಗಳಲ್ಲಿ ಡ್ರಗ್ಸ್​ ಸೇವನೆ ವಿಚಾರ ಇಂದು ನಿನ್ನೆಯದಲ್ಲ. ಹಾಲಿವುಡ್​ನಲ್ಲಂತೂ ಡ್ರಗ್ಸ್​ ಸೇವನೆ ಹೆಚ್ಚೆನಿಸುವಷ್ಟೇ ಇದೆ. ಡ್ರಗ್ಸ್​ ಓವರ್​ಡೋಸ್​ ಮಾಡಿಕೊಂಡು ತಾನು ಅನುಭವಿಸಿದ ಸಂಕಷ್ಟವನ್ನು ಹಾಲಿವುಡ್​ನ ನಟಿಯೊಬ್ಬರು ಇದೀಗ ಸಾಮಾಜಿಕವಾಗಿ ಹೇಳಿಕೊಂಡಿದ್ದಾರೆ.

    ಹಾಲಿವುಡ್​ನ ನಟಿ ಹಾಗೂ ಗಾಯಕಿ ಡೆಮಿ ಲೊವಾಟೋ ಡ್ರಗ್ಸ್​ ವ್ಯಸನಕ್ಕೆ ಬಿದ್ದು, ಅದರಿಂದ ಸಾಕಷ್ಟು ನಷ್ಟ ಅನುಭವಿಸಿದ ನಂತರ ವ್ಯಸನದಿಂದ ಹೊರಬಂದವರು. 2018ರಲ್ಲಿ ಆಕೆಯ ಡ್ರಗ್ಸ್​ ಚಟ ಎಷ್ಟರ ಮಟ್ಟಿಗೆ ಹೆಚ್ಚಿತ್ತೆಂದರೆ ಯಾರೂ ಇಲ್ಲದ ಮನೆಯಲ್ಲಿ ಒಬ್ಬಳೇ ಡ್ರಗ್ಸ್​ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದಾದ ಮೇಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

    ಇತ್ತೀಚೆಗೆ ಖಾಸಗಿ ವಾಹಿನಿಯೊಂದರೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಅವರು ಡ್ರಗ್ಸ್​ ಓವರ್​ಡೋಸ್​ನಿಂದ ಅನುಭವಿಸಿದ ನರಕವನ್ನು ಹೇಳಿಕೊಂಡಿದ್ದಾರೆ. ಮೂರು ಪಾರ್ಶ್ವವಾಯು ಆಗಿತ್ತು, ಒಮ್ಮೆ ಹೃದಯಾಘಾತವಾಯಿತು. ವೈದ್ಯರು ಇನ್ನು ಕೇವಲ ಐದುರಿಂದ 10 ನಿಮಿಷ ಬದುಕಿರುತ್ತೀರಿ ಎಂದು ಹೇಳಿದ್ದರು ಎಂದು ಲೊವಾಟೋ ಹೇಳಿದ್ದಾರೆ. ನನ್ನ ತಪ್ಪಿನ ಹೆಜ್ಜೆಗಳು ನನ್ನ ಬದುಕಿಗೆ ಒಂದು ಪಾಠ ಕೊಟ್ಟಿವೆ. ಆ ಚಟವನ್ನು ಬಿಟ್ಟ ನಂತರ ನಾನು ಬದುಕುತ್ತಿರುವ ಬದುಕನ್ನು ಮತ್ತೆ ಬದಲಾಯಿಸುವ ಯೋಚನೆಯನ್ನೂ ಮಾಡುವುದಿಲ್ಲ. ಆ ಚಟದಿಂದ ಇಂದಿಗೂ ನಾನು ಕೆಲವು ನೋವುಗಳನ್ನು ಅನುಭವಿಸುತ್ತಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾರೆ. (ಏಜನ್ಸೀಸ್​)

    ಯುವಿ​ ದಾಖಲೆ ಮುರಿದ ಕ್ರಿಸ್​ ಮೋರಿಸ್​! ದಾಖಲೆಯ ಮೌಲ್ಯಕ್ಕೆ ಬಿಡ್​ ಆದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ

    ಜೀವನಪೂರ್ತಿ ಜತೆಯಿರುವ ಕನಸು ಕಂಡವರು ಒಟ್ಟಿಗೇ ಜಲಸಮಾಧಿಯಾದರು…! ಕಣ್ಣೀರು ತರಿಸುವ ಕಥೆಯಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts