More

    ನೆಲಕಚ್ಚಲಿವೆ ಕೈ,ಜೆಡಿಎಸ್: ನಳಿನ್‌ಕುಮಾರ್ ಕಟೀಲ್ ಭವಿಷ್ಯ

    ಶಿರಾ; ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಿರುಗಾಳಿ ಎದ್ದಿದೆ, ಈ ಅಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೆಲಕಚ್ಚುತ್ತವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.

    ಶಿರಾ ತಾಲೂಕು ಬಾಲೆನಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬೂತ್‌ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಶಿರಾದಲ್ಲಿ ಕಮಲ ಅರಳಿಸುವ ಸಂಕಲ್ಪೃ ಸಭೆ ಇದಾಗಿದೆ ಎಂದರು.

    ಕಳೆದ ಆರು ವರ್ಷಗಳಲ್ಲಿ ರಾಜ್ಯವು ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ, ಅದರಲ್ಲಿ ಒಬ್ಬರು ಜನರ ಕಣ್ಣಲ್ಲಿ ನೀರು ಹಾಕಿಸಿದರು. ಇನ್ನೊಬ್ಬರು ಅಧಿಕಾರ ಸಿಕ್ಕಾಗ ಸಭೆಗಳಲ್ಲಿ ಕಣ್ಣೀರು ಹಾಕಿ ಅಧಿಕಾರ ಕಳೆದುಕೊಂಡಾಗ ಮನೆಗಳಲ್ಲಿ ಕಣ್ಣೀರು ಹಾಕಿದರು. ಜನರ ಕಣ್ಣೀರು ಒರೆಸಿದ ಸಿಎಂ ಆಗಿ ಯಡಿಯೂರಪ್ಪ ಬೆಳಕಿಗೆ ಬಂದಿದ್ದಾರೆ ಎಂದರು.

    ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳ ಆತ್ಮಹತ್ಯೆ ನಡೆಯಿತು, 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಲಾಯಿತು. ಕರುಣೆ ಇ್ಲದ ಸಿಎಂ ಅಂದರೆ ಅದು ಸಿದ್ದರಾಮಯ್ಯ. ಎಚ್.ಡಿ.ಕುಮಾರಸ್ವಾಮಿ ಒಂದು ವರ್ಷ ತಾಜ್ ಹೋಟೆಲ್‌ನಿಂದ ಹೊರಗೆ ಬರಲೇ ಇ್ಲ ಎಂದು ವ್ಯಂಗ್ಯವಾಡಿದರು.

    ಮೊದಲು ಭಾರತವನ್ನು ಅಮೆರಿಕ ಮಾಡುತ್ತೇವೆ ಎನ್ನುತ್ತಿದ್ದರು. ಈಗ ಭಾರತದ ರೀತಿ ನಾವು ಮಾಡುತ್ತೇವೆ ಒಂದು ಅವಕಾಶ ಕೊಡಿ ಎಂದು ಅಮೆರಿಕದಲ್ಲಿ ಅಲ್ಲಿನ ರಾಜಕೀಯ ಪಕ್ಷಗಳು ಹೇಳತೊಡಗಿವೆ. ಅಮೆರಿಕ ಚುನಾವಣೆಯ ಕೇಂದ್ರ ಬಿಂದು ನರೇಂದ್ರ ಮೋದಿ ಆಗಿದ್ದಾರೆ ಎಂದರು. ಯಡಿಯೂರಪ್ಪ ಸಿಎಂ ಆಗಬಾರದೆಂದು ಅಪವಿತ್ರ ಒಳ ಒಪ್ಪಂದ ವಾಡಿಕೊಂಡ ಜೆಡಿಎಸ್, ಕಾಂಗ್ರೆಸ್ ಒಂದೇ ವರ್ಷದಲ್ಲಿ ಅಧಿಕಾರ ಕಳೆದುಕೊಂಡು ಕಡೆಗೂ ನಮ್ಮ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು ರೈತರಿಗೆ ಸಂತಸ ತಂದಿದೆ ಎಂದರು.
    ಬರಗೂರು ಹಾಗೂ ನಾದೂರು ಮಹಾಶಕ್ತಿ ಕೇಂದ್ರಗಳ ಬೂತ್ ಸಮಿತಿಗಳ ಸಭೆಯನ್ನು ಬರಗೂರಿನಲ್ಲಿ ಉದ್ಘಾಟಿಸಲಾಯಿತು. ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ಮೈಸೂರು ಸಂಸದ ಪ್ರತಾಪ್‌ಸಿಂಹ, ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುವಾರ್,ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಶಾಸಕ ಜಿ.ಬಿ.ಜ್ಯೋತಿಗಣೇಶ್ ಇದ್ದರು.

    ಡಾ.ರಾಜೇಶ್‌ಗೌಡ ಬಿಜೆಪಿಗೆ: ತೀವ್ರ ಕುತೂಹಲ ಮೂಡಿಸಿದ್ದ ಡಾ.ರಾಜೇಶ್‌ಗೌಡ ರಾಜಕೀಯ ನಡೆಗೆ ುಲ್‌ಸ್ಟಾಪ್ ಬಿದ್ದಿದೆ. ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಅ.3ರಂದು ರಾಜೇಶ್‌ಗೌಡ ಬಿಜೆಪಿ ಸದಸ್ಯತ್ವ ಪಡೆಯಲಿದ್ದಾರೆ. ಬಿಜೆಪಿ ಸ್ಥಳೀಯ ಮುಖಂಡರ ವಿರೋಧದ ಕಾರಣದಿಂದ ಬಿಜೆಪಿ ರಾಜ್ಯಾಧ್ಯಕ್ಷರು ಕ್ಷೇತ್ರದಲ್ಲಿದ್ದರೂ ಜನರ ಮಧ್ಯೆ ಪಕ್ಷ ಸೇರ್ಪಡೆಯಾಗದೆ ಬೆಂಗಳೂರಿನಲ್ಲಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಹೊರಗಿನವರಿಗೆ ಟಿಕೆಟ್ ನೀಡಿದರೆ ನಾವು ಚುನಾವಣೆಯಿಂದ ದೂರ ಉಳಿಯುವುದಾಗಿ ಈಗಾಗಲೇ ಬಿ.ಕೆ.ಮಂಜುನಾಥ್ ಹಾಗೂ ಎಸ್.ಆರ್.ಗೌಡ ಹೇಳಿಕೆ ನೀಡಿದ್ದು ಮುಂದಿನ ರಾಜಕೀಯ ಚಟುವಟಿಕೆ ತೀವ್ರ ಕುತೂಹಲ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts