More

    ಮಾದಕ ವ್ಯಸನ ದೇಶಕ್ಕೆ ಅಪಾಯಕಾರಿ


    ಕೊಡಗು: ಯುವ ಸಮೂಹ ಡ್ರಗ್ ತ್ಯಜಿಸಿ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಸಮಾಜ ಸೇವಕ ಚೋಡುಮಾಡ ಶ್ಯಾಂ ಪೂಣಚ್ಚ ಹೇಳಿದರು.
    ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಸರ್ಕಾರಿ ಕನ್ನಡ ಮಾಧ್ಯಮ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪತ್ರಕರ್ತರ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು.


    ಯುವ ಸಮೂಹ ಮಾದಕ ವ್ಯಸನಿಗಳಾಗುತ್ತಿರುವುದು ಆತಂಕಕಾರಿ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಉತ್ತಮ ಪ್ರಜೆಗಳಾಗಲು ಕ್ರೀಡೆ ಸಹಕಾರಿ. ಬಾಲ್ಯದಿಂದ ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಜೀವನದುದ್ದಕ್ಕೂ ಉತ್ತಮ ಬಾಂಧವ್ಯ ಕಾಣಬಹುದಾಗಿದೆ ಎಂದರು.


    ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜಕ್ಕೆ ಮಾಧ್ಯಮದ ಕೊಡುಗೆ ಮುಖ್ಯ. ದೇವಿ ಆರಾಧನೆಯ ದಸರಾ ಆಚರಣೆಗೆ ಎಲ್ಲರ ಸಹಕಾರ ಮುಖ್ಯ ಎಂದರು.


    ಹಗ್ಗಜಗ್ಗಾಟ, ಬೌಲ್ ಮಾಡಿ ಕಪ್ ಗೆಲ್ಲಿ, ತೆಂಗಿನಕಾಯಿ ಒಡೆಯುವುದು, ಭಾರದ ಗುಂಡು ಎಸೆತ, ಗೋಣಿಚೀಲ ಓಟ ಸ್ಪರ್ಧೆಗಳಲ್ಲಿ ಪತ್ರಕರ್ತರು ಪಾಲ್ಗೊಂಡರು. ಪೊನ್ನಂಪೇಟೆ ತಾಲೂಕು ದಿವ್ಯಾಂಗ ಒಕ್ಕೂಟದ ಅಧ್ಯಕ್ಷ ಕಾರೇಟೀರ ಗಣೇಶ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts