More

    ಹೈನೋದ್ಯಮದ ಮೇಲೆಯೂ ಬರಗಾಲ ಪ್ರಭಾವ ಹಾಲು ಉತ್ಪಾದನೆಯಲ್ಲಿ 10 ಲಕ್ಷ ಲೀಟರ್ ಕೊರತೆ

    ಬೆಂಗಳೂರು:
    ಬರಗಾಲದ ಈ ಬಾರಿ ಕೆಎಂಎ್ ಮೇಲೂ ಪ್ರಭಾವ ಬೀರಿದ್ದು, ಹಾಲು ಉತ್ಪಾದನೆಯಲ್ಲಿ ಸರಾಸರಿ 10 ಲಕ್ಷ ಲೀಟರ್ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗರಿಷ್ಠ 95 ಲಕ್ಷ ಲೀಟರ್ ಹಾಲು ಸಂಗ್ರಹಿಸಿದ್ದು ಸಂಸ್ಥೆಯ ಇತಿಹಾಸದಲ್ಲಿ ಸರ್ವಕಾಲಿಕ ದಾಖಲೆಯಾಗಿತ್ತು. ಈ ವರ್ಷ 85 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.
    ಮಳೆಗಾಲದಲ್ಲಿ ಸಮೃದ್ಧವಾಗಿ ಹಾಲು ಉತ್ಪಾದನೆ ಸಹಜವಾಗಿಯೇ ಹೆಚ್ಚಳವಾಗುತ್ತಿತ್ತು. ಹೆಚ್ಚುವರಿ ಹಾಲು ಉತ್ಪಾದನೆಯನ್ನು ತಡೆಯುವ ಸಲುವಾಗಿಯೇ ಹಾಲು ಒಕ್ಕೂಟಗಳು ಖರೀದಿ ದರವನ್ನು ಇಳಿಕೆ ಮಾಡಿಬಿಡುತ್ತಿದ್ದವು.
    ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರಗಾಲದ ವಾತಾವರಣ ನಿರ್ಮಾಣಗೊಂಡಿದ್ದು, ಹೈನೋದ್ಯಮವೂ ಸಂಕಷ್ಟದಲ್ಲಿ ತತ್ತರಿಸಿ ಹೋಗಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಆಗುವ ಸಾಧ್ಯತೆಗಳು ಇಲ್ಲ ಎಂದು ಕೆಎಂಎ್ ಅಧಿಕಾರಿಗಳು ಅಂದಾಜಿಸಿದ್ದು, ಅದಕ್ಕಾಗಿ ಈ ವರ್ಷದ ಪ್ಲಾನಿಂಗ್‌ನಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದಾರೆ.

    ಹಾಲಿನ ಪೌಡರ್ ಸ್ಟಾಕ್
    ಪ್ರತಿ ನಿತ್ಯ ಸಂಗ್ರಹವಾಗುವ ಹಾಲಿನಲ್ಲಿ ಮಾರಾಟವಾಗಿ ಹೆಚ್ಚುವರಿಯಾಗಿ ಉಳಿಯುವ ಹಾಲನ್ನು ಉಪ ಉತ್ಪನ್ನಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಪೈಕಿ ಅತಿ ಹೆಚ್ಚಿನ ಪ್ರಮಾಣದ ಹಾಲನ್ನು ಪೌಡರ್ ಮಾಡಿ ಶೇಖರಿಸಿಡಲಾಗುತ್ತಿತ್ತು. ಈ ಪೌಡರ್ ಕ್ಷೀರಭಾಗ್ಯಕ್ಕೆ ಬಳಕೆ ಮಾಡಿದ್ದಲ್ಲದೆ, ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಕೆಎಂಎ್ ಕ್ರಮ ವಹಿಸುತ್ತಿತ್ತು. ಈ ಬಾರಿ ಹಾಲಿನ ಪೌಡರ್ ಮಾರಾಟ ಮಾಡುವ ಬದಲು ಶೇಖರಿಸಿಟ್ಟುಕೊಳ್ಳಲು ಕೆಎಂಎ್ ಮುಂದಾಗಿದೆ.

    ಹಾಲು ಉತ್ಪನ್ನಗಳಿಗೆ ಬೇಡಿಕೆ
    ನಂದಿನಿ ಹಾಲಿನ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಮೊಸರು, ಸಿಹಿ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕಾರಣ ಎಂದಿನಂತೆಯೇ ಕ್ರಮ ವಹಿಸಲಾಗಿದೆ.ಹಾಲಿನ ಪೌಡರ್‌ಗೆ ಮಾರುಕಟ್ಟೆಯಲ್ಲಿ ಕೆಜಿಗೆ 240 ರೂ ಇದೆ. ಈ ದರ 300 ರೂ ಹತ್ತಿರ ಬಂದರೆ ಮಾತ್ರ ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಕೆಎಂಎ್ ಯೋಜಿಸಿದೆ. ಅಲ್ಲಿಯ ತನಕ ಗೋದಾಮಿನಲ್ಲಿ ಶೇಖರಣೆ ಮಾಡಿಕೊಳ್ಳಲು ನಿರ್ಧರಿಸಿದೆ.

    28.27 ಕೋಟಿ ಪಾವತಿ
    ದೇಶದಲ್ಲಿ ಎರಡನೇ ಅತಿ ದೊಡ್ಡ ಹೈನೋದ್ಯಮ ಸಹಕಾರ ಸಂಸ್ಥೆಯಾಗಿರುವ ಕೆಎಂಎ್
    ಪ್ರತಿ ದಿ ರೈತರಿಗೆ 28.27 ಕೋಟಿ ಹಣವನ್ನು ಪಾವತಿ ಮಾಡುತ್ತಿದೆ. ಹಾಲು ಒಕ್ಕೂಟಗಳು 233
    ಕೋಟಿ ರೂ ಧನಸಹಾಯ ಮಾಡುತ್ತಿದ್ದು, ಇನ್ನು ಮೂರು ವರ್ಷಗಳಲ್ಲಿ 300 ಕೋಟಿಗಳಿಗೆ ಹೆಚ್ಚಿಸಲು ಕೆಎಂಎ್ ಯೋಜಿಸಿದೆ.

    *ಬರಗಾಲದ ಹಿನ್ನೆಲೆಯಲ್ಲಿ ಹಾಲು ಉತ್ಪಾದನೆಯಲ್ಲಿಯೂ ಈ ಬಾರಿ ಕೊರತೆಯಾಗಿದೆ. ಮುಂದೆ ಸಮಸ್ಯೆ ಎದುರಾಗದಂತೆ ಈಗಲೇ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ.
    ಜಗದೀಶ್, ಎಂಡಿ, ಕೆಎಂಎ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts