More

    ಮಾದಕ ವಸ್ತು ದಹನ

    ಅಂಕೋಲಾ: ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ ವಶಪಡಿಸಿಕೊಂಡಿದ್ದ ಗಾಂಜಾ, ಚರಸ್ ಸೇರಿ ಒಟ್ಟು 24.80 ಲಕ್ಷ ರೂ.ಮೌಲ್ಯದ ಮಾದಕ ವಸ್ತುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ನೇತೃತ್ವದಲ್ಲಿ ತಾಲೂಕಿನ ಬೊಗ್ರಿಬೈಲ್​ನ ಕೆನರಾ ಐಎಂಎ ಘಟಕದಲ್ಲಿ ಶನಿವಾರ ದಹಿಸಲಾಯಿತು.

    ಠಾಣಾವಾರು ಪ್ರಕರಣಗಳ ಮಾಹಿತಿ: ಕಾರವಾರ ಉಪವಿಭಾಗದ ಕಾರವಾರ ನಗರದಲ್ಲಿ 6 ಪ್ರಕರಣ, ಗ್ರಾಮೀಣ 1, ಅಂಕೋಲಾ 5, ಭಟ್ಕಳ ಉಪವಿಭಾಗದ ಭಟ್ಕಳ ಶಹರ 1, ಗ್ರಾಮೀಣ 3, ಮುರುಡೇಶ್ವರ 1, ಹೊನ್ನಾವರ 1, ಕುಮಟಾ 1, ಗೋಕರ್ಣ 8, ಶಿರಸಿ ಉಪವಿಭಾಗದ ಶಿರಸಿ ಶಹರ 5, ಗ್ರಾಮೀಣ 6, ಹೊಸ ಮಾರುಕಟ್ಟೆ 5, ಬನವಾಸಿ 5, ಮುಂಡಗೋಡ 2, ಸಿದ್ದಾಪುರ 1, ಯಲ್ಲಾಪುರ 10, ದಾಂಡೇಲಿ ಉಪವಿಭಾಗದ ರಾಮನಗರ 1, ಹಳಿಯಾಳ 9, ದಾಂಡೇಲಿ ನಗರ 6, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಡು ಪ್ರಕರಣಗಳು ದಾಖಲಾಗಿದ್ದವು.

    12 ತಾಲೂಕಿನಲ್ಲಿ 79 ಪ್ರಕರಣ: ಉತ್ತರ ಕನ್ನಡ ಜಿಲ್ಲೆಯ 12 ತಾಲೂಕಿನಲ್ಲಿ 2018ರ ನವೆಂಬರ್ 12ರಿಂದ ಈವರೆಗೆ ಪೊಲೀಸರು ಒಟ್ಟು 79 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 69 ಪ್ರಕರಣಗಳಲ್ಲಿ 19,04,600 ರೂ. ಮೌಲ್ಯದ 88.905 ಕೆ.ಜಿ. ಗಾಂಜಾ, 3 ಪ್ರಕರಣಗಳಲ್ಲಿ 2,55,000 ರೂ. ಮೌಲ್ಯದ 504 ಗ್ರಾಂ. ಚರಸ್ ಮತ್ತು 7 ಪ್ರಕರಣಗಳಲ್ಲಿ 3,21,000 ರೂ. ಮೌಲ್ಯದ 341 ಗಾಂಜಾ ಗಿಡಗಳನ್ನು ತಾಲೂಕಿನ ಅಲಗೇರಿ ಗ್ರಾಪಂ ವ್ಯಾಪ್ತಿಯ ಬೊಗ್ರಿಬೈಲ್​ನ ಕೆನರಾ ಐ.ಎಂ.ಎ.(ಯು.ಕೆ.) ಕಾನ್ ಟ್ರೀಟ್​ವೆುಂಟ್ ಫೆಸಿಲಿಟಿರವರ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.

    ಈ ವೇಳೆ ಪಿಎಸ್​ಐಗಳಾದ ಪ್ರವೀಣ ಕುಮಾರ ಆರ್., ಪ್ರೇಮನಗೌಡ, ಡಿಸಿಆರ್​ಬಿಯ ಎಎಸ್​ಐ ಉದಯ ನಾಯ್ಕ, ಸಿಬ್ಬಂದಿ ನಾಗೇಶ ಹರಿಕಂತ್ರ, ಪ್ರವೀಣ, ಶಂಕರ ಖಾರ್ವಿ, ಆಸೀಫ್ ಕುಂಕೂರು, ಚಂದ್ರಕಾಂತ ಗೌಡ, ಕಂದಾಯ ನಿರೀಕ್ಷಕ ರಾಘವೇಂದ್ರ ಜನ್ನು, ಗ್ರಾಮ ಲೆಕ್ಕಿಗ ಭಾರ್ಗವ ನಾಯಕ, ವಿಲೇವಾರಿ ಘಟಕದ ವ್ಯವಸ್ಥಾಪಕ ಪವೀಣ ಕಾಂಬಳೆ, ಮೇಲ್ವಿಚಾರಕ ಪ್ರಸನ್ನ ನಾಯ್ಕ ಇತರರು ಇದ್ದರು.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಸಂಗ್ರಹದ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಕೆಲವು ತಾಲೂಕುಗಳಲ್ಲಿ ಹೆಚ್ಚು ಪ್ರಕರಣವಾದರೆ ಇನ್ನು ಕೆಲವು ತಾಲೂಕುಗಳಲ್ಲಿ ಕಡಿಮೆ ಇವೆ. ಅಪರಾಧ ಕೃತ್ಯದಲ್ಲಿ ಯಾರೇ ಪಾಲ್ಗೊಂಡರೂ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

    | ಶಿವಪ್ರಕಾಶ ದೇವರಾಜು, ಎಸ್ಪಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts