More

    ಡ್ರಗ್ಸ್​ ಕೇಸ್​: ‘ಬ್ರಹ್ಮಗಂಟು’ ಖ್ಯಾತಿಯ ಗೀತಾ, ‘ಗಟ್ಟಿಮೇಳ’ದ ವಿಕ್ರಾಂತ್​ಗೆ ಐಎಸ್​ಡಿ ಡ್ರಿಲ್​

    ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಮಾಫಿಯಾ ನಂಟಿನ ಪ್ರಕರಣ ಬಗೆದಷ್ಟು ಆಳ ಎಂಬಂತಾಗುತ್ತಿದೆ. ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಬಂಧನ ಬಳಿಕ ಐಂದ್ರಿತಾ ರೇ-ದಿಗಂತ್​ ದಂಪತಿ, ಅಕುಲ್​ಬಾಲಾಜಿ, ಸಂತೋಷ್​ಕುಮಾರ್​ ಸೇರಿದಂತೆ ಹಲವರು ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ಇದೀಗ ಧಾರಾವಾಹಿ ನಟ-ನಟಿಯರ ಸರದಿ ಶುರುವಾಗಿದೆ.

    ಹೌದು, ಡ್ರಗ್ಸ್​ ಕೇಸ್​ನಲ್ಲಿ ಕಿರುತೆರೆಯ ನಟ-ನಟಿಯರು, ಸಹನಟಿಯರ ಭಾಗಿ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬಂಧಿತ ಡ್ರಗ್ಸ್​ ಪೆಡ್ಲರ್​ಗಳ ಮಾಹಿತಿ ಆಧರಿಸಿ ಈಗಾಗಲೇ ಐಎಸ್​ಡಿ ಅಧಿಕಾರಿಗಳು ಕಿರುತೆರೆ ನಟಿ ಗೀತಾ ಭಾರತಿ ಭಟ್ ಮತ್ತು ಸಹ ನಟ ಅಭಿಷೇಕ್​ಗೆ ಮಂಗಳವಾರ ಬೆಳಗ್ಗೆ 10ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿತ್ತು. ಇದನ್ನೂ ಓದಿರಿ ಡ್ರಗ್ಸ್​ ಕೇಸ್​​: ಐಎಸ್​ಡಿಯಿಂದ ಲೂಸ್ ಮಾದ ಯೋಗಿ, ಕ್ರಿಕೆಟರ್​ ಅಯ್ಯಪ್ಪ ಮತ್ತು ಕಿರುತೆರೆ ನಟಿಯ ವಿಚಾರಣೆ

    ‘ಬ್ರಹ್ಮಗಂಟು’ ಧಾರಾವಾಹಿಯ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಗೀತಾ ಭಾರತಿ ಭಟ್, ಐಎಸ್​ಡಿ ನೋಟಿಸ್​ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ವಿಚಾರಣೆಗೆ ಹಾಜರಾದರು. ಈ ವೇಳೆ ಮಾಧ್ಯಮಗಳ ಬಳಿ ಮಾತಾಡಿದ ಗೀತಾ, ‘ನಾನು ಅಪರಾಧಿಯಲ್ಲ, ನಾನು ತಪ್ಪು ಮಾಡಿಲ್ಲ’ ಎಂದರು.

    ‘ಗಟ್ಟಿಮೇಳ’ ಸೀರಿಲ್​ನಲ್ಲಿ ವಿಕ್ರಾಂತ್ ರೋಲ್ ಪ್ಲೇ ಮಾಡ್ತಿರೋ ಅಭಿಷೇಕ್, ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿದ್ದರು. ಐಎಸ್​ಡಿ ನೋಟಿಸ್​ ಕೊಟ್ಟಿರುವ ಬಗ್ಗೆ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಅಭಿಷೇಕ್​, ‘ನೋಟಿಸ್ ಬಂದಿದೆ. ವಿಚಾರಣೆಗೆ ಕರೆದಿದ್ದಾರೆ. ಸದ್ಯ ಶೂಟಿಂಗ್​ನಲ್ಲಿದ್ದೀನಿ. ಹೋಗುವೆ’ ಎಂದಿದ್ದರು. ಬೆಳಗ್ಗೆ 11ರ ಸುಮಾರಿಗೆ ವಿಚಾರಣೆಗೆ ಹಾಜರ್​ ಆದರು. ಇವರಿಬ್ಬರಿಗೂ ಶಾಂತಿನಗರದ ಐಎಸ್​ಡಿ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.

    ಸಿಸಿಬಿ ಕಚೇರಿಗೆ ಬಂದ ಅಕುಲ್, ಕರ್ನಾಟಕದ ಜನತೆಗೆ ನಮಸ್ಕಾರಗಳು… ಎನ್ನುತ್ತ ಸ್ಫೋಟಕ ಮಾಹಿತಿ ಹೊರಹಾಕಿದ್ರು

    ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts