More

    ಬೆಂಗಳೂರಿನಲ್ಲಿ ಡ್ರಗ್ಸ್​ ಫ್ಯಾಕ್ಟರಿ ಪತ್ತೆ! ಮನೆಯಲ್ಲೇ ತಯಾರಿಸಿ ವಿವಿಧೆಡೆಗೆ ಸಪ್ಲೈ ಮಾಡ್ತಿದ್ದ ವಿದೇಶೀ ಪ್ರಜೆ!

    ಬೆಂಗಳೂರು: ಈವರೆಗೆ ಹಲವಾರು ಡ್ರಗ್ಸ್ ಪೆಡ್ಲರ್​​ಗಳನ್ನು ಮತ್ತು ಡೀಲರ್​​ಗಳನ್ನು ಅರೆಸ್ಟ್ ಮಾಡಿರುವ ಬೆಂಗಳೂರು ಪೊಲೀಸರು, ಇದೀಗ ಮೊಟ್ಟಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್​ ಫ್ಯಾಕ್ಟರಿಯೊಂದನ್ನು ಪತ್ತೆ ಹಚ್ಚಿದ್ದಾರೆ. ವಿದೇಶಿ ಪ್ರಜೆಯೊಬ್ಬ ಬಾಡಿಗೆ ಮನೆಯಲ್ಲಿ ತೆರೆದಿದ್ದ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿ ಮೇಲೆ ಇಂದು ಸಿಸಿಬಿ ತಂಡ ದಾಳಿ ನಡೆಸಿದೆ ಎಂದು ಪೊಲೀಸ್​ ಕಮಿಷನರ್​ ಕಮಲ್​ ಪಂತ್​ ತಿಳಿಸಿದ್ದಾರೆ.

    ವಿದೇಶದಲ್ಲಿ ತಯಾರಾಗ್ತಿದ್ದ ಸಿಂಥಟಿಕ್ ಡ್ರಗ್ಸ್ಅನ್ನು ನೈಜೀರಿಯಾ ಮೂಲದ ಡೇವಿಡ್ ಜಾನ್​ ಎಂಬುವವನು ನಗರದ ಎಲೆಕ್ಟ್ರಾನಿಕ್​ ಸಿಟಿಯಲ್ಲಿನ ತನ್ನ ಬಾಡಿಗೆ ಮನೆಯಲ್ಲಿ ತಯಾರಿಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ಹಿಂದೆ ಅರೆಸ್ಟ್​ ಆಗಿದ್ದ ಡ್ರಗ್ಸ್​ ಪೆಡ್ಲರ್​ ನೀಡಿದ್ದ ಸಂಪರ್ಕ ವಿವರಗಳನ್ನು ಆಧರಿಸಿ ಜಾನ್​ ದುಷ್ಕೃತ್ಯಗಳ ಬಗ್ಗೆ ಬೆಂಗಳೂರು ಪೊಲೀಸರು ಮಾಹಿತಿ ಕಲೆ ಹಾಕಿ, ಇಂದು ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ಹುಟ್ಟುಹಬ್ಬದಂದೇ ಕಾದುಕುಳಿತಿದ್ದ ಜವರಾಯ! ಕೇಕ್‌ ಕಟ್ ಮಾಡುವಷ್ಟರಲ್ಲೇ ಪುಟಾಣಿಯ ಜೀವ ಹೋಯ್ತು

    ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಯಸ್ಸಾದ ದಂಪತಿಯಿಂದ ಮನೆ ಬಾಡಿಗೆಗೆ ಪಡೆದು, ಮನೆಯನ್ನೇ ಡ್ರಗ್ಸ್ ಫ್ಯಾಕ್ಟರಿಯಂತೆ ತಯಾರು ಮಾಡಿಕೊಂಡಿದ್ದ, ಜಾನ್​. ಐದು ಮಾದರಿಯ ವಿವಿಧ ಕೆಮಿಕಲ್ ಬಳಸಿ ಎಂಡಿಎಂಎ ಕ್ರಿಸ್ಟಲ್ ಎಂಬ ಫೈನ್ ಕ್ವಾಲಿಟಿ ಡ್ರಗ್ಸ್ ತಯಾರು ಮಾಡುತ್ತಿದ್ದ. ನಂತರ ಅದನ್ನು ಶೂಗಳಲ್ಲಿ ಅಡಗಿಸಿಟ್ಟು ನಗರದಲ್ಲಷ್ಟೇ ಅಲ್ಲ, ಬೇರೆ ಬೇರೆ ರಾಜ್ಯ ಹಾಗೂ ದೇಶಗಳಿಗೂ ರವಾನೆ ಮಾಡುತ್ತಿದ್ದ ಎನ್ನಲಾಗಿದೆ.

    ಸಿಸಿಬಿ ಆ್ಯಂಟಿ-ನಾರ್ಕೊಟಿಕ್ಸ್ ವಿಭಾಗದ ಎಸಿಪಿ ನೇತೃತ್ವದಲ್ಲಿ ಈ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಲಾಯಿತು. ದಾಳಿ ವೇಳೆ 5 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ವಶಕ್ಕೆ ಪಡೆಯಲಾಯಿತು. ಡ್ರಗ್ಸ್ ತಯಾರಿಗೆ ಬಳಸುತ್ತಿದ್ದ ಆ್ಯಸಿಡ್ ಹಾಗೂ ಇತರ ಕೋಟ್ಯಾಂತರ ರೂ. ಮೌಲ್ಯದ ಕೆಮಿಕಲ್​ಗಳನ್ನು ವಶಕ್ಕೆ ಪಡೆಯಲಾಯಿತು. ಸದ್ಯ, ಆರೋಪಿ ಜಾನ್​​ನನ್ನು ಬಂಧಿಸಿ, ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಕಮಿಷನರ್​ ಪಂತ್ ತಿಳಿಸಿದ್ದಾರೆ.

    ಇದನ್ನೂ ಓದಿ: ಮೈಸೂರು ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ

    ಡ್ರಗ್ಸ್ ಮಾರಾಟಕ್ಕೆ ಐನಾತಿ ಐಡಿಯ: ತಾನು ತಯಾರಿಸಿದ ಡ್ರಗ್ಸ್ಅನ್ನು ಆರೋಪಿ ಜಾನ್​ ನೈಕಿ ಶೂನಲ್ಲಿಟ್ಟು ಮಾರಾಟ ಮಾಡುತ್ತಿದ್ದ. ನೋಡಕ್ಕೆ ಸ್ಪೋರ್ಟ್ಸ್ ಶೂ ತರಹ ಕಂಡ್ರೂ ಅದರ ಒಳಗೆ ಎಂಡಿಎಂ ಮಾತ್ರೆ ಇರುತ್ತಿತ್ತು. ಇದಕ್ಕಾಗಿ ಹೈಹೀಲ್ಡ್​ ಶೂಗಳನ್ನೂ ಖರೀದಿ ಮಾಡುತ್ತಿದ್ದರು. ಇದೇ ರೀತಿ ಶೂ ಮೂಲಕ ಹೊರ ರಾಜ್ಯ, ಹೊರದೇಶಕ್ಕೂ ಡ್ರಗ್ಸ್ ಸಪ್ಲೈ ಮಾಡ್ತಿದ್ದರು ಎಂದು ಜಾನ್ ವಿಚಾರಣೆ ವೇಳೆ ತಿಳಿದುಬಂದಿದೆ.

    ನಟ ಸೋನು ಸೂದ್ ಮನೆಗೆ ಐಟಿ ಅಧಿಕಾರಿಗಳು!

    ಎರಡು ತಿಂಗಳಲ್ಲಿ ಕಸಾಪ ಚುನಾವಣೆ ನಡೆಸಲು ಹೈಕೋರ್ಟ್​ ಆದೇಶ

    ಬ್ಯಾಂಕ್​ ಖಾತೆಗೆ ತಪ್ಪಾಗಿ ಬಂದ ಲಕ್ಷಗಟ್ಟಲೇ ಹಣ… ಪ್ರಧಾನಿ ಮೋದಿ ಕಳ್ಸಿರೋದು ಎಂದ ಖಾತೆದಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts